2015ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳು

By Nagaraja

ನೋಡ ನೋಡುತ್ತಿರುವಂತಲೇ ಕಾಲ ಚಕ್ರ ಮಗದೊಂದು ವರ್ಷವನ್ನು ಕ್ರಮಿಸಿರುತ್ತದೆ. 2015ನೇ ಸಾಲಿನಲ್ಲಿ ವಾಹನೋದ್ಯಮದಲ್ಲಿ ಅನೇಕ ಬದಲಾವಣೆಗಳು ಕಂಡುಬಂದಿದ್ದು, ಬಹುತೇಕ ಮುಂಚೂಣಿಯ ಸಂಸ್ಥೆಗಳು ಭಾರತವನ್ನು ತನ್ನ ಕೇಂದ್ರ ಬಿಂದುವನ್ನಾಗಿಸಿದೆ.

Also Read: 2015ರಲ್ಲಿ ಫೇಸ್‌ಬುಕ್‌ನಲ್ಲಿ ಮಿಂಚಿದ ಅಗ್ರ 10 ಲೇಖನಗಳು

ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ವಾಹನ ಸಂಸ್ಥೆಗಳು 2015ನೇ ಸಾಲಿನಲ್ಲಿ ಅನೇಕ ಕಾರುಗಳನ್ನು ಬಿಡುಗಡೆಗೊಳಿಸಿದೆ. ಈ ಪೈಕಿ ಜನ ಮನ ಗೆದ್ದಿರುವ ಅಗ್ರ 10 ಕಾರುಗಳ ಬಗ್ಗೆ ನಾವಿಲ್ಲಿ ಚರ್ಚಿಸುವ ಪ್ರಯತ್ನ ಪಡಲಿದ್ದೇವೆ.

10. ದಟ್ಸನ್ ಗೊ ಪ್ಲಸ್

10. ದಟ್ಸನ್ ಗೊ ಪ್ಲಸ್

ನಾಲ್ಕು ಮೀಟರ್ ಉದ್ದ ಮಿತಿಯೊಳಗಿನಗ ಏಳು ಸೀಟುಗಳ ಆಕರ್ಷಕ ಎಂಪಿವಿ ಕಾರನ್ನು ಕಾರನ್ನು ಯಾರು ತಾನೇ ಮರೆಯಲು ಸಾಧ್ಯ? ಬಜೆಟ್ ವಾಹನ ಖರೀದಿಗಾರರ ಪಾಲಿಗೆ ದಟ್ಸನ್ ಗೊ ಪ್ಲಸ್ ವರದಾನವಾಗಿ ಪರಿಣಮಿಸಿರುವುದಂತೂ ಸತ್ಯ. ಪ್ರಸ್ತುತ ಕಾರು ಡ್ರೈವ್ ಸ್ಪಾರ್ಕ್ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ದಟ್ಸನ್ ಗೊ ಪ್ಲಸ್ ಸಂಪೂರ್ಣ ಚಾಲನಾ ವಿಮರ್ಶೆ ಓದಿ

09. ಅಬಾರ್ತ್ ಪುಂಟೊ

09. ಅಬಾರ್ತ್ ಪುಂಟೊ

ದೇಶದಲ್ಲಿರುವ ತನ್ನ ಶ್ರೇಣಿಯ ವಾಹನಗಳನ್ನು ವಿಸ್ತರಿಸಿರುವ ಫಿಯೆಟ್ ಇಂಡಿಯಾ, ಶಕ್ತಿಶಾಲಿ ಅಬಾರ್ತ್ ಪುಂಟೊ ಮತ್ತು ಅಬಾರ್ತ್ ಅವೆಂಚ್ಯುರಾ ಮಾದರಿಗಳನ್ನು ಬಿಡುಗಡೆಗೊಳಿಸಿತ್ತು. ಫಿಯೆಟ್ ಅಬಾರ್ತ್ ಪುಂಟೊ 200 ಎನ್‌ಎಂ ತಿರುಗುಬಲದಲ್ಲಿ 145 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಿದೆ.

08. ಮಾರುತಿ ಸುಜುಕಿ ಎಸ್ ಕ್ರಾಸ್

08. ಮಾರುತಿ ಸುಜುಕಿ ಎಸ್ ಕ್ರಾಸ್

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ತನ್ನ ಬಹುನಿರೀಕ್ಷಿತ ಎಸ್-ಕ್ರಾಸ್ ಕಾರನ್ನು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಮಾರುತಿಯ ಪ್ರೀಮಿಯಂ ನೆಕ್ಸಾ ಶೋ ರೂಂಗಳಲ್ಲಿ ಮಾತ್ರ ಎಸ್-ಕ್ರಾಸ್ ಮಾರಾಟಕ್ಕೆ ಲಭ್ಯವಿದೆ. ಮುಂದಕ್ಕೆ ಓದಿ

07. ಹೋಂಡಾ ಜಾಝ್

07. ಹೋಂಡಾ ಜಾಝ್

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ಹೋಂಡಾ, ಭಾರತದಲ್ಲಿ ಅತಿ ನೂತನ ಜಾಝ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರನ್ನು ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಆಲ್ ನ್ಯೂ ಜಾಝ್ ಪ್ರಮುಖವಾಗಿಯೂ ಹ್ಯುಂಡೈ ಎಲೈಟ್ ಐ20 ಮಾದರಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಹೋಂಡಾ ಜಾಝ್ ಸಮಗ್ರ ವಿಮರ್ಶೆ ಓದಲು ಕ್ಲಿಕ್ ಮಾಡಿರಿ

06. ಫೋರ್ಡ್ ಆಸ್ಪೈರ್

06. ಫೋರ್ಡ್ ಆಸ್ಪೈರ್

ಮಗದೊಂದು ಆಕರ್ಷಕ ಕಾರು ಭಾರತ ವಾಹನ ಮಾರುಕಟ್ಟೆ ಪ್ರವೇಶ ಪಡೆದಿದೆ. ಅದು ಬೇರೆ ಯಾವುದಲ್ಲ. ಅಮೆರಿಕದ ಐಕಾನಿಕ್ ವಾಹನ ಸಂಸ್ಥೆ ಫೋರ್ಡ್ ಹೊರತಂದಿರುವ ಅತಿ ನೂತನ ಫಿಗೊ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರು.

ನಿಮ್ಮ ಅಭಿಲಾಷೆಗೆ ತಕ್ಕ ಕಾರು - ಫೋರ್ಡ್ ಫಿಗೊ ಆಸ್ಪೈರ್ ಸಮಗ್ರ ವಿಮರ್ಶೆ ಓದಿ

05. ಮಾರುತಿ ಸುಜುಕಿ ಬಲೆನೊ

05. ಮಾರುತಿ ಸುಜುಕಿ ಬಲೆನೊ

ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರನ್ನು ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ಬಿಡುಗಡೆ ಮಾಡಿತ್ತು. ಇದು ಹ್ಯುಂಡೈ ಎಲೈಟ್ ಐ20 ಕಾರಿಗೆ ನೇರ ಪ್ರತಿಸ್ಪರ್ಧಿಯಲ್ಲದೆ ನಿರೀಕ್ಷೆಗೂ ಮೀರಿದ ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

04. ಮಹೀಂದ್ರ ಟಿಯುವಿ300

04. ಮಹೀಂದ್ರ ಟಿಯುವಿ300

ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದಿರುವ ಮಹೀಂದ್ರ ಟಿಯುವಿ300, ಅತ್ಯುತ್ತಮ ಬೇಡಿಕೆ ಕಾಪಾಡಿಕೊಳ್ಳಲು ಯಶಸ್ವಿಯಾಗಿದೆ. ಮಹೀಂದ್ರ ಟಿಯುವಿ300 ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ

03. ಫೋರ್ಡ್ ಫಿಗೊ

03. ಫೋರ್ಡ್ ಫಿಗೊ

ಹೊಸತಾದ ಫಿಗೊ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರನ್ನು ಪರಿಚಯಿಸಿದ್ದ ಅಮೆರಿಕ ಮೂಲದ ಪ್ರತಿಷ್ಠಿತ ಫೋರ್ಡ್ ಸಂಸ್ಥೆಯು ಮಗದೊಂದು ಆಕರ್ಷಕ ಫಿಗೊ ಹ್ಯಾಚ್ ಬ್ಯಾಕ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಎರಡನೇ ತಲೆಮಾರಿನ ಫಿಗೊ ಕಾರು ಈಗ ಮಾರುಕಟ್ಟೆಯಲ್ಲಿರುವ ಹಳೆಯ ಮಾದರಿಯ ಫಿಗೊ ಹ್ಯಾಚ್ ಬ್ಯಾಕ್ ಸ್ಥಾನವನ್ನು ತುಂಬಲಿದೆ.

ನ್ಯೂ ಫೋರ್ಡ್ ಫಿಗೊ ಸಂಪೂರ್ಣ ಚಾಲನಾ ವಿಮರ್ಶೆ ಓದಲು ಕ್ಲಿಕ್ಕಿಸಿ

02. ರೆನೊ ಕ್ವಿಡ್

02. ರೆನೊ ಕ್ವಿಡ್

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಹೊಸ ಹವಾ ಎಬ್ಬಿಸಿರುವ ರೆನೊ ಕ್ವಿಡ್ ಬಿಡುಗಡೆ ಬೆನ್ನಲ್ಲೇ 75,000ಕ್ಕೂ ಹೆಚ್ಚು ಬುಕ್ಕಿಂಗ್ಸಿ ಗಿಟ್ಟಿಸಿಕೊಳ್ಳುವ ಮುಖಾಂತರ ಭಾರಿ ಸದ್ದು ಮಾಡುತ್ತಿದೆ. ಇದು ಮುಂದಿನ ದಿನಗಳಲ್ಲಿ ಆಲ್ಟೊ ಹಿಮ್ಮೆಟ್ಟಿಸುವ ನಂಬಿಕೆಯಲ್ಲಿದೆ.

ರೆನೊ ಕ್ವಿಡ್ ಸಂಪೂರ್ಣ ಚಾಲನಾ ವಿಮರ್ಶೆ ಓದಲು ಕ್ಲಿಕ್ಕಿಸಿ

01. ಹ್ಯುಂಡೈ ಕ್ರೆಟಾ

01. ಹ್ಯುಂಡೈ ಕ್ರೆಟಾ

ನಿಸ್ಸಂಶವಾಗಿಯೂ ಭಾರತದ ವರ್ಷದ ಕಾರು ಪ್ರಶಸ್ತಿಗೆ ಪಾತ್ರವಾಗಿರುವ ಹ್ಯುಂಡೈ ಕ್ರೆಟಾ ಎಲ್ಲ ಹಂತದಲ್ಲೂ 2015ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಟಾಪ್ 10 ಕಾರುಗಳ ಪೈಕಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಕ್ರೆಟಾ vs ಡಸ್ಟರ್; ಮಿನಿ ಎಸ್‌ಯುವಿಗಳ ಮಲ್ಲ ಯುದ್ದ ಮುಂದಕ್ಕೆ ಓದಿ

ಹ್ಯುಂಡೈ ಕ್ರೆಟಾ ಮಿನಿ ಎಸ್‌ಯುವಿ ವಿಶಿಷ್ಟತೆಗಳೇನು? ಇಲ್ಲಿದೆ ನೋಡಿ

Most Read Articles

Kannada
English summary
DriveSpark Dispatch: 10 Best New Car Launches In 2015
Story first published: Thursday, December 24, 2015, 17:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X