2016 ಆಟೋ ಎಕ್ಸ್‌ಪೋದಲ್ಲಿ ಬರಲಿರುವ ಎಸ್‌ಯುವಿಗಳು

Written By:

2016 ಆಟೋ ಎಕ್ಸ್ ಪೋ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ವಾಹನ ವಲಯದಲ್ಲಿ ಹೊಸ ಹೊಸ ಮಾದರಿಗಳ ಚರ್ಚೆಗಳು ತೀವ್ರಗತಿಯಲ್ಲಿ ನಡೆಯುತ್ತಿದೆ.

Also Read: ಪ್ರತಿಷ್ಠಿತ 2016 ಆಟೋ ಎಕ್ಸ್ ಪೋಗೆ ಸಜ್ಜಾದ ವಾಹನ ಲೋಕ

ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಭಾರತೀಯ ವಾಹನ ರಂಗ ಹೆಚ್ಚೆಚ್ಚು ಕ್ರೀಡಾ ವಾಹನ ವಿಭಾಗಕ್ಕೆ (ಎಸ್‌ಯುವಿ) ವಾಲುತ್ತಿರುವ ಪ್ರಸಂಗ ಕಂಡುಬಂದಿರುವಂತೆಯೇ 2016 ಆಟೋ ಎಕ್ಸ್ ಪೋದಲ್ಲೂ ಬಹುತೇಕ ಸಂಸ್ಥೆಗಳು ಎಸ್‌ಯುವಿ ಹಾಗೂ ಕ್ರಾಸೋವರ್ ಮಾದರಿಗಳತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲಿದೆ.

To Follow DriveSpark On Facebook, Click The Like Button
ದಟ್ಸನ್ ಗೊ ಕ್ರಾಸ್

ದಟ್ಸನ್ ಗೊ ಕ್ರಾಸ್

ನಿಸ್ಸಾನ್ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್ ರೆಡಿ ಗೊ ಸಣ್ಣ ಕಾರನ್ನು ಪರಿಚಯಿಸುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಇದೇ ಸಂದರ್ಭದಲ್ಲಿ ಮಗದೊಂದು ನೂತನ ಗೊ ಕ್ರಾಸ್ ಮಾದರಿಯು ಅನಾವರಣಗೊಳ್ಳುವ ಸಾಧ್ಯತೆಯಿದೆ. 2015 ಟೊಕಿಯೊ ಮೋಟಾರು ಶೋದಲ್ಲೂ ದಟ್ಸನ್ ಗೊ ಕ್ರಾಸ್ ಅನಾವರಣಗೊಂಡಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇದು ಗೊ ಪ್ಲಸ್ ಎಂಪಿವಿ ತಳಹದಿಯಲ್ಲೇ ನಿರ್ಮಾಣವಾಗಲಿದ್ದು, ಗೊ ದಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ಎಂಜಿನ್ ಬಳಕೆಯಾಗಲಿದೆ.

ಮಾರುತಿ ಕಾಂಪಾಕ್ಟ್ ಎಸ್‌ಯುವಿ

ಮಾರುತಿ ಕಾಂಪಾಕ್ಟ್ ಎಸ್‌ಯುವಿ

ವೈಬಿಎ ಎಂಬ ಕೋಡ್ ಪಡೆದುಕೊಂಡಿರುವ ಮಾರುತಿ ಸುಜುಕಿಯ ನೂತನ ಕಾಂಪಾಕ್ಟ್ ಎಸ್‌ಯುವಿ ವಿಟಾರಾ ಬ್ರಿಝಾ ಸಹ ಇದೇ ವಾಹನ ಮೇಳದಲ್ಲಿ ಪಾದಾರ್ಪಣೆ ಮಾಡಲಿದೆ. ಜಾಗತಿಕವಾಗಿ ಮಾರಾಟದಲ್ಲಿರುವ ವಿಟಾರಾದಿಂದ ಸ್ಪೂರ್ತಿ ಪಡೆದು ರಚಿಸಿರುವ ಈ ನಾಲ್ಕು ಮೀಟರ್ ಉದ್ದದೊಳಗಿನ ಮಿನಿ ಎಸ್‌ಯುವಿ ಕಾರಿನಲ್ಲಿ ಐದು ಮಂದಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ.

2016 ಡಸ್ಟರ್ ಫೇಸ್‌ಲಿಫ್ಟ್

2016 ಡಸ್ಟರ್ ಫೇಸ್‌ಲಿಫ್ಟ್

ಈಗಾಗಲೇ ಮಾಹಿತಿ ನೀಡಿರುವಂತೆಯೇ ಪರಿಷ್ಕೃತ ರೆನೊ ಡಸ್ಟರ್ ಎಂಟ್ರಿಗೆ ಕಾಲ ನಿಗದಿಯಾಗಿದೆ. ಹೊಸ ಡಸ್ಟರ್ ಎಎಂಟಿ ಆಯ್ಕೆಯಲ್ಲೂ ಲಭ್ಯವಾಗಲಿದ್ದು, ವಾಹನ ಪ್ರೇಮಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಟಾಟಾ ನೆಕ್ಸನ್

ಟಾಟಾ ನೆಕ್ಸನ್

ದೇಶದ ಅತಿ ದೊಡ್ಡ ಟಾಟಾ ಸಂಸ್ಥೆಯು ಇದೇ ವಾಹನ ಮೇಳದಲ್ಲಿ ನಿರ್ಮಾಣ ಸಿದ್ಧ ನೆಕ್ಸನ್ ಮಾದರಿಯನ್ನು ಅನಾವರಣಗೊಳಿಸಲಿದೆ. ಇದು ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್, ಮಹೀಂದ್ರ ಟಿಯುವಿ300 ಹಾಗೂ ಮಾರುತಿಯ ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ವಿಟಾರಾ ಬ್ರಿಝಾ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ. ಪ್ರಸ್ತುತ ಟಾಟಾ ನೆಕ್ಸನ್ ಕಾರಿನಲ್ಲಿ 1.3 ಲೀಟರ್ ಡೀಸೆಲ್ ಹಾಗೂ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ.

ಟಾಟಾ ಹೆಕ್ಸಾ

ಟಾಟಾ ಹೆಕ್ಸಾ

ಇದೇ ಹೊತ್ತಿಗೆ ಟಾಟಾ ಸಂಸ್ಥೆಯು ಅತಿ ನೂತನ ಹೆಕ್ಸಾ ಕ್ರೀಡಾ ಬಳಕೆಯ ವಾಹನದ ತಯಾರಿಯಲ್ಲಿಯೂ ತೊಡಗಿಸಿಕೊಂಡಿದೆ. ಇದು ಪ್ರಮುಖವಾಗಿಯೂ ಹ್ಯುಂಡೈ ಕ್ರೆಟಾ ಹಾಗೂ ರೆನೊ ಡಸ್ಟರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಟಾಟಾ ಆರಿಯಾ ತಳಹದಿಯಲ್ಲಿ ನಿರ್ಮಾಣವಾಗಲಿರುವ ಹೆಕ್ಸಾ ಈಗಾಗಲೇ 2015 ಜಿನೆವಾ ಮೋಟಾರು ಶೋದಲ್ಲೂ ಪ್ರದರ್ಶನ ಕಂಡಿದೆ. ಇದು ಟಾಟಾ ಸಫಾರಿಯಲ್ಲಿರುವ 2.2 ಲೀಟರ್ ಫೋರ್ ಸಿಲಿಂಡರ್ ವ್ಯಾರಿಕೋರ್ ಡೀಸೆಲ್ ಎಂಜಿನ್ 400 ಎನ್‌ಎಂ ತಿರುಗುಬಲದಲ್ಲಿ 154 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಟು ವೀಲ್ ಜೊತೆಗೆ ಫೋರ್ ವೀಲ್ ಚಾಲನಾ ವ್ಯವಸ್ಥೆ ಮತ್ತು ಆರು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಿರೀಕ್ಷೆ ಮಾಡಬಹುದಾಗಿದೆ.

ನಿಸ್ಸಾನ್ ಎಕ್ಸ್ ಟ್ರೈಲ್

ನಿಸ್ಸಾನ್ ಎಕ್ಸ್ ಟ್ರೈಲ್

ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು 2014ರಲ್ಲೇ ಎಕ್ಸ್ ಟ್ರೈಲ್ ಮಾರಾಟವನ್ನು ನಿಲುಗಡೆಗೊಳಿಸ್ತತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಹೊಸ ಯೋಜನೆಗಳೊಂದಿಗೆ ಮುಂದೆ ಬಂದಿರುವ ಸಂಸ್ಥೆಯು ಮಗದೊಮ್ಮೆ ಈ ಪ್ರತಿಷ್ಠಿತ ಎಸ್‌ಯುವಿ ದೇಶದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಏಳು ಸೀಟುಗಳ ರೆನೊ ಎಕ್ಸ್ ಟ್ರೈಲ್ ಕಂಪ್ಲೀಟ್ ಬಿಲ್ಟ್ ಅಪ್ ಯುನಿಟ್ (ಸಿಬಿಯು) ಮುಖಾಂತರ ದೇಶವನ್ನು ತಲುಪುವ ಸಾಧ್ಯತೆಯಿದೆ. ಇದು ಸಂಸ್ಧೆಯ ಸಿಎಂಎಫ್ ತಳಹದಿಯಲ್ಲಿ ನಿರ್ಮಾಣವಾಗಲಿದ್ದು 1.6 ಲೀಟರ್ ಡೀಸೆಲ್ ಎಂಜಿನ್ 320 ಎನ್‌ಎಂ ತಿರುಗುಬಲದಲ್ಲಿ 138 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸ್ಯಾಂಗ್ಯೊಂಗ್ ಟಿವೊಲಿ

ಸ್ಯಾಂಗ್ಯೊಂಗ್ ಟಿವೊಲಿ

ದಕ್ಷಿಣ ಕೊರಿಯಾದ ಹೆಸರಾಂತ ಸ್ಯಾಂಗ್ಯೊಂಗ್ ಟಿವೊಲಿ ಕ್ರೀಡಾ ಬಳಕೆಯ ವಾಹನವನ್ನು ದೇಶಕ್ಕೆ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಪರಿಚಯಿಸಲಿದೆ. ಜಾಗತಿಕವಾಗಿ 1.6 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಹೊಂದಿರುವ ಸ್ಯಾಂಗೊಂಗ್ ಟಿವೊಲಿ ದೇಶದಲ್ಲೂ ಇದಕ್ಕೆ ಸಮಾನವಾದ ಎಂಜಿನ್ ತಾಂತ್ರಿಕತೆ ಪಡೆಯಲಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಫೋಕ್ಸ್‌ವ್ಯಾಗನ್ ಟೈಗನ್

ಫೋಕ್ಸ್‌ವ್ಯಾಗನ್ ಟೈಗನ್

ಫೋಕ್ಸ್‌ವ್ಯಾಗನ್‌ನಿಂದ ನಿರೀಕ್ಷೆ ಮಾಡಲಾಗುತ್ತಿರುವ ಬಹು ದೊಡ್ಡ ಲಾಂಚ್ ಟೈಗನ್ ಆಗಿರಲಿದೆ. ಎಂಕ್ಯೂಬಿ ತಳಹದಿಯಲ್ಲಿ ನಿರ್ಮಾಣವಾಗಲಿರುವ ಏಳು ಸೀಟುಗಳ ಫೋಕ್ಸ್‌ವ್ಯಾಗನ್ ಟೈಗನ್ ಪ್ರಮುಖವಾಗಿಯೂ ಟೊಯೆಟಾ ಫಾರ್ಚ್ಯುನರ್, ಫೋರ್ಡ್ ಎಂಡೀವರ್ ಮತ್ತು ಷೆವರ್ಲೇ ಟ್ರೈಲ್ ಬ್ಲೇಜರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಹೋಂಡಾ ಬಿಆರ್ ವಿ

ಹೋಂಡಾ ಬಿಆರ್ ವಿ

ಭಾರತ ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ ಕಾರುಗಳನ್ನು ಹೊಂದಿರುವ ಹೋಂಡಾ ಸಂಸ್ಥೆಗೆ ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಯಾವುದೇ ಮಾದರಿಗಳಿಲ್ಲ. ಈ ಕೊರತೆಯನ್ನು ನೂತನ ಬಿಆರ್‌ವಿ ತುಂಬಿಕೊಳ್ಳಲಿದೆ. ಬ್ರಿಯೊ ತಳಹದಿಯಲ್ಲಿ ನಿರ್ಮಾಣವಾಗಿರುವ ನೂತನ ಹೋಂಡಾ ಬಿಆರ್‌ವಿ ಏಳು ಪ್ರಯಾಣಿಕರಿಗೆ ಸ್ಥಳಾವಕಾಶವನ್ನು ಒದಗಿಸಲಿದೆ. ಅಂತೆಯೇ 'ಆಕ್ಟಿವ್ ಸಾಲಿಡ್ ಮೊಷನ್' ವಿನ್ಯಾಸ ತತ್ವಶಾಸ್ತ್ರದಲ್ಲಿ ನಿರ್ಮಾಣವಾಗಿರುವ ಹೊಸ ಕಾರು ತನ್ನ ಪ್ರತಿಸ್ಪರ್ಧಿಗಳಾದ ರೆನೊ ಡಸ್ಟರ್ ಹಾಗೂ ಹ್ಯುಂಡೈ ಕ್ರೆಟಾಗಿಂತಲೂ ದೊಡ್ಡದಾಗಿರಲಿದೆ. ಇದರಲ್ಲಿ ಮೊಬಿಲಿಯೊ ಎಂಪಿವಿಗೆ ಸಮಾನವಾದ 1.5 ಲೀಟರ್ ಐವಿಟೆಕ್ ಪೆಟ್ರೋಲ್ ಹಾಗೂ 1.5 ಲೀಟರ್ ಐ ಡಿಟೆಕ್ ಡೀಸೆಲ್ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ.

ಜಾಗ್ವಾರ್ ಎಫ್-ಫೇಸ್

ಜಾಗ್ವಾರ್ ಎಫ್-ಫೇಸ್

ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್ ಎಫ್ ಫೇಸ್ ಐಷಾರಾಮಿ ಕ್ರೀಡಾ ಬಳಕೆಯ ವಾಹನವು ಭಾರತಕ್ಕೆ ಎಂಟ್ರಿ ಕೊಡಲಿದೆ. 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿರುವ ಜಾಗ್ವಾರ್ ಎಫ್ ಫೇಸ್ ಬಳಿಕ ಪ್ರಸಕ್ತ ಸಾಲಿನ ಮಧ್ಯಂತರ ವೇಳೆಯಲ್ಲಿ ಮಾರುಕಟ್ಟೆ ತಲುಪಲಿದೆ. ಇದು 2.0 ಹಾಗೂ 3.0 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳಲ್ಲಿ ಲಭ್ಯವಾಗಲಿದೆ.

English summary
Auto Expo 2016: Top 10 Upcoming SUVs and crossovers
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark