ಹೊಸ ವರ್ಷಕ್ಕೆ ಮಹೀಂದ್ರ ಮಗದೊಂದು ಗಿಫ್ಟ್

Written By:

ಹೊಸ ವರುಷದಲ್ಲಿ ಅತಿ ನೂತನ ಕೆಯುವಿ100 ಬಿಡುಗಡೆ ಮಾಡುವುದಾಗಿ ಘೋಷಿಸಿರುವ ದೇಶದ ಕ್ರೀಡಾ ಬಳಕೆಯ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ವಾಹನ ಪ್ರೇಮಿಗಳಿಗಾಗಿ ಮಗದೊಂದು ಕೊಡುಗೆಯೊಂದಿಗೆ ಮುಂದೆ ಬಂದಿದೆ.

ನಿಮ್ಮ ಕಾತರಕ್ಕೆ ಇದೇ ಕೊನೆ, ಹೌದು ಎಲ್ಲ ಹೊಸತನದ ಮಹೀಂದ್ರ ಇಂಪಿರಿಯೊ ( Imperio) ಹಗುರ ವಾಣಿಜ್ಯ ವಾಹನವು ಇದೇ ಮುಂಬರುವ 2016 ಜನವರಿ 06ರಂದು ಭರ್ಜರಿ ಬಿಡುಗಡೆ ಕಾಣಲಿದೆ.

ಹೊಸ ವರ್ಷಕ್ಕೆ ಮಹೀಂದ್ರ ಮಗದೊಂದು ಗಿಫ್ಟ್

ಅದೃಷ್ಟದಲ್ಲಿ ನಂಬಿಕೆಯನ್ನು ಹೊಂದಿರುವ ಮಹೀಂದ್ರ ಇಲ್ಲಿಯೂ ಇಂಪಿರಿಯೊ ಹೆಸರಿನ ಕೊನೆಯಲ್ಲಿ 'ಒ' ಅಕ್ಷರವನ್ನು ಕಾಯ್ದುಕೊಂಡಿರುವುದು ಹೆಚ್ಚಿನ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಹೊಸ ವರ್ಷಕ್ಕೆ ಮಹೀಂದ್ರ ಮಗದೊಂದು ಗಿಫ್ಟ್

ನಿಮ್ಮ ಮಾಹಿತಿಗಾಗಿ ಮಹೀಂದ್ರ ನೂತನ ಇಂಪಿರಿಯೊ ಹಗುರ ಭಾರದ ವಾಹನವು ಜಿನಿಯೊ ಪಿಕಪ್ ಟ್ರಕ್ ಸ್ಥಾನವನ್ನು ತುಂಬಲಿದೆ. ಅಲ್ಲದೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಮಹೀಂದ್ರದಿಂದ ಬಿಡುಗಡೆಯಾಗುತ್ತಿರುವ ಆರನೇ ಉತ್ಪನ್ನವೆನಿಸಿಕೊಳ್ಳಲಿದೆ.

ಹೊಸ ವರ್ಷಕ್ಕೆ ಮಹೀಂದ್ರ ಮಗದೊಂದು ಗಿಫ್ಟ್

ನೂತನ ಇಂಪಿರಿಯೊ ಪಿಕಪ್ ಟ್ರಕ್ ಅನ್ನು ಚೆನ್ನೈನಲ್ಲಿ ಸ್ಥಿತಗೊಂಡಿರುವ ಮಹೀಂದ್ರದ ಸಂಶೋಧನಾ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ನೂತನ ವೆಬ್ ಸೈಟ್ ಪುಟವನ್ನು ತೆರೆದುಕೊಳ್ಳಲಾಗಿದೆ.

ಹೊಸ ವರ್ಷಕ್ಕೆ ಮಹೀಂದ್ರ ಮಗದೊಂದು ಗಿಫ್ಟ್

ಹೊಸ ಇಂಪಿರಿಯೊ 2.5 ಲೀಟರ್ ಎಂಡಿಐ ಸಿಆರ್‌ಡಿಇ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 75 ಅಶ್ವಶಕ್ತಿಯಲ್ಲಿ 220 ಎನ್‌ಎಂ ತಿರುಗುಬಲವನ್ನು ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಗೇರ್ ಬಾಕ್ಸ್ ನಿಂದಲೂ ನಿಯಂತ್ರಿಸಲ್ಪಡಲಿದೆ.

ಹೊಸ ವರ್ಷಕ್ಕೆ ಮಹೀಂದ್ರ ಮಗದೊಂದು ಗಿಫ್ಟ್

2930 ಕೆ.ಜಿ ತೂಕವನ್ನು ಹೊಂದಿರುವ ಈ ಹಗುರ ಭಾರದ ವಾಣಿಜ್ಯ ವಾಹನವು 1100 ಕೆ.ಜಿ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿರುತ್ತದೆ.

English summary
Mahindra Imperio To Be Launched On Jan 6; Bookings open
Story first published: Monday, December 28, 2015, 16:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark