ಹೊಸ ವರ್ಷದಲ್ಲಿ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ

Written By:

ಹೊಸ ವರ್ಷ ಬರಮಾಡಿಕೊಳ್ಳಲು ಸಜ್ಜಾಗುತ್ತಿರುವ ಅಮೆರಿಕ ಮೂಲದ ಪ್ರತಿಷ್ಠಿತ ವಾಹನ ಸಂಸ್ಥೆ ಫೋರ್ಡ್, ಭಾರತೀಯರಿಗಾಗಿ ವಿನೂತನ ಕೊಡುಗೆಯೊಂದನ್ನು ನೀಡಲಿದೆ. ಹೌದು, ಎಲ್ಲ ಹೊಸತನದಿಂದ ಕೂಡಿರುವ ಅತಿ ನೂತನ ಇಕೊಸ್ಪೋರ್ಟ್ ಕಾರು 2017 ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಹೊಸ ವರ್ಷದಲ್ಲಿ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ

2016 ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿರುವ ಫೋರ್ಡ್ ಇಕೊಸ್ಪೋರ್ಟ್ ಪರಿಷ್ಕೃತ ಕಾರು ತವರೂರಾದ ಅಮೆರಿಕ ಸೇರಿದಂತೆ ಭಾರತ ಮಾರುಕಟ್ಟೆಯನ್ನು ತಲುಪುತ್ತಿದೆ.

ಹೊಸ ವರ್ಷದಲ್ಲಿ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ

ಭಾರತ ಆವೃತ್ತಿಯಲ್ಲಿ ಪ್ರಮುಖವಾಗಿಯೂ ಅಂದತೆಯ ಬದಲಾವಣೆ ಕಂಡುಬರಲಿದೆ. ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಮಾರ್ಪಾಡುಗಳು ಕಂಡುಬರುವುದಿಲ್ಲ.

ಹೊಸ ವರ್ಷದಲ್ಲಿ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ

ಹೊಸ ಇಸೊಸ್ಪೋರ್ಟ್ ನಲ್ಲಿರುವ 1.5 ಲೀಟರ್ ಪೆಟ್ರೋಲ್ ಡೀಸೆಲ್ ಎಂಜಿನ್ ಗಳು ಅನುಕ್ರಮವಾಗಿ 100 (205 ಎನ್ ಎಂ ತಿರುಗುಬಲ) ಹಾಗೂ 110 ಅಶ್ವಶಕ್ತಿಯನ್ನು (140 ಎನ್ ಎಂ ತಿರುಗುಬಲ) ಉತ್ಪಾದಿಸಲಿದೆ.

ಹೊಸ ವರ್ಷದಲ್ಲಿ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ

ಇದರ ಜೊತೆಗೆ 1.0 ಲೀಟರ್ ಇಕೊಬೂಸ್ಟ್ ಎಂಜನ್ ಆಯ್ಕೆಯು ಇರುತ್ತದೆ. ಅತ್ತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 1.5 ಲೀಟರ್ ಡ್ರಾಗನ್ ತ್ರಿ ಸಿಲಿಂಡರ್ ನೈಸರ್ಗಿಕ ಚೋಷಿತ ಪೆಟ್ರೋಲ್ ಜೊತೆಗೆ ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯು ಜೋಡಣೆಯಾಗಲಿದೆ.

ಹೊಸ ವರ್ಷದಲ್ಲಿ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ

ಕಾರಿನ ಮುಂಭಾದಲ್ಲಿ ಪರಿಷ್ಕೃತ ಗ್ರಿಲ್, ಹೆಡ್ ಲ್ಯಾಂಪ್, ಟೈಲ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಲಿದೆ. ಷಡ್ಭುಜೀಯ ಗ್ರಿಲ್ ಹಾಗೂ ಪರಿಷ್ಕೃತ ಬಂಪರ್ ಗಳು ಇದರಲ್ಲಿದೆ.

ಹೊಸ ವರ್ಷದಲ್ಲಿ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ

ಈಗಿನ ಮಾದರಿಗೆ ಹೋಲಿಸಿದಾಗ ಬದಿಯಲ್ಲಿ ನೂತನ ಅಲಾಯ್ ವೀಲ್ ಹೊರತಾಗಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ.

ಹೊಸ ವರ್ಷದಲ್ಲಿ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ

ಕಾರಿನೊಳಗೆ ಪರಿಷ್ಕೃತ ಹೋದಿಕೆ, ಹೊಸತಾದ ಸ್ಟೀರಿಂಗ್ ವೀಲ್, ಸಿಂಕ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಹೊಸ ಬಣ್ಣಗಳ ಆಯ್ಕೆಯಿರಲಿದೆ.

ಹೊಸ ವರ್ಷದಲ್ಲಿ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ

ಇನ್ನುಳಿದಂತೆ ಪಾರ್ಕಿಂಗ್ ಸೆನ್ಸಾರ್, ರಿವರ್ಸ್ ಕ್ಯಾಮೆರಾ, ಬ್ಯಾಂಗ್, ಓಲುಫ್ಸೆನ್ ಸೌಂಡ್ ಸಿಸ್ಟಂ, ಏರ್ ಬ್ಯಾಗ್ ಹಾಗೂ ಎಮರ್ಜನ್ಸಿ ಅಸಿಸ್ಟ್ ಗಳಂತಹ ಗರಿಷ್ಠ ಸುರಕ್ಷಾ ವೈಶಿಷ್ಟ್ಯಗಳು ಜೋಡಣೆಯಾಗಲಿದೆ.

ಹೊಸ ವರ್ಷದಲ್ಲಿ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆ

ಅಂದ ಹಾಗೆ ನೂತನ ಇಕೊಸ್ಪೋರ್ಟ್ ಕಾರು ದೇಶದಲ್ಲಿ ಏಳರಿಂದ 10 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

Read more on ಫೋರ್ಡ್ ford
English summary
Ford EcoSport Facelift To Be Launched In January 2017
Story first published: Tuesday, December 27, 2016, 11:05 [IST]
Please Wait while comments are loading...

Latest Photos