ಸ್ವಚ್ಛ ಭಾರತ; ಭಾರತದಲ್ಲೂ ಓಡಾಡಲಿರುವ 'ಬಯೋ ಬಸ್'

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ಬ್ರಿಟನ್ ನ 'ಬಯೋ ಬಸ್' ಬಗ್ಗೆ ವರದಿ ಮಾಡಲಾಗಿತ್ತು. ಪ್ರಮುಖವಾಗಿಯೂ ಇದು ಮಾನವ ವಿಸರ್ಜಿಸುವ ಮಲ ತ್ಯಾಜ್ಯವನ್ನು ಮಿಥೇನ್ ಅನಿಲ ರೂಪದಲ್ಲಿ ಪರಿವರ್ತಿಸಲಾಗುತ್ತಿತ್ತು. ಅಲ್ಲದೆ ಅದರ ಯಶಸ್ವಿ ಸಂಚಾರ ಪ್ರಯೋಗವನ್ನು ನಡೆಸಲಾಗಿದೆ.

ಇದನ್ನೂ ಓದಿ: ಮಾನವ ಮಲ ತ್ಯಾಜ್ಯದಿಂದ ರೂಪುಗೊಂಡ ಬಯೋ ಬಸ್

ಪ್ರಸ್ತುತ ಸ್ವಚ್ಛ ಭಾರತ ಅಭಿಯಾನದಲ್ಲಿರುವ ಭಾರತವು ಅತಿ ಶೀಘ್ರದಲ್ಲೇ ಬಯೋ ಬಸ್ ಗೆ ಮೊರೆ ಹೋಗಲಿದೆ. ಇದರಂಗವಾಗಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು (ಯುಪಿಎಸ್‌ಆರ್‌ಟಿಸಿ) ದೇಶದಲ್ಲೇ ಮೊದಲ ಬಾರಿಗೆ ಬಯೋ ಬಸ್ ಸೇವೆಯನ್ನು ಆರಂಭಿಸಲಿದೆ.

ಸ್ವಚ್ಛ ಭಾರತ; ಭಾರತದಲ್ಲೂ ಓಡಾಡಲಿರುವ 'ಬಯೋ ಬಸ್'

ಉತ್ತರ ಪ್ರದೇಶದ ಎಲ್ಲ 75 ಜಿಲ್ಲೆಗಳಲ್ಲಿ ಬಯೋ ಬಸ್ ಸೇವೆಯನ್ನು ಆರಂಭಿಸುವುದು ಸರಕಾರದ ಗುರಿಯಾಗಿದೆ. ಈ ಸಂಬಂಧ ಸ್ವೀಡನ್‌ನ ಸ್ಕಾನಿಯಾ ಬಸ್ ಸಂಸ್ಥೆಯ ಜೊತೆ ನಿಗಮವು ಮಾತುಕತೆಯಲ್ಲಿದೆ.

ಸ್ವಚ್ಛ ಭಾರತ; ಭಾರತದಲ್ಲೂ ಓಡಾಡಲಿರುವ 'ಬಯೋ ಬಸ್'

ವರದಿಗಳ ಪ್ರಕಾರ 100 ಮಂದಿಯ ಮಾನವ ಮಲ ತ್ಯಾಜ್ಯದಲ್ಲಿ 200 ಕೀ.ಮೀ. ವರೆಗೆ ಸಂಚರಿಸಬಹುದಾಗಿದೆ. ಪ್ರಸ್ತುತ ಯೋಜನೆ ಬ್ರಿಟನ್, ಇಟಲಿ, ಸ್ವೀಡ್ ಹಾಗೂ ಪೊಲೆಂಡ್ ರಾಷ್ಟ್ರಗಳಲ್ಲಿ ಈಗಾಗಲೇ ಯಶ ಕಂಡಿದೆ.

ಸ್ವಚ್ಛ ಭಾರತ; ಭಾರತದಲ್ಲೂ ಓಡಾಡಲಿರುವ 'ಬಯೋ ಬಸ್'

ಇಲ್ಲಿ ಮಾನವ ಮಲ ಹಾಗೂ ಆಹಾರ ತ್ಯಾಜ್ಯಗಳನ್ನು ಬಯೋಮಿಥೇನ್ ಗ್ಯಾಸ್ ಆಗಿ ಪರಿವರ್ತಿಸಲಾಗುತ್ತಿದೆ. ಅಲ್ಲದೆ ಆಹಾರ ತ್ಯಾಜ್ಯಗಳನ್ನು ಬಳಕೆ ಮಾಡಲಾಗುತ್ತದೆ.

ಸ್ವಚ್ಛ ಭಾರತ; ಭಾರತದಲ್ಲೂ ಓಡಾಡಲಿರುವ 'ಬಯೋ ಬಸ್'

ಇದು ಸಾಂಪ್ರದಾಯಿಕ ಡೀಸೆಲ್ ಎಂಜಿನ್‌ಗಿಂತಲೂ ಶೇಕಡಾ 30ರಷ್ಟು ಕಡಿಮೆ ಕಾರ್ಬನ್ ಡೈಓಕ್ಸೈಡ್ ಹೊರ ಸೂಸುತ್ತಿದ್ದು, ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ಸ್ವಚ್ಛ ಭಾರತ; ಭಾರತದಲ್ಲೂ ಓಡಾಡಲಿರುವ 'ಬಯೋ ಬಸ್'

ಕಳೆದ ಮಾರ್ಚ್ ತಿಂಗಳಲ್ಲಿ ಬ್ರಿಟನ್ ರಸ್ತೆಯನ್ನು ತಲುಪಿದ್ದ 40 ಸೀಟು ಸಾಮರ್ಥ್ಯದ ಬಯೋ ಬಸ್ ಫುಲ್ ಟ್ಯಾಂಕ್‌ ಅನಿಲದಲ್ಲಿ 300 ಕೀ.ಮೀ. (186 ಮೈಲ್) ವರೆಗೆ ಓಡುವ ಸಾಮರ್ಥ್ಯ ಹೊಂದಿದೆ

ಸ್ವಚ್ಛ ಭಾರತ; ಭಾರತದಲ್ಲೂ ಓಡಾಡಲಿರುವ 'ಬಯೋ ಬಸ್'

ಅಂದರೆ ಇದು ವಾರ್ಷಿಕವಾಗಿ ಐದು ಮಂದಿ ಉತ್ಪಾದಿಸುವ ಮಲ ತ್ಯಾಜ್ಯಕ್ಕೆ ಸಮಾನವಾಗಿದೆ.

ಸ್ವಚ್ಛ ಭಾರತ; ಭಾರತದಲ್ಲೂ ಓಡಾಡಲಿರುವ 'ಬಯೋ ಬಸ್'

ಬಾತ್ ಬಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವ ಬಯೋ ಬಸ್ ಬ್ರಿಸ್ಟಾಲ್ ವಿಮಾನ ನಿಲ್ದಾಣದಿಂದ ಬಾತ್ ಸಿಟಿ ಸೆಂಟರ್‌ ವರೆಗೆ ಪಯಣ ಆರಂಭಿಸಿದೆ.

ಸ್ವಚ್ಛ ಭಾರತ; ಭಾರತದಲ್ಲೂ ಓಡಾಡಲಿರುವ 'ಬಯೋ ಬಸ್'

ಅವೊನ್‌ಮೌತ್‌ನಲ್ಲಿರುವ (Avonmouth) ವೆಸ್ಸೆಕ್ಸ್ ವಾಟರ್ (Wessex Water) ಅಂಗಸಂಸ್ಥೆಯಾಗಿರುವ ಜೆನಿಕೊ (GENeco) ಕಾರ್ಯಾಚರಣೆಯಲ್ಲಿರುವ ಬ್ರಿಸ್ಟಲ್ ಸೇವೆಜ್ ಟ್ರೀಟ್‌ಮೆಂಟ್ ವರ್ಕ್ಸ್‌ನ ಬೃಹತ್ ಕೈಗಾರಿಕೆಯಲ್ಲಿ ಮಾನವ ಮಲ ಹಾಗೂ ಆಹಾರ ತ್ಯಾಜ್ಯಗಳನ್ನು ಬಯೋಮಿಥೇನ್ ಗ್ಯಾಸ್ ಆಗಿ ಪರಿವರ್ತಿಸಲಾಗುತ್ತಿದೆ.

ಸ್ವಚ್ಛ ಭಾರತ; ಭಾರತದಲ್ಲೂ ಓಡಾಡಲಿರುವ 'ಬಯೋ ಬಸ್'

ಪ್ರಸ್ತುತ ಯೋಜನೆ ಭಾರತದಲ್ಲೂ ಪ್ರಾಯೋಗಿಕವಾಗಿ ಯಶ ಸಾಧಿಸಬಹುದೇ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ಚರ್ಚಿಸಿರಿ.

Most Read Articles

Kannada
Read more on ಬಸ್
English summary
Soon UPSRTC to introduce 'poo bus'
Story first published: Tuesday, June 30, 2015, 10:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X