ಭವಿಷ್ಯದ ಕ್ರಾಸೋವರ್: ನಿಸ್ಸಾನ್ ಗ್ರಿಪ್ಜ್ ಅನಾವರಣ

By Nagaraja

ಜರ್ಮನಿಯಲ್ಲಿ ಸಾಗುತ್ತಿರುವ ವಿಶ್ವದ ಅತಿ ದೊಡ್ಡ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಜಪಾನ್ ಮೂಲದ ಜನಪ್ರಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ಅತಿ ನೂತನ ಗ್ರಿಪ್ಜ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ.

ತನ್ನ ಹೊಸ ವಾಹನವನ್ನು ಭವಿಷ್ಯತ್ತಿನ ಕ್ರಾಸೋವರ್ ಎಂದ ವ್ಯಾಖ್ಯಾನಿಸಿರುವ ನಿಸ್ಸಾನ್, ದೂರ ದೃಷ್ಟಿಯನ್ನು ಹಾಯಿಸಿದೆ. ಇದು ನಿಸ್ಸಾನ್‌ನ ಜನಪ್ರಿಯ 'ಝಡ್' ಬ್ರಾಂಡ್‌ನ ಭಾಗವಾಗಿರಲಿದೆ.

ಭವಿಷ್ಯದ ಕ್ರಾಸೋವರ್: ನಿಸ್ಸಾನ್ ಗ್ರಿಪ್ಜ್ ಅನಾವರಣ

ನಿಸ್ಸಾನ್ ಗ್ರಿಪ್ಜ್ ಒಂದು ಕ್ರಾಸೋವರ್‌ಗೆ ಮಾತ್ರ ಸೀಮಿತವಾಗಿರದೆ ನೈಜ ಕ್ರಾಸೋವರ್ ಸ್ಪೋರ್ಟ್ಸ್ ಕಾರಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ.

ಭವಿಷ್ಯದ ಕ್ರಾಸೋವರ್: ನಿಸ್ಸಾನ್ ಗ್ರಿಪ್ಜ್ ಅನಾವರಣ

ಕ್ಲಾಸಿಕ್ ದಟ್ಸನ್ 240ಝಡ್ ರಾಲಿ ಕಾರು ಹಾಗೂ ಪೂರ್ವ ಆಫ್ರಿಕಾದ ಸಫಾರಿ ರಾಲಿ ಮತ್ತು ಕ್ರೀಡಾ ಸೈಕಲ್ ಗಳಿಂದ ಪ್ರೇರಣೆ ಪಡೆದುಕೊಂಡು ಇದನ್ನು ರಚಿಸಲಾಗಿದೆ.

ಭವಿಷ್ಯದ ಕ್ರಾಸೋವರ್: ನಿಸ್ಸಾನ್ ಗ್ರಿಪ್ಜ್ ಅನಾವರಣ

2+2 ಆಸನ ವ್ಯವಸ್ಥೆಯನ್ನು ಹೊಂದಿರುವ ನಿಸ್ಸಾನ್ ಗ್ರಿಪ್ಜ್, ಸಂಸ್ಥೆಯ 'ಪ್ಯೂರ್ ಡ್ರೈವ್ ಹೈಬ್ರಿಡ್ ವ್ಯವಸ್ಥೆ'ಯನ್ನು ಪಡೆಯಲಿದೆ.

ಭವಿಷ್ಯದ ಕ್ರಾಸೋವರ್: ನಿಸ್ಸಾನ್ ಗ್ರಿಪ್ಜ್ ಅನಾವರಣ

ಒಟ್ಟಿನಲ್ಲಿ ನಿಸ್ಸಾನ್ ಹೊಸ ಕಾರು ಯಾವಾಗ ನಿರ್ಮಾಣ ಹಂತ ತಲುಪಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Introducing the future of the crossover: The Gripz Concept reveals itself at the Frankfurt Motor Show
Story first published: Wednesday, September 16, 2015, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X