ನವ ಚೈತನ್ಯ ತುಂಬಲಿರುವ ಫೋಕ್ಸ್‌ವ್ಯಾಗನ್ ಟೈಗ್ವಾನ್

Posted By:

ಜರ್ಮನಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಭಾರತದಲ್ಲಿ ಅತಿ ನೂತನ ಕ್ರೀಡಾ ಬಳಕೆಯ ವಾಹನ ಬಿಡುಗಡೆ ಮಾಡುವ ಯೋಜನೆಯ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ.

ಇದರ ಮುಂದುವರಿದ ಬೆಳವಣಿಗೆಯೆಂತೆಯೇ ಭಾರತಕ್ಕೆ ಪ್ರವೇಶಿಸಲಿರುವ ಬಹುನಿರೀಕ್ಷಿ ಟೈಗ್ವಾನ್ ಎಸ್‌ಯುವಿ ದೇಶದಲ್ಲಿ ಸ್ಥಳೀಯವಾಗಿ ನಿರ್ಮಾಣವಾಗುವ ಸಾಧ್ಯತೆಗಳು ಹೆಚ್ಚಿವೆ.

ಫೋಕ್ವ್ ವ್ಯಾಗನ್ ಟೈಗ್ವಾನ್

ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ಮೂಲಕ ಗರಿಷ್ಠ ಮಾರಾಟ ದಾಖಲಿಸಿವುದೇ ಸಂಸ್ಥೆಯ ಉದ್ದೇಶವಾಗಿದೆ. ನಿಮ್ಮ ಮಾಹಿತಿಗಾಗಿ, ಮುಂದಿನ ವಾರ ನಡೆಯಲಿರುವ ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲಿ ನೂತನ ಟೈಗ್ವಾರ್ ಭರ್ಜರಿ ಎಂಟ್ರಿ ಕೊಡಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಾಗಲಿರುವ ಫೋಕ್ಸ್ ವ್ಯಾಗನ್ ಟೈಗ್ವಾನ್ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಳ್ಳುತ್ತಿದೆ. ಇದು ಟು ವೀಲ್ ಹಾಗೂ ಫೋರ್ ವೀಲ್ ಡ್ರೈವ್ ನಲ್ಲೂ ಲಭ್ಯವಾಗಲಿದೆ ಎಂಬುದು ಸದ್ಯದ ಹಾಟ್ ಸುದ್ದಿ.

ಫೋಕ್ವ್ ವ್ಯಾಗನ್ ಟೈಗ್ವಾನ್

ಹಾಗೆಂದ ಮಾತ್ರಕ್ಕೆ ಫೋಕ್ಸ್ ವ್ಯಾಗನ್ ಟೈಗ್ವಾನ್ ಭಾರತ ಪ್ರವೇಶ 2016ನೇ ಸಾಲಿನಲ್ಲಷ್ಟೇ ನನಸಾಗಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರೀಮಿಯಂ ಎಸ್ ಯುವಿ ವಿಭಾಗದಲ್ಲಿ ನವ ಚೈತನ್ಯಕ್ಕೆ ಕಾರಣವಾಗಲಿದೆ.

English summary
Volkswagen India Planning On Local Assembly Of Tiguan SUV
Story first published: Saturday, August 15, 2015, 11:00 [IST]
Please Wait while comments are loading...

Latest Photos