ದೇಶದತ್ತ ಮುಖ ಮಾಡಿದ ಬೆಂಝ್ ಸಿಎಲ್‌ಎಸ್ ಮತ್ತು ಇ ಕ್ಯಾಬ್ರಿಯೊಲೆಟ್

Written By:

ಭಾರತದಲ್ಲಿ ಹೊಸ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವುದರಲ್ಲಿ ಬದ್ಧವಾಗಿರುವ ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ನೂತನ ಸಿಎಲ್‌ಎಸ್ 250 ಸಿಡಿಐ ಹಾಗೂ ಇ 400 ಕ್ಯಾಬ್ರಿಯೊಲೆಟ್ ಮಾದರಿಗಳನ್ನು ಬಿಡುಗಡೆ ಮಾಡಲಿಡೆ.

ಬಲ್ಲ ಮೂಲಗಳ ಪ್ರಕಾರ ಬೆಂಝ್ ಸಿಎಲ್‌ಎಸ್ 250 ಸಿಡಿಐ ಹಾಗೂ ಇ400 ಕ್ಯಾಬ್ರಿಯೊಲೆಟ್ ಮಾದರಿಗಳು 2015 ಮಾರ್ಚ್ 25ರಂದು ಭಾರತ ಮಾರುಕಟ್ಟೆ ಪ್ರವೇಶ ಪಡೆಯಲಿದೆ. ಇದು ಪ್ರಸಕ್ತ ಸಾಲಿನಲ್ಲಿ ಬೆಂಝ್ ದೇಶದಲ್ಲಿ ಬಿಡುಗಡೆ ಮಾಡಲಿರುವ 15 ಮಾದರಿಗಳ ಸಾಲಿನಲ್ಲಿ ಕಾಣಿಸಿಕೊಳ್ಳಲಿದೆ.

ನಿಮ್ಮ ಮಾಹಿತಿಗಾಗಿ ಸಿಎಲ್‌ಎಸ್ ಮಾದರಿಯು ದೇಶದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದೆ. ಅಂತೆಯೇ ಇ ಕ್ಯಾಬ್ರಿಯೊಲೆಟ್ ಹೊಸ ಅವತಾರದಲ್ಲಿ ಪ್ರತ್ಯಕ್ಷಗೊಳ್ಳುತ್ತಿದೆ.

ಸಿಎಲ್‌ಎಸ್ 250 ಸಿಡಿಐ ವಿಶೇಷತೆ

 • ನಾಲ್ಕು ಬಾಗಿಲುಗಳ ಕೂಪೆ ಶೈಲಿ
 • ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಭಾರತ ಪ್ರವೇಶ,
 • ಎ ಕ್ಲಾಸ್ ಮಾದರಿಯಿಂದ ಡಿಸೈನ್ ಆಮದು,
 • ಯುವ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆ.

ಎಂಜಿನ್ ತಾಂತ್ರಿಕತೆ

 • 2143 ಸಿಸಿ ಎಂಜಿನ್,
 • 204.08 ಅಶ್ವಶಕ್ತಿ,
 • 500 ತಿರುಗುಬಲ,
 • 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್.

ಇ 400 ಕ್ಯಾಬ್ರಿಯೊಲೆಟ್ ವಿಶೇಷತೆ

 • ಟು ಡೋರ್ ಮಾದರಿ,
 • ಎಲೆಕ್ಟ್ರಿಕ್ ಸಾಫ್ಟ್ ಟಾಪ್,

ಎಂಜಿನ್ ತಾಂತ್ರಿಕತೆ

 • ವಿ6 ಟ್ವಿನ್ ಟರ್ಬೊ,
 • 3.0 ಲೀಟರ್ ಪೆಟ್ರೋಲ್ ಎಂಜಿನ್,
 • 333.24 ಅಶ್ವಶಕ್ತಿ,
 • 480 ತಿರುಗುಬಲ
 • 5.3 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧನೆ

ಕಾರು ಹೋಲಿಸಿ

ಮರ್ಸಿಡಿಸ್ ಬೆಂಝ್ ಎ ಕ್ಲಾಸ್
ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
German luxury car manufacturer, Mercedes-Benz has promised to launch 15 vehicles in 2015. On the 25th of March, 2015 they will launch two new models the E 400 Cabriolet and CLS 250 CDI.
Story first published: Tuesday, March 17, 2015, 15:52 [IST]
Please Wait while comments are loading...

Latest Photos

X