ಸಂಚಾರ ನಿಯಮ ಉಲ್ಲಂಘನೆ ತಡೆಯಲು ಮೊಬೈಲ್ ಆಪ್

Written By:

ಸಂಚಾರ ನಿಯಮ ಉಲ್ಲಂಘನೆ ತಡೆಗಟ್ಟಲು ಹಾಗೂ ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಿರುವ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅತಿ ಶೀಘ್ರದಲ್ಲೇ ಮೊಬೈಲ್ ಆಪ್ ವೊಂದನ್ನು ಬಿಡುಗಡೆ ಮಾಡಲಿದೆ.

ವಾಹನ ಸವಾರರು ಅಮಿತ ವೇಗದಲ್ಲಿ ಸಂಚರಿಸುವುದು, ಅಡ್ಡಾದಿಡ್ಡಿ ಚಾಲನೆ ಅಥವಾ ಇನ್ಯಾವುದೇ ರೀತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಈ ಆಪ್ ಮುಖಾಂತರ ದೂರು ದಾಖಲಿಸಬಹುದಾಗಿದೆ. ಅಲ್ಲದೆ ತುರ್ತು ಕಾರ್ಯಾಚರಣೆ ಹಮ್ಮಿಕೊಳ್ಳಲಾಗುವುದು.

ಹೆದ್ದಾರಿ

ಮುಂಬರುವ ಒಂದೆರಡು ತಿಂಗಳೊಳಗೆ ಆಪ್ ಜನ ಸಾಮಾನ್ಯರ ಮೊಬೈಲ್ ಪರದೆ ಬಂದು ಸೇರಲಿದೆ. ನಿಯಮ ಉಲ್ಲಂಘನೆ ಮಾಡುವ ಕಾರಿನ ಚಿತ್ರ ಕೂಡಾ ಅಪ್ ಲೋಡ್ ಮಾಡುವ ವ್ಯವಸ್ಥೆಯನ್ನು ಹೊಂದಿರಲಿದೆ.

ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಖ್ಯಸ್ಥ ರಾಘವ್ ಚಂದ್ರ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಬಳಿಕ ದೂರನ್ನು ಪರೀಶೀಲಿಸಿದ ಬಳಿಕ ಪೊಲೀಸ್ ಹಾಗೂ ಸಾರಿಗೆ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

English summary
NHAI To Launch Mobile App To Catch Traffic Violators Soon
Story first published: Monday, October 12, 2015, 11:26 [IST]
Please Wait while comments are loading...

Latest Photos