ಬೇಡಿಕೆ ಇಳಿಕೆ; ಟೊಯೊಟಾ ಕಾರಿನ ಮಾರಾಟಕ್ಕೆ ಬಿತ್ತು ಬ್ರೇಕ್

Written By:

ಬೇಡಿಕೆ ಗಣನೀಯವಾಗಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ತನ್ನ ಜನಪ್ರಿಯ ಎಟಿಯೋಸ್ ಲಿವಾ ಸ್ಪೋರ್ಟಿವೊ ಮಾರಾಟವನ್ನು ಅಂತ್ಯಗೊಳಿಸಲು ಜಪಾನ್ ಮೂಲದ ಟೊಯೊಟಾ ಸಂಸ್ಥೆ ನಿರ್ಧರಿಸಿದೆ.

ಮಾರಾಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಟೊಯೊಟಾ ರೇಸಿಂಗ್ ಅಭಿವೃದ್ಧಿಯಿಂದ ನೆರವನ್ನು ಪಡೆದು ಎಟಿಯೋಸ್ ಲಿವಾ ಸ್ಪೋರ್ಟಿವೊ ವಿಶೇಷ ಆವೃತ್ತಿಯನ್ನು ಪರಿಚಯಿಸಲಾಗಿತ್ತು. ಅಲ್ಲದೆ 'ವಿ' ಎಂಬ ವೆರಿಯಂಟ್ ನಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಾಗಿತ್ತು.

To Follow DriveSpark On Facebook, Click The Like Button
ಟೊಯೊಟಾ ಎಟಿಯೋಸ್ ಲಿವಾ ಸ್ಪೋರ್ಟಿವೊ

ನಿಮ್ಮ ಮಾಹಿತಿಗಾಗಿ, ಟೊಯೊಟಾ ಎಟಿಯೋಸ್ ಲಿವಾ ಸ್ಪೋರ್ಟಿವೊ ಆವೃತ್ತಿಯು 1.5 ಲೀಟರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 131.99 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇವೆಲ್ಲದರ ಜೊತೆಗೆ ವಿಶೇಷ ಸ್ಪೋರ್ಟಿ ಬಾಡಿ ಕಿಟ್, ವಿಶೇಷ ಆವೃತ್ತಿಯ ಲಾಂಛನ, ರೇಸಿಂಗ್ ಡಿಕಾಲ್ಸ್ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಒಟ್ಟಿನಲ್ಲಿ ಸಾಮಾನ್ಯ ಆವೃತ್ತಿಗಿಂತಲೂ ವಿಭಿನ್ನವಾಗಿ ಗುರುತಿಸಲು ಎಲ್ಲ ಪ್ರಯತ್ನವನ್ನು ಮಾಡಲಾಗಿತ್ತು.

ಪ್ರಮುಖವಾಗಿಯೂ ಫೋಕ್ಸ್ ವ್ಯಾಗನ್ ಪೊಲೊ ಮಾದರಿಗೆ ಪ್ರತಿಸ್ಪರ್ಧಿಯಾಗಿದ್ದ ಟೊಯೊಟಾ ಎಟಿಯೋಸ್ ಲಿವಾ ಸ್ಪೋರ್ಟಿವೊ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಆಗಮನವಾಗಿತ್ತು. ಆದರೆ ಕಳಪೆ ಮಾರಾಟದ ಹಿನ್ನೆಲೆಯಲ್ಲಿ ಎಟಿಯೋಸ್ ಲಿವಾ ಸ್ಪೋರ್ಟಿವ್ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ.

English summary
Toyota Discontinues Etios Liva Sportivo Owing To Demand
Story first published: Thursday, October 8, 2015, 17:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark