6 ಚಕ್ರಗಳ ಮರ್ಸಿಡಿಸ್ ಜಿ63 ಎಎಂಜಿ ಪಿಕಪ್ ಸೋಲ್ಡ್ ಔಟ್

By Nagaraja

ಕೆಲವೊಂದು ವಾಹನಗಳು ಸದ್ದಿಲ್ಲದೆ ಫೇಮಸ್ ಆಗಿ ಬಿಡುತ್ತದೆ. ಇವುಗಳಲ್ಲಿ ಆರು ಚಕ್ರಗಳ ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ 6x6 ಪಿಕಪ್ ಟ್ರಕ್ ಕೂಡಾ ಒಂದಾಗಿದೆ.

ಇದರ 5.5 ಲೀಟರ್ ಟ್ವಿನ್ ಟರ್ಬೊಚಾರ್ಜ್ಡ್ ವಿ8 ಎಂಜಿನ್ ಭರ್ಜರಿ 536 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಐಷರಾಮಿ ಆಫ್ ರೋಡ್ ವಾಹನಗಳನ್ನು ಬಯಸುವವರಿಗೆ ಇಂದೊಂದು ಅದ್ಭುತ ಅನುಭವಾಗಲಿದೆ.

Mercedes-Benz G63 AMG 6x6

ಎರಡು ವರ್ಷಗಳ ಹಿಂದೆ ಬಿಡುಗಡೆಗೊಂಡಿದ್ದ ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ 6x6 ಮಾದರಿಗೆ ನಿರೀಕ್ಷೆಗೂ ಮೀರಿದ ಬೇಡಿಕೆ ವ್ಯಕ್ತವಾಗಿತ್ತು. ಇನ್ನೊಂದೆಡೆ ಈ ಐಕಾನಿಕ್ ಮಾದರಿಯ ಬೇಡಿಕೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೀಮಿತ ಆವೃತ್ತಿಯನ್ನಷ್ಟೇ ಉತ್ಪಾದಿಸಿತ್ತು.
Mercedes-Benz G63 AMG 6x6

5867 ಎಂಎಂ ಉದ್ದ, 2111 ಎಂಎಂ ಅಗಲ ಹಾಗೂ 2209 ಎಂಎಂ ಎತ್ತರವನ್ನು ಹೊಂದಿರುವ ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ 6x6 ಸ್ಟ್ಯಾಂಡರ್ಡ್ ಕಾರಿಗಿಂತಲೂ ಪರಿಣಾಮಕಾರಿ 43.5 ಇಂಚುಗಳಷ್ಟು ಹೆಚ್ಚು ಉದ್ದವನ್ನು ಹೊಂದಿದೆ.
Mercedes-Benz G63 AMG 6x6

ಇನ್ನು ಆರು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುವ ಬೆಂಝ್ ಜಿ63 ಎಎಂಜಿ 6x6 ಗಂಟೆಗೆ ಗರಿಷ್ಠ 160 ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.
Most Read Articles

Kannada
English summary
According to the reports, Mercedes Benz new off-roader called the G63 AMG 6X6 has been sold out completely. As the name suggests this vehicle is an all wheel drive that runs on 6 wheels. The G63 AMG 6X6 is not a new model, but is based on the military version of the G320 CDI.
Story first published: Friday, February 20, 2015, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X