ವರ್ಷಾಂತ್ಯದೊಳಗೆ ಮಾರುತಿ ಡೀಸೆಲ್ ಕಾರು ಬಿಡುಗಡೆ

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಹಾಗೂ ನಂಬಿಕೆಗ್ರಸ್ತ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಆಲ್ಟೊ 800 ಡೀಸೆಲ್ ಮಾದರಿಯನ್ನು ವರ್ಷಾಂತ್ಯದೊಳಗೆ ಬಿಡುಗಡೆ ಮಾಡಲಿದೆ.

ಬಲ್ಲ ಮೂಲಗಳ ಪ್ರಕಾರ ಪ್ರಸಕ್ತ ಸಾಲಿನ ಅಂತ್ಯದೊಳಗೆ ಮಾರುತಿ ಸುಜುಕಿ ಆಲ್ಟೊ 800 ಡೀಸೆಲ್ ಕಾರು ದೇಶದ ಮಾರುಕಟ್ಟೆಯನ್ನು ತಲುಪಲಿದೆ. ಈ ಮೂಲಕ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ.

ಮಾರುತಿ ಆಲ್ಟೊ 800

ದೇಶದ ಸರ್ವಕಾಲಿಕ ಶ್ರೇಷ್ಠ ಹಾಗೂ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಪ್ರಥಮ ಸ್ಥಾನದಲ್ಲಿರುವ ಮಾರುತಿ ಆಲ್ಟೊ 800 ಡೀಸೆಲ್ ಆವೃತ್ತಿ ಬಿಡುಗಡೆಯೊಂದಿಗೆ ಮತ್ತಷ್ಟು ಇಂಧನ ಕ್ಷಮತೆ ಲಭ್ಯವಾಗಲಿದೆ.

ಕೈಗೆಟುಕುವ ಬೆಲೆ, ವಿಶ್ವಾಸಾರ್ಹತೆ, ಸರ್ವೀಸ್ ಈ ಎಲ್ಲ ವಿಭಾಗದಲ್ಲಿ ಜನ ಮೆಚ್ಚಿನ ಸಂಸ್ಥೆ ಎನಿಸಿಕೊಂಡಿರುವ ಮಾರುತಿ, ಸಣ್ಣ ಕಾರು ವಿಭಾಗದಲ್ಲಿ ಬಹುತೇಕ ಮಾರಾಟವನ್ನು ವಶಪಡಿಸಿಕೊಂಡಿದೆ.

ನಿಮ್ಮ ಮಾಹಿತಿಗಾಗಿ, ಕೆಲವು ಸಮಯಗಳ ಹಿಂದೆಯಷ್ಟೇ ಮಾರುತಿ ಸೆಲೆರಿಯೊ ಡೀಸೆಲ್ ವೆರಿಯಂಟ್ ಬಿಡುಗಡೆಯಾಗಿತ್ತು. ಇದರಲ್ಲಿ ಬಳಕೆಯಾಗಿರುವುದಕ್ಕೆ ಸಮಾನವಾದ 800 ಸಿಸಿ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಸದ್ಯ ಮಾರುತಿ ಆಲ್ಟೊ ಪೆಟ್ರೋಲ್ ಹಾಗೂ ಸಿಎನ್ ಜಿ ಮಾದರಿಗಳಲ್ಲಿ ಲಭ್ಯವಿದೆ.

ಮಾರುತಿ ಆಲ್ಟೊ 800 ಸಂಭವನೀಯ ಡೀಸೆಲ್ ಎಂಜಿನ್:

  • 793 ಸಿಸಿ ಟು ಸಿಲಿಂಡರ್,
  • 46 ಅಶ್ವಶಕ್ತಿ,
  • 125 ಎನ್‌ಎಂ ತಿರುಗುಬಲ,
  • 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್

ಇನ್ನುಳಿದಂತೆ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ. ಅಷ್ಟಕ್ಕೂ ಮಾರುತಿ ಆಲ್ಟೊ 800 ಡೀಸೆಲ್ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳೇನು?

English summary
Maruti Suzuki Alto 800 Diesel Expected Launch By 2015-end
Story first published: Saturday, August 1, 2015, 9:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark