ಪವರ್‌ಫುಲ್ ಸ್ಕೋಡಾ ಒಕ್ಟಾವಿಯಾ ಆರ್‌ಎಸ್ 230 ವಿಶೇಷ ಆವೃತ್ತಿ

Written By:

ಪ್ರತಿಷ್ಠಿತ 2015 ಜಿನೆವಾ ಮೋಟಾರು ಶೋಗೆ ಇನ್ನೇನು ಕೆಲವೇ ದಿನಗಳಿರುವಂತೆಯೇ ಜೆಕ್ ಗಣರಾಜ್ಯದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಸ್ಕೋಡಾ, ಎಲ್ಲ ಹೊಸತನದಿಂದ ಕೂಡಿರುವ ಒಕ್ಟಾವಿಯಾ ಆರ್‌ಎಸ್ 230 ವಿಶೇಷ ಆವೃತ್ತಿಯನ್ನು ಪರಿಚಯಿಸಿದೆ.

ಇದು ಸಾಮಾನ್ಯ ಸ್ಕೋಡಾ ಒಕ್ಟಾವಿಯಾ ಮಾದರಿಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿದೆ. ಇದರ 2.0 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ 230 ಅಶ್ವಶಕ್ತಿ ಉತ್ಪಾದಿಸಲಿದೆ. ಇದು 6.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ ಹಾಗೂ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

To Follow DriveSpark On Facebook, Click The Like Button
skoda octavia rs230 special edition

ಇನ್ನು ವಿದ್ಯುನ್ಮಾನವಾಗಿ ನಿಯಂತ್ರಿಸಬಲ್ಲ ಸ್ಕೋಡಾದ ಡೈನಾಮಿಕ್ ಕಾರ್ನರಿಂಗ್ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಮುಂಬರುವ ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಾಣಲಿರುವ ಹೊಸ ಸ್ಕೋಡಾ ಕಾರು ಜೂನ್ ವೇಳೆಗೆ ಜಾಗತಿಕ ಮಾರುಕಟ್ಟೆಯನ್ನು ತಲುಪಲಿದೆ.

ಆಕ್ರಮಣಕಾರಿ ವಿನ್ಯಾಸ, ಕ್ರೀಡಾತ್ಮಕ ಒಳಮೈ ಹಾಗೂ ಎಂಜಿನ್ ಬಲ ವೃದ್ಧಿಯು ಹೊಸ ಒಕ್ಟಾವಿಯಾ ವಿಶೇಷ ಆವೃತ್ತಿಯ ಪ್ರಮುಖ ವೈಶಿಷ್ಟ್ಯವಾಗಿದೆ.

English summary
Skoda has introduced the Octavia RS 230 special edition which will showcase at the Geneva Motor Show next month. 
Story first published: Monday, February 23, 2015, 8:10 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark