20 ತಿಂಗಳಲ್ಲೇ ವೋಲ್ವೋ ಹೊಸ ಕಾರು ಅಭಿವೃದ್ಧಿ

Posted By:

ಜಗತ್ತಿನ ವಾಹನ ತಯಾರಿಕ ಸಂಸ್ಥೆಗಳ ಪೈಕಿ ಸದಾ ವಿಶಿಷ್ಟತೆ ಕಾಪಾಡಿಕೊಂಡಿರುವ ವೋಲ್ವೋ ಸಂಸ್ಥೆಯು ಈಗ 20 ತಿಂಗಳಲ್ಲೇ ಹೊಸ ಕಾರನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ.

ಅಂದರೆ ಸಾಮಾನ್ಯ ವೋಲ್ವೋ ಕಾರಿನ ಅಭಿವೃದ್ದಿಗೆ ತಗಲುವ ಅರ್ಧದಷ್ಟು ಸಮಯ ಮಾತ್ರ ಇದಕ್ಕೆ ವ್ಯಯವಾಗಲಿದೆ. ಈ ಹಿಂದೆ ವೋಲ್ವೋ ವಿ40 ಕಾರಿನ ಅಭಿವೃದ್ಧಿಗೆ 40 ತಿಂಗಳುಗಳ ಕಾಲಾವಕಾಶ ಬೇಕಾಗಿತ್ತು.

To Follow DriveSpark On Facebook, Click The Like Button
volvo xc90

ಇನ್ನು ಟೊಯೊಟಾ ಹಾಗೂ ಮಾಜ್ದಾಗಳಂತಹ ಸಂಸ್ಥೆಗಳಿಗೆ ಹೊಸ ಕಾರು ಅಭಿವೃದ್ಧಿಪಡಿಸಲು ಸರಾಸರಿ 26 ತಿಂಗಳು ಬೇಕಾಗುತ್ತದೆ. ಈಗ ವೋಲ್ವೋ ಸಂಸ್ಥೆಯು ಇದನ್ನೆಲ್ಲ ಮೀರಿ ನಿಲ್ಲುವ ಯೋಜನೆ ಹೊಂದಿದೆ.

ಇದಕ್ಕಾಗಿ ಹೊಸತಾದ ಮೊಡ್ಯುಲರ್ ಫ್ಲ್ಯಾಟ್‌ಫಾರ್ಮ್ ರಚಿಸಲಿದೆ. ಹಾಗೆಯೇ ಬೇಸಿಕ್ ಫ್ಲ್ಯಾಟ್‌ಫಾರ್ಮ್‌ಗಳ ಸಂಖ್ಯೆಯನ್ನು ಎರಡಕ್ಕೆ ಇಳಿಕೆಗೊಳಿಸಲಾಗುವುದು. ಒಟ್ಟಾರೆಯಾಗಿ ಎಲ್ಲ ವೋಲ್ವೋ ಕಾರುಗಳನ್ನು 20 ತಿಂಗಳಲ್ಲೇ ಅಭಿವೃದ್ಧಿಗೊಳಿಸುವುದು ಸ್ವೀಡನ್ ಮೂಲದ ಸಂಸ್ಥೆಯ ಗುರಿಯಾಗಿದೆ.

English summary
Volvo is looking at developing new cars in just 20 months, once its new modular platforms are implemented. That is about half the time Volvo takes today and way faster than other automakers take.
Story first published: Wednesday, March 18, 2015, 9:17 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark