ಹೊಸ ಕಾರುಗಳ ಮಾರಾಟ ಎಷ್ಟೆಷ್ಟು? ಇಲ್ಲಿದೆ ರಿಪೋರ್ಟ್ ಕಾರ್ಡ್

Written By:

ಕಳೆದ ತ್ರೈಮಾಸಿಕ ಅವಧಿಯಲ್ಲಿ (2015 ಜುಲೈ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ) ಬಿಡುಗಡೆಯಾದ ಅತಿ ನೂತನ ಕಾರುಗಳನ್ನು ಖರೀದಿಸುವ ಯೋಚನೆಯಲ್ಲಿದ್ದೀರಾ? ಮಾರುಕಟ್ಟೆಯಲ್ಲಿ ಇವುಗಳ ಬೇಡಿಕೆ ಎಷ್ಟರ ಮಟ್ಟಿನಲ್ಲಿದೆ ಎಂಬುದನ್ನು ತಿಳಿಯುವ ಕುತೂಹಲವಿದೆಯೇ? ಹಾಗಿದ್ದರೆ ಬನ್ನಿ ನಮ್ಮ ಇಂದಿನ ಲೇಖನವನ್ನು ಗಮನವಿಟ್ಟು ಓದಿ.

ಕಳೆದ ಮೂರು ತಿಂಗಳೊಳಗೆ ಬಿಡುಗಡೆಯಾದ ಕಾರುಗಳಿವು:

  • ಹೋಂಡಾ ಜಾಝ್: ಬಿಡುಗಡೆ ದಿನಾಂಕ 2015 ಜುಲೈ 08
  • ಹ್ಯುಂಡೈ ಕ್ರೆಟಾ: ಬಿಡುಗಡೆ ದಿನಾಂಕ 2015 ಜುಲೈ 21
  • ಮಾರುತಿ ಎಸ್ ಕ್ರಾಸ್: ಬಿಡುಗಡೆ ದಿನಾಂಕ 2015 ಆಗಸ್ಟ್ 05
  • ಫಿಗೊ ಆಸ್ಪೈರ್: ಬಿಡುಗಡೆ ದಿನಾಂಕ 2015 ಆಗಸ್ಟ್ 12
  • ಮಹೀಂದ್ರ ಟಿಯುವಿ300: ಬಿಡುಗಡೆ ದಿನಾಂಕ 2015 ಸೆಪ್ಟೆಂಬರ್ 10
  • ಫೋರ್ಡ್ ಫಿಗೊ: ಬಿಡುಗಡೆ ದಿನಾಂಕ 2015 ಸೆಪ್ಟೆಂಬರ್ 23
  • ರೆನೊ ಕ್ವಿಡ್: ಬಿಡುಗಡೆ ದಿನಾಂಕ 2015 ಸೆಪ್ಟೆಂಬರ್ 24

ಹ್ಯಾಚ್ ಬ್ಯಾಕ್ ನಿಂದ ಹಿಡಿದು ಕಾಂಪಾಕ್ಟ್ ಸೆಡಾನ್, ಪ್ರೀಮಿಯಂ ಹ್ಯಾಚ್ ಬ್ಯಾಕ್, ಕಾಂಪಾಕ್ಟ್ ಎಸ್‌ಯುವಿ ವರೆಗಿನ ವಿಭಾಗಗಳಲ್ಲಿ ಹೊಸ ಹೊಸ ಮಾದರಿಗಳ ಪ್ರವೇಶವಾಗಿದ್ದು, ಈಗ ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಎಲ್ಲ ಮಾದರಿಗಳ ಸಂಪೂರ್ಣ ಮಾರಾಟ ಅಂಕಿಅಂಶಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಹೋಂಡಾ ಜಾಝ್

ಹೋಂಡಾ ಜಾಝ್

ಸೆಪ್ಟೆಂಬರ್ ವೆರೆಗಿನ ಮಾರಾಟ ಸಂಖ್ಯೆ: 19,178

ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವೆನಿಸಿರವು ಎಲೈಟ್ ಐ20 ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಬಲೆನೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಹೋಂಡಾ ಜಾಝ್ ಜುಲೈ 08ರ ಬಿಡುಗಡೆ ಬಳಿಕ ಮೂರು ತಿಂಗಳ ಅವಧಿಯಲ್ಲಿ ಒಟ್ಟು 19,178 ಯುನಿಟ್ ಗಳ ಮಾರಾಟವನ್ನು ಕಂಡಿದೆ.

ಹೋಂಡಾ ಜಾಝ್ ಸಮಗ್ರ ವಿಮರ್ಶೆಗಾಗಿ ಕ್ಲಿಕ್ಕಿಸಿ

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ

ಸೆಪ್ಟೆಂಬರ್ ವೆರೆಗೆ ಮಾರಾಟ ಸಂಖ್ಯೆ: 23,117

ಬಿಡುಗಡೆಯಾದ ಬೆನ್ನಲ್ಲೇ ದೇಶದ ನಂ.1 ಎಸ್‌ಯುವಿ ಪಟ್ಟ ಆಲಂಕರಿಸಿರುವ ಹ್ಯುಂಡೈ ಕ್ರೆಟಾ ಪ್ರತಿ ತಿಂಗಳಲ್ಲಿ ಸರಾಸರಿ 7,200 ಯುನಿಟ್ ಗಳ ಮಾರಾಟ ಕಾಪಾಡಿಕೊಂಡಿದೆ. ಅಲ್ಲದೆ ಮುಂಗಡ ಬುಕ್ಕಿಂಗ್ ಸಂಖ್ಯೆ ಈಗಾಗಲೇ 40,000 ದಾಟಿದೆ. ಕ್ರೆಟಾಗೆ ನಿಕಟ ಪ್ರತಿಸ್ಪರ್ಧಇಯಾಗಿರುವ ಮಹೀಂದ್ರ ಬೊಲೆರೊ, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 16,105 ಯುನಿಟ್ ಗಳ ಮಾರಾಟ ಕಂಡಿದೆ.

ಕ್ರೆಟಾ ಏಕೆ ನಂಬರ್ ವನ್ ಕ್ರೀಡಾ ಬಳಕೆಯ ವಾಹನ ? ಮುಂದಕ್ಕೆ ಓದಿ

ಮಾರುತಿ ಎಸ್ ಕ್ರಾಸ್

ಮಾರುತಿ ಎಸ್ ಕ್ರಾಸ್

ಸೆಪ್ಟೆಂಬರ್ ವೆರೆಗೆ ಮಾರಾಟ ಸಂಖ್ಯೆ: 9,715

ಆಗಸ್ಟ್ 05ರಂದು ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಬಲೆನೊ ಆಗಸ್ಟ್ ತಿಂಗಳಲ್ಲಿ 4,602 ಯುನಿಟ್ ಗಳ ಮಾರಾಟ ಕಂಡುಕೊಂಡಿದ್ದರೂ ಸೆಪ್ಟೆಂಬರ್ ತಿಂಗಳ ಮಾರಾಟ ಸಂಖ್ಯೆ 3,603ಕ್ಕೆ ಇಳಿಕೆಯಾಗಿತ್ತು.

ಬಿಡುಗಡೆಯಾದ ಎರಡು ತಿಂಗಳಲ್ಲೇ ಮಾರುತಿ ಎಸ್ ಕ್ರಾಸ್ ಗೆ ಡಿಸ್ಕೌಂಟ್? ವಿವರಗಳಿಗಾಗಿ ಕ್ಲಿಕ್ಕಿಸಿ

ಫೋರ್ಡ್ ಫಿಗೊ ಆಸ್ಪೈರ್

ಫೋರ್ಡ್ ಫಿಗೊ ಆಸ್ಪೈರ್

ಸೆಪ್ಟೆಂಬರ್ ವೆರೆಗೆ ಮಾರಾಟ ಸಂಖ್ಯೆ: 8,771

ಬಿಡುಗಡೆಯಾದ ಮೊದಲ ತಿಂಗಳಲ್ಲಿ 5,176 ಯುನಿಟ್ ಗಳ ಮಾರಾಟ ದಾಖಲಿಸಿರುವ ಫೋರ್ಡ್ ಫಿಗೊ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರು ಸೆಪ್ಟೆಂಬರ್ ತಿಂಗಳಲ್ಲಿ 3,596 ಯನಿಟ್ ಗಳ ಮಾರಾಟ ದಾಖಲಿಸಿತ್ತು.

ಫೋರ್ಡ್ ಫಿಗೊ ಆಸ್ಪೈರ್ ನಿರೀಕ್ಷೆ ಮುಟ್ಟಿತೇ? ಬನ್ನಿ ಚಾಲನಾ ವಿಮರ್ಶೆ ಓದಿ ನೋಡೋಣ

ಮಹೀಂದ್ರ ಟಿಯುವಿ300

ಮಹೀಂದ್ರ ಟಿಯುವಿ300

ಸೆಪ್ಟೆಂಬರ್ ವೆರೆಗೆ ಮಾರಾಟ ಸಂಖ್ಯೆ: 4,321

ಬಿಡುಗಡೆಯಾದ ಒಂದು ತಿಂಗಳೊಳಗೆ ಜನಪ್ರಿಯ ಇಕೊಸ್ಪೋರ್ಟ್ ಮಾರಾಟ ಸಂಖ್ಯೆಯನ್ನು ಹಿಂದಿಕ್ಕಿರುವ ಯುದ್ಧ ಟ್ಯಾಂಕರ್ ಸ್ಪೂರ್ತಿ ಪಡೆದ ಮಹೀಂದ್ರ ಟಿಯುವಿ300 4,321 ಯುನಿಟ್ ಗಳ ಮಾರಾಟ ದಾಖಲಿಸಿದೆ.

ಮಹೀಂದ್ರ ಟಿಯುವಿ300 ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು ಇಲ್ಲಿದೆ ನೋಡಿ

ನ್ಯೂ ಫೋರ್ಡ್ ಫಿಗೊ

ನ್ಯೂ ಫೋರ್ಡ್ ಫಿಗೊ

ಸೆಪ್ಟೆಂಬರ್ ವೆರೆಗೆ ಮಾರಾಟ ಸಂಖ್ಯೆ: 4,554

ಪ್ರಸ್ತುತ ಪಟ್ಟಿಗೆ ತಾಜಾ ಎಂಟ್ರಿಯಾಗಿರುವ ಫೋರ್ಡ್ ಫಿಗೊ ಕೇವಲ ಏಳು ದಿನಗೊಳಗೆ 4,554 ಯನಿಟ್ ಗಳ ಮಾರಾಟ ದಾಖಲಿಸಿದೆ. ಇದು ನಿಜಕ್ಕೂ ಪರಿಣಾಮಕಾರಿಯೆನಿಸಿದೆ.

ಸ್ವಿಫ್ಟ್ ಹಿಮ್ಮೆಟ್ಟಿಸಿತೇ ಫಿಗೊ ? ವಿವರಗಳಿಗಾಗಿ ಕ್ಲಿಕ್ಕಿಸಿ

ರೆನೊ ಕ್ವಿಡ್

ರೆನೊ ಕ್ವಿಡ್

ಸೆಪ್ಟೆಂಬರ್ ವೆರೆಗೆ ಮಾರಾಟ ಸಂಖ್ಯೆ: 4,554

ಸೆಪ್ಟೆಂಬರ್ 24 ರಂದು ಮಾರುಕಟ್ಟೆ ಪ್ರವೇಶಿಸಿರುವ ಆಲ್ಟೊ ಪ್ರತಿಸ್ಪರ್ಧಿ ರೆನೊ ಕ್ವಿಡ್ ಈಗಾಗಲೇ 25,000ಕ್ಕೂ ಮುಂಗಡ ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಂಡಿದೆ. ಆದರೆ ಭಾರತ ವಾಹನ ತಯಾರಕ ಒಕ್ಕೂಟದ ಅಂಕಿಅಂಶ ಪ್ರಕಾರ 381 ಯುನಿಟ್ ಗಳ ಮಾರಾಟ ಕಂಡಿದೆ. ಅಲ್ಲದೆ ಸಂಪೂರ್ಣ ವಿತರಣೆ ಪ್ರಕ್ರಿಯೆ ಅಕ್ಟೋಬರ್ ತಿಂಗಳಿನಲ್ಲಷ್ಟೇ ನಡೆಯಲಿದೆ.

ಆಲ್ಟೊ ಪಾರುಪತ್ಯಕ್ಕೆ ಅಂತ್ಯ? ಈಗ ಎಲ್ಲವೂ ಕ್ವಿಡ್ ಮ್ಯಾಜಿಕ್

Read more on ಕಾರು cars
English summary
Newly launched cars Sales report
Story first published: Saturday, October 24, 2015, 14:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark