ಮತ್ತೆ ದುಬಾರಿಯಾಯ್ತು ಪೆಟ್ರೋಲ್, ಡೀಸೆಲ್

By Nagaraja

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರುಪಾಯಿ ಮೌಲ್ಯ ಕುಸಿದಿರುವ ಬೆನ್ನಲ್ಲೇ ಇಂಧನ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಇದರೊಂದಿಗೆ 15 ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಇಂಧನ ಬೆಲೆಯಲ್ಲಿ ಏರಿಕೆಯಾಗಿದೆ. ಹೊಸ ಬೆಲೆ ಅನ್ವಯ ಪೆಟ್ರೋಲ್ ಪ್ರತಿ ಲೀಟರ್ ಗೆ 3.13 ರು. ಹಾಗೂ ಡೀಸೆಲ್ 2.17 ರು.ಗಳಷ್ಟು ತುಟ್ಟಿಯಾಗಿದೆ.

petrol pumb

ಪರಿಷ್ಕೃತ ಬೆಲೆ ಶುಕ್ರವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬಂದಿದೆ. ಇದಕ್ಕೂ ಮೊದಲು ಮೇ 1ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಅನುಕ್ರಮವಾಗಿ 3.96 ಹಾಗೂ 2.37 ರು.ಗಳಷ್ಟು ಏರಿಕೆ ಕಂಡುಬಂದಿತ್ತು.

ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ದೇಶದಲ್ಲಿ ತೈಲೋದ್ಯಮವು ಪ್ರತಿ 15 ದಿನಕ್ಕೊಮ್ಮೆ ಇಂಧನ ಬೆಲೆಯನ್ನು ಪರಿಷ್ಕೃತಗೊಳಿಸುತ್ತಿದೆ. ಇದರಿಂದಾಗಿ ಎರಡು ವಾರಗಳ ಅಂತರದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಅನುಕ್ರಮವಾಗಿ 7.09 ಹಾಗೂ 5.08ರು.ಗಳಷ್ಟು ದುಬಾರಿಯೆನಿಸಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಿಂದ 2015 ಫೆಬ್ರವರಿ ವರೆಗೆ ಪೆಟ್ರೋಲ್ ಬೆಲೆ ಸತತವಾಗಿ 10 ಬಾರಿ ಇಳಿಕೆಯಾಗಿತ್ತಲ್ಲದೆ 17.11ರಷ್ಟು ಕಡಿಮೆಯಾಗಿತ್ತು. ಇನ್ನೊಂದೆಡೆ ಅಕ್ಟೋಬರ್ ತಿಂಗಳಿಂದ ಡೀಸೆಲ್ ಬೆಲೆ ಅನಿಯಂತ್ರಣಗೊಳಿಸಿದ ಬಳಿಕ ಆರು ಬಾರಿ ಇಳಿಕೆ ಕಂಡು 12.6 ರು.ಗಳಷ್ಟು ಕಡಿತವಾಗಿತ್ತು.

Most Read Articles

Kannada
English summary
Petrol and diesel has been deregularised in India and prices are aligned with international markets. The prices are changed every fortnight to match global prices of fuel.
Story first published: Saturday, May 16, 2015, 11:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X