ಮಾರುತಿ ಸ್ವಿಫ್ಟ್‌ಗೆ ಸೆಡ್ಡು ನೀಡಲು ಮುಂದಾದ ಫಿಯೆಟ್ ಪುಂಟೊ ಪ್ಯೂರ್

By Nagaraja

ಇಟಲಿಯ ಐಕಾನಿಕ್ ಫಿಯೆಟ್ ಸಂಸ್ಥೆಯು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಾಗಿದ 13ನೇ ಆವೃತ್ತಿಯ 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಪುಂಟೊ ಪ್ಯೂರ್ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದೆ.

ನೂತನ ಫಿಯೆಟ್ ಪ್ಯೂರೊ ಹ್ಯಾಚ್ ಬ್ಯಾಕ್ ಕಾರು ಭಾರತದ ಅತ್ಯಂತ ಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ. ಅಲ್ಲದೆ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳ ದೆಹಲಿ ಎಕ್ಸ್ ಶೋ ರೂಂ ಬೆಲೆಗಳು ಅನುಕ್ರಮವಾಗಿ 4.49 ಹಾಗೂ 5.59 ಲಕ್ಷ ರು.ಗಳಲ್ಲಿ ಆರಂಭವಾಗಲಿದೆ.

ಫಿಯೆಟ್ ಪುಂಟೊ ಪ್ಯೂರ್


ಎಂಜಿನ್ ತಾಂತ್ರಿಕತೆ
1.2 ಲೀಟರ್ ಪೆಟ್ರೋಲ್
67 ಅಶ್ವಶಕ್ತಿ (6000 ಆರ್‌ಪಿಎಂ)
96 ಎನ್‌ಎಂ ತಿರುಗುಬಲ (2500 ಆರ್‌ಪಿಎಂ)

1.3 ಲೀಟರ್ ಡೀಸೆಲ್
75 ಅಶ್ವಶಕ್ತಿ (4000 ಆರ್‌ಪಿಎಂ)
197 ಎನ್‌ಎಂ ತಿರುಗುಬಲ (1750 ಆರ್‌ಪಿಎಂ)

ಗೇರ್ ಬಾಕ್ಸ್: 5 ಸ್ಪೀಡ್

ವಿನ್ಯಾಸ
ಫಿಯೆಟ್ ಪುಂಟೊ ಪ್ಯೂರೊ ಕಾರಿನಲ್ಲಿ ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ಪರಿಣಾಮಕಾರಿ ವಿನ್ಯಾಸ ನೀತಿಯನ್ನು ತರಲಾಗಿದೆ. ಮುಂಭಾಗದಲ್ಲಿ ಫ್ರಂಟ್ ಗ್ರಿಲ್ ಆಕರ್ಷಕವಾಗಿದ್ದು, ಫಿಯೆಟ್ ಲಾಂಛನ ಎದ್ದು ಕಾಣಿಸಲಿದೆ. ಇನ್ನು ಹಿಂಭಾಗದಲ್ಲಿ ಗಾಜುಗಳ ಬದಿಯಲ್ಲಿ ಟೈಲ್ ಲ್ಯಾಂಪ್ ಲಗತ್ತಿಸಲಾಗಿದೆ.


ಆಯಾಮ (ಎಂಎಂ)
ಉದ್ದ: 3987
ಅಗಲ: 1687
ಎತ್ತರ: 1495

ಲಭ್ಯತೆ, ಪ್ರತಿಸ್ಪರ್ಧಿಗಳು
ಈಗಾಗಲೇ ತಿಳಿಸಿರುವಂತೆಯೇ ಸ್ವಿಫ್ಟ್ ಜೊತೆ ಪೋರ್ಡ್ ಫಿಗೊ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿರುವ ನೂತನ ಪುಂಟೊ ಪ್ಯೂರ್ ಮಾರಾಟಕ್ಕೆ ಲಭ್ಯವಾಗಲಿದೆ.

Most Read Articles

Kannada
English summary
Auto Expo: Fiat Punto Pure Launched - A Backstep In The Right Direction
Story first published: Thursday, February 11, 2016, 9:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X