ಮಾರುತಿಗೆ ಟಕ್ಕರ್; ದೆಹಲಿಯಲ್ಲಿ ಅರಳಿದ ಹೋಂಡಾ ಬಿಆರ್‌ವಿ

Written By:

ಮಾರುತಿಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿರುವ ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್, ರಾಷ್ಟ್ರ ರಾಜಧಾನಿ ನವದಹೆಲಿಯಲ್ಲಿ ಸಾಗುತ್ತಿರುವ 13ನೇ ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಬಿಆರ್‌ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಭರ್ಜರಿ ಅನಾವರಣಗೊಳಿಸಿದೆ.

ಆಟೋ ಎಕ್ಸ್ ಪೋ ಮತ್ತಷ್ಟು ಕಾರು ಬೈಕ್ ಸುದ್ದಿಗಾಗಿ ಇಲ್ಲಿಗೆ ಭೇಟಿ ಕೊಡುತ್ತಿರಿ

ಮೂರು ಸಾಲಿನ ಆಸನ ವ್ಯವಸ್ಥೆಯನ್ನು ಹೊಂದಿರುವ ಹೋಂಡಾ ಬಿಆರ್‌ವಿ ಕಾರಿನಲ್ಲಿ ಏಳು ಮಂದಿ ಪ್ರಯಾಣಿಕರಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ. ಇದು ಪ್ರಮುಖವಾಗಿಯೂ ಮಾರುತಿ ಬಿಡುಗಡೆಯಾಗಲಿರುವ ಮುಂಬರುವ ವಿಟಾರಾ ಬ್ರಿಝಾ ಕಾರಿಗೆ ಪ್ರಬಲ ಪೈಪೋಟಿಯನ್ನು ಒಡ್ಡಲಿದೆ. [ಆಟೋ ಎಕ್ಸ್ ಪೋದಲ್ಲಿ ವಿಟಾರಾ ಬ್ರಿಝಾ ಜಲಕ್]

ಹೋಂಡಾ ಬಿಆರ್‌ವಿ

ಎಂಜಿನ್ ತಾಂತ್ರಿಕತೆ

ಹೊಂಡಾ ಮೊಬಿಲಿಯೊ ಎಂಪಿವಿ ಕಾರಿನಲ್ಲಿರುವುದಕ್ಕೆ ಸಮಾನವಾದ 1.5 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳು ನೂತನ ಬಿಆರ್‌ವಿ ಕಾರಿನಲ್ಲಿ ಬಳಕೆಯಾಗುವ ಸಾಧ್ಯತೆಯಿದೆ.

1.5 ಲೀಟರ್ ಪೆಟ್ರೋಲ್/1.5 ಲೀಟರ್ ಡೀಸೆಲ್,

117 ಅಶ್ವಶಕ್ತಿ @ 6600 rpm145 ಎನ್‌ಎಂ ತಿರುಗಬುಲ @ 4600 rpm

98 ಅಶ್ವಶಕ್ತಿ @ 3600 rpm 200 ಎನ್‌ಎಂ ತಿರುಗುಬಲ @ 1750 rpm

ಗೇರ್ ಬಾಕ್ಸ್: ಮ್ಯಾನುವಲ್ ಮತ್ತು ಆಟೋಮ್ಯಾಟಿಕ್

ಅಂದಾಜು ಬೆಲೆ: 9ರಿಂದ 13 ಲಕ್ಷ ರು.

ಹೋಂಡಾ ಬಿಆರ್‌ವಿ

ಶೈಲಿ

ಒಟ್ಟಾರೆ ವಿನ್ಯಾಸದಲ್ಲಿ ಹೋಂಡಾದ ನೂತನ ವಿನ್ಯಾಸ ತಂತ್ರಗಾರಿಕೆಯನ್ನು ಪಾಲಿಸಲಾಗಿದೆ. ಕ್ರೋಮ್ ಗ್ರಿಲ್, ಸ್ಟೈಲಿಷ್ ಹೆಡ್ ಲ್ಯಾಂಪ್, ಎಲ್‌ಇಡಿ ಬೆಳಕು ಹಾಗೂ ದೃಢಕಾಯದ ದೇಹ ವಿನ್ಯಾಸ ಇದರ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಪ್ರತಿಸ್ಪರ್ಧಿಗಳು

  • ಹ್ಯುಂಡೈ ಕ್ರೆಟಾ,
  • ರೆನೊ ಡಸ್ಟರ್,
  • ನಿಸ್ಸಾನ್ ಟೆರನೊ,
  • ಫೋರ್ಡ್ ಇಕೊಸ್ಪೋರ್ಟ್
  • ಮಾರುತಿ ಸುಜುಕಿ ವಿಟಾರಾ ಬ್ರಿಝಾ (ಇನ್ನಷ್ಟೇ ಬಿಡುಗಡೆಯಾಗಬೇಕಿದೆ.)

English summary
2016 Auto Expo: Honda BRV Makes India Debut, Joins Compact SUV Fight
Story first published: Friday, February 5, 2016, 11:21 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X