ರಸ್ತೆ ಪ್ರವೇಶಿಸಲಿರುವ ಆಡಿ ಆರ್8 ಸೂಪರ್ ಕಾರು

By Nagaraja

ಜಿನೆವಾ ಮೋಟಾರು ಶೋ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವಂತೆಯೇ ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಆಡಿ, ಅತಿ ನೂತನ ಆರ್8 ಸೂಪರ್ ಕಾರು ಪ್ರದರ್ಶಿಸಿದೆ.

ಆಡಿ ಎರಡನೇ ತಲೆಮಾರಿನ ಆರ್8 ಸೂಪರ್ ಕಾರು 2015 ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಾಣಲಿದೆ. ಅಷ್ಟೇ ಯಾಕೆ ಗರಿಷ್ಠ ಶಕ್ತಿಯ 5.2 ಲೀಟರ್ ಎಫ್‌ಎಸ್‌ಐ ವಿ10 ಎಂಜಿನ್ ಆಳವಡಿಸಲಾಗಿದೆ.

Audi R8 Supercar

ಇದು ಬರೋಬ್ಬರಿ 540ರಿಂದ ಹಿಡಿದು 610ರಷ್ಟು ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದೇ ಪವರ್‌ಫುಲ್ ಎಂಜಿನ್ ಆಡಿ ಸೂಪರ್ ಕಾರಿನ ಪ್ರಮುಖ ವೈಶಿಷ್ಟ್ಯವಾಗಿದೆ.

ಎರಡನೇ ತಲೆಮಾರಿನ ಆಡಿ ಆರ್8 ಕಾರು ಕೇವಲ 3.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 330 ಕೀ.ಮೀ. ಕಾಯ್ದುಕೊಳ್ಳಲಿದೆ. ಇದು 7 ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

Audi R8 Supercar

ಒಟ್ಟಿನಲ್ಲಿ ಆಡಿ ರೇಸ್ ಕಾರು ಸಾರ್ವಜನಿಕ ರಸ್ತೆಗೆ ಪ್ರವೇಶಿಸುತ್ತಿದೆ ಎಂದು ಇದನ್ನು ವಿಶ್ಲೇಷಿಸಬಹುದಾಗಿದೆ. ಇದು ಆಡಿಯ ಅತ್ಯಂತ ಶಕ್ತಿಶಾಲಿ ಅತಿ ಸಮಯಕ್ಕ ಅತ್ಯಂತ ವೇಗದಲ್ಲಿ ನಿರ್ಮಾಣವಾಗಿರುವ ಆಡಿ ಕಾರೆಂದು ಗುರುತಿಸ್ಪಡಲಿದೆ.

ಅಂದ ಹಾಗೆ ಆಡಿ ಆರ್8 ವಿ10 ಹಾಗೂ ಆರ್8 ವಿ10 ಪ್ಲಸ್ ಮಾದರಿಗಳು ಅನುಕ್ರಮವಾಗಿ 1.14 ಹಾಗೂ 1.29 ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ.

Most Read Articles

Kannada
English summary
German luxury car maker, Audi will be present at the upcoming Geneva Motor Show. They will be debuting their all-new flagship sports car the R8. This will be the second generation model and we have an image of how this supercar will look.
Story first published: Friday, February 27, 2015, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X