ನಿಮ್ಮ ಕಾರನ್ನು ಇನ್ನಷ್ಟು ಸ್ಮಾರ್ಟ್ ಆಗಿಸಲು ಪ್ಯಾರಟ್ ಡ್ಯಾಶ್‌ಬೋರ್ಡ್

Posted By:

2015 ಅಂತರಾಷ್ಟ್ರೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋದಲ್ಲಿ ಮಗದೊಂದು ಹೊಸ ತಂತ್ರಗಾರಿಕೆಯ ಆವಿಷ್ಕಾರವಾಗಿದೆ. ಇದೀಗ ಮುಂಚೂಣಿಯ ಸಂಸ್ಥೆಯಾಗಿರುವ ಪ್ಯಾರಟ್ ನೂತನ ಆಫ್ಟರ್ ಮಾರ್ಕೆಟ್ ಡ್ಯಾಶ್ ಬೋರ್ಡ್ ಅನ್ನು ಅಭಿವೃದ್ಧಿಪಡಿಸಿದೆ.

ಬೃಹತ್ತಾದ ಸೂಪರ್ ಕಂಪ್ಯೂಟರ್ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿರುವ ಆರ್‌ಎನ್‌ಬಿ6 ಡಬಲ್ ಡಿನ್ ಸಿಸ್ಟಂ ಆಂಡ್ರಾಯ್ಡ್ ಅಥವಾ ಆಪಲ್ ಡಿವೈಸ್‌ಗೆ ಸಂಪರ್ಕಿಸಬಹುದಾಗಿದೆ.

To Follow DriveSpark On Facebook, Click The Like Button
parrot dashboard

ಹೈ ಡೆಫಿನೇಷನ್ ಪರದೆಯಲ್ಲಿ ಇದು ಗೋಚರಿಸಲಿದೆ. ಅಲ್ಲದೆ ತನ್ನದೇ ಆದ ಕ್ಯಾಮೆರಾವನ್ನು ಹೊಂದಿದ್ದು, ಬಹು ಕ್ರಿಯಾತ್ಮಕಗಳಿಗೆ ಉಪಯೋಗಿಸಬಹುದಾಗಿದೆ.

ಕಾರು ಚಾಲನೆ ವೇಳೆ ಚಾಲಕರಿಗೆ ಲೇನ್ ಹೊಂದಿಕೆ ಮಾಡುವುದು, ನಿಕಟದಲ್ಲಿರುವ ವಾಹನಗಳ ಬಗ್ಗೆ ಅರಿಯಲು ಸಹಕಾರಿಯಾಗಲಿದೆ.

ಕೇವಲ ಸುರಕ್ಷತೆಯ ದೃಷ್ಟಿಕೋನದಲ್ಲಿ ಮಾತ್ರವಲ್ಲದೆ ಉತ್ತಮ ಆಡಿಯೋ ವ್ಯವಸ್ಥೆಯನ್ನು ಇದು ಹೊಂದಿದೆ. ಇದು ಆಡಿಯೋ ಎಫ್‌ಎಕ್ಸ್ ನಿಯಂತ್ರಣವನ್ನು ಹೊಂದಿದೆ. ಹಾಗೆಯೇ ಡ್ಯುಯಲ್ ಡಿನ್ ಮಾಹಿತಿ ಮರರಂಜನಾ ವ್ಯವಸ್ಥೆಯು ಇನ್ನಷ್ಟು ಮನರಂಜಿಸಲಿದೆ.

ಕಾರಿನಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡರೂ ಆರ್‌ಎನ್‌ಬಿ6 ಸಿಸ್ಟಂ ಎಚ್ಚರಿಸಲಿದೆ. ಈ ಮೂಲಕ ಎಂಜಿನ್ ಪರೀಶೀಲನೆಯ ಕೆಲಸವನ್ನು ಈ ಉಪಕರಣ ಮಾಡಲಿದೆ.

English summary
Parrot has introduced a new dashboard unit that literally will transform a car into a massive supercomputer that runs on gas.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark