ಅತಿ ಶೀಘ್ರದಲ್ಲೇ ಟಾಟಾ ನ್ಯಾನೋ ಜೆನ್ ಎಕ್ಸ್ ಬಿಡುಗಡೆ

Written By:

ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಅತಿ ಶೀಘ್ರದಲ್ಲೇ ಟಾಟಾದ ಹೊಚ್ಚ ಹೊಸತಾದ ನ್ಯಾನೋ ಜೆನ್ ಎಕ್ಸ್ (Nano GenX) ಮಾದರಿಯು ಬಿಡುಗಡೆಯಾಗಲಿದೆ. ಬಲ್ಲ ಮೂಲಗಳ ಪ್ರಕಾರ ಟಾಟಾ ನ್ಯಾನೋ ಜೆನ್ ಎಕ್ಸ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಕಾರು 2015 ಮೇ 19ರಂದು ಬಿಡುಗಡೆಯಾಗಲಿದೆ.

ಇವನ್ನೂ ಓದಿ: ನ್ಯಾನೋ ಸೆಮಿ ಆಟೋಮ್ಯಾಟಿಕ್ ಕಾರಿನ ವಿಶೇಷತೆಗಳೇನು ?

ಈಗಗಾಲೇ ಮಾಧ್ಯಮ ಮಿತ್ರರ ಮುಂದೆ ಪ್ರದರ್ಶನ ಕಂಡಿರುವ ಹೊಸ ಸೆಮಿ ಆಟೋಮ್ಯಾಟಿಕ್ ಕಾರಿನಲ್ಲಿ ಅತ್ಯಂತ ಸರಳ ಗೇರ್ ಬಾಕ್ಸ್ ಆಳವಡಿಸಲಾಗಿದ್ದು, ನಗರ ಪ್ರದೇಶದ ಸಂಚಾರವನ್ನು ಇನ್ನಷ್ಟು ಸರಳವಾಗಿಸಲಿದೆ.

tata genx nano

ಟಾಟಾ ನ್ಯಾನೋ ಭಾಗ್ಯ ರೇಖೆಯನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಸ ಜೆನ್ ಎಕ್ಸ್ ಎಎಂಟಿ ಮಾದರಿಯು ಹೊಂದಿದೆ. ಇದು ದೇಶದ ಮಾರುಕಟ್ಟೆಯಲ್ಲಿ ಲಭ್ಯವಾಗಲಿರುವ ಅತಿ ಕಡಿಮೆ ಬೆಲೆಯ ಎಎಂಟಿ ಮಾದರಿ ಎನಿಸಿಕೊಳ್ಳಲಿದೆ.

ಇನ್ನು ಹಿಂಬದಿಯಲ್ಲಿ ತೆರೆಯಬಹುದಾದ ಢಿಕ್ಕಿ ಜಾಗವು ಇನ್ನಷ್ಟು ವೈಶಿಷ್ಟ್ಯಕ್ಕೆ ಕಾರಣವಾಗಲಿದೆ. ಇವೆಲ್ಲವೂ ನ್ಯಾನೋ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ.

tata genx nano

ಇಟಲಿಯ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯ ಟಾಟಾ ಸಂಸ್ಥೆಗೆ ಎಎಂಟಿ ವ್ಯವಸ್ಥೆಯನ್ನು ಒದಗಿಸಲಿದೆ. ಪ್ರಸ್ತುತ ತಂತ್ರಗಾರಿಕೆಯನ್ನು ನಾವೀಗಲೇ ಟಾಟಾ ಜೆಸ್ಟ್ ಕಾರಿನಲ್ಲಿ ನೋಡಿರುತ್ತೇವೆ. ಅತ್ತ ಮಾರುತಿ ಸುಜುಕಿ ಸೆಲೆರಿಯೊ ಹಾಗೂ ಆಲ್ಟೊ ಕೆ10 ಮಾದರಿಯಲ್ಲೂ ಇದಕ್ಕೆ ಸಮಾನವಾದ ವ್ಯವಸ್ಥೆಯಿದೆ.

ನೂತನ ನ್ಯಾನೋ ಜೆನ್ ಎಕ್ಸ್ ಮಾದರಿಯು 624 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 37 ಅಶ್ವಶಕ್ತಿ (51 ಟಾರ್ಕ್) ಉತ್ಪಾದಿಸಲಿದೆ. ಹಾಗಿದ್ದರೂ ನ್ಯಾನೋ ಟಾಪ್ ಎಂಡ್ ವೆರಿಯಂಟ್ ನಲ್ಲಿ ಮಾತ್ರ ಎಎಂಟಿ ಆಯ್ಕೆ ಲಭ್ಯವಿರಲಿದೆ. ಇನ್ನು ಸ್ಪೋಕ್ಡ್ ಹೆಡ್ ಲ್ಯಾಂಪ್, ಅಲಾಯ್ ವೀಲ್, ಬಣ್ಣಗಳು ಹಾಗೂ ಇವೆಲ್ಲದಕ್ಕೂ ಮಿಗಿಲಾಗಿ ಮೈಲೇಜ್ ಗೆ ಹೆಚ್ಚಿನ ಧಕ್ಕೆಯುಂಟಾಗುವುದಿಲ್ಲ ಎಂಬುದು ನ್ಯಾನೋ ಜೆನ್ ಎಕ್ಸ್ ಮಾದರಿಯ ವಿಶಿಷ್ಟತೆಯಾಗಿರಲಿದೆ.

English summary
Tata Motors will be launching its highly anticipated Nano GenX in India on 19th May, 2015. Booking for this new model has already commenced and deliveries will begin post launch.
Story first published: Wednesday, May 6, 2015, 9:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark