ಸಿಗ್ನಲ್ ಜಂಪ್; ಲೈಸನ್ಸ್‌ಗೆ ದೂಸ್ರಾ ಎಸೆದ ಸುಪ್ರೀಂ

Written By:

ಮಹತ್ತರ ಬೆಳವಣಿಗೆಯೊಂದರಲ್ಲಿ ರಸ್ತೆ ಅಪಘಾತ ಪ್ರಕರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯ ನಿಯೋಜಿಸಿರುವ ಮಾಜಿ ನ್ಯಾಯಮೂರ್ತಿ ಕೆ. ಎಸ್. ರಾಧಾಕೃಷ್ಣ ನೇತೃತ್ವದ ಸಮಿತಿಯು ಮಹತ್ವದ ಶಿಫಾರಸುಗೈದಿದೆ.

ಇದರಂತೆ ಅಮಿತ ವೇಗದಲ್ಲಿ ವಾಹನ ಚಾಲನೆ ಮಾಡಿದ್ದಲ್ಲಿ, ಓವರ್ ಲೋಡಿಂಗ್, ಸರಕು ಸಾಗಾಣಿಕಾ ಬಂಡಿಯಲ್ಲಿ ಪ್ರಯಾಣಿಕರನ್ನು ಸಾಗಿಸುವುದು, ಪಾನಮತ್ತ ಚಾಲನೆ ಹಾಗೂ ಮೊಬೈಲ್ ಮುಂತಾದ ಮೂಲಭೂತ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಚಾಲನಾ ಪರವಾನಗಿ ಮುಟ್ಟಗೋಲು ಮಾಡುವಂತೆ ಪ್ರಸ್ತಾವನೆ ಮಾಡಲಾಗಿದೆ.

ಹೆಲ್ಮೆಟ್ ರಹಿತ ಬೈಕ್ ಚಾಲನೆ

ಅಷ್ಟೇ ಅಲ್ಲದೆ ದೇಶದೆಲ್ಲ ರಾಜ್ಯ ಸರಕಾರಗಳಿಗೆ ಶಿಫಾರಸುಗೈದಿರುವ ಸಮಿತಿಯು, ಓವರ್ ಸ್ಪೀಡಿಂಗ್, ರೆಡ್ ಲೈಟ್ ಸಿಗ್ನಲ್ ಜಂಪಿಂಗ್ ಮುಂತಾದ ರಸ್ತೆ ನಿಯಮ ಉಲ್ಲಂಘನಾ ಪ್ರಕರಣಗಳಲ್ಲೂ ಮೂರು ತಿಂಗಳ ವರೆಗೂ ಲೈಸನ್ಸ್ ರದ್ದುಗೊಳಿಸುವಂತೆ ಸೂಚಿಸಿದೆ.

ಇದೇ ಸಂದರ್ಭದಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವಂತೆಯೂ ಎಲ್ಲ ರಾಜ್ಯಗಳಿಗೂ ಸೂಚಿಸಲಾಗಿದೆ. ಅಲ್ಲದೆ ಇವೆಲ್ಲದಕ್ಕೂ ಸಂಬಂಧಿಸಿದಂತೆ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತಾಗಿ ಸೆಪ್ಟಂಬರ್ 01ರಂದು ಅನ್ವಯವಾಗುವಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಸಮಗ್ರ ವರದಿ ಸಲ್ಲಿಸುವಂತೆಯೂ ತಿಳಿಸಲಾಗಿದೆ.

English summary
Speeding will now lead to suspension of licence for 3 months

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark