ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

Written By:

ಮಗದೊಂದು ಪ್ರಖ್ಯಾತ ಕಾರನ್ನು ಭಾರತಕ್ಕೆ ಪರಿಚಯಿಸಲು ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಮುಂದಾಗುತ್ತಿದೆ. ಆಗಲೇ ದೇಶದ ನಂ.1 ಕ್ರೀಡಾ ಬಳಕೆಯ ವಾಹನ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹೀಂದ್ರ, ದಕ್ಷಿಣ ಕೊರಿಯಾದ ಎಸ್‌ಯುವಿ ದೈತ್ಯ ಸ್ಯಾಂಗ್ಯೊಂಗ್ ಟಿವೊಲಿ ಅನ್ನು ಭಾರತಕ್ಕೆ ಪರಿಚಯಸಲಿದೆ.

2016 ಆಟೋ ಎಕ್ಸ್ ಪೋ ಲೇಖನಗಳಿಗಾಗಿ ಭೇಟಿ ಕೊಡುತ್ತಿರಿ

ಇದಕ್ಕೆ ಮುನ್ನುಡಿಯಾಗಿ 2016 ಆಟೋ ಎಕ್ಸ್ ಪೋದಲ್ಲಿ ಸ್ಯಾಂಗ್ಯೊಂಗ್ ಟಿವೊಲಿ ಮಿನಿ ಎಸ್‌ಯುವಿ ಭರ್ಜರಿ ಪ್ರದರ್ಶನ ಕಂಡಿದೆ. ಇದು ದೇಶದಲ್ಲಿ ಸ್ಯಾಂಗ್ಯೊಂಗ್ ನಿಂದ ಬಿಡುಗಡೆಯಾಗುತ್ತಿರುವ ಎರಡನೇ ಮಾದರಿ ಎನಿಸಿಕೊಳ್ಳಲಿದೆ. ಈಗಾಗಲೇ ದೇಶದ ಮಾರುಕಟ್ಟೆಯಲ್ಲಿ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಮಾರಾಟದಲ್ಲಿದೆ.

To Follow DriveSpark On Facebook, Click The Like Button
ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

ನೂತನ ಸ್ಯಾಂಗ್ಯೊಂಗ್ ಟಿವೊಲಿ 1.6 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸ್ಪಡಲಿದೆ. ಇವೆರಡು ಅನುಕ್ರಮವಾಗಿ 124 (157 ಎನ್‌ಎಂ ತಿರುಗುಬಲ) ಹಾಗೂ 113 ಅಶ್ವಶಕ್ತಿಯನ್ನು (300 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ. ಅಲ್ಲದೆ ಸಿಂಗಲ್ ಕ್ಲಚ್ ಆಟೋಮ್ಯಾಟಿಕ್ ಅಥವಾ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಳವಡಿಸಲಾಗುವುದು.

ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

ನೂತನ ಟಿವೊಲಿ ಪ್ರಮುಖವಾಗಿಯೂ ಹ್ಯುಂಡೈ ಕ್ರೆಟಾ, ಮಾರುತಿ ಎಸ್ ಕ್ರಾಸ್ ಮತ್ತು ರೆನೊ ಡಸ್ಟರ್ ಇತ್ಯಾದಿ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

ಇನ್ನು 4195 ಎಂಎಂ ಉದ್ದ, 1795 ಎಂಎಂ ಅಗಲವನ್ನು ಕಾಪಾಡಿಕೊಂಡಿರುವ ಸ್ಯಾಂಗ್ಯೊಂಗ್ ಟಿವೊಲಿ 2600 ಎಂಎಂ ಚಕ್ರಾಂತರವನ್ನು ಪಡೆದಿದೆ.

ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ 'XIV' ಅಡ್ವೆಂಚರ್ ಕಾನ್ಸೆಪ್ಟ್ ಕಾರಿನಿಂದ ಸ್ಪೂರ್ತಿ ಪಡೆದ ಬೃಹತ್ತಾದ ಫ್ರಂಟ್ ಗ್ರಿಲ್ ಇದರಲ್ಲಿದೆ. ಇನ್ನು ನಿಖರವಾದ ಬಾಗಿದ ರೇಖೆಗಳು ಹೆಚ್ಚು ಆಕರ್ಷಕವೆನಿಸುತ್ತದೆ.

ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

ಅಂತೆಯೇ ಆಧುನಿಕ ಕಾರುಗಳಿಗೆ ತಕ್ಕಂತೆ ಎಲ್‌ಇಡಿ ಡೇಟೈಮ್ ರನ್ನಿಂಗ್ಸ್ ಲೈಟ್ಸ್, ಅಲಾಯ್ ಚಕ್ರಗಳು ಹಾಗೂ ಎಲ್‌ಇಡಿ ಟೈಲ್ ಲ್ಯಾಂಪ್ ಗಳು ಇದರಲ್ಲಿರಲಿದೆ.

ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

ಕಾರಿನೊಳಗೆ ಕಪ್ಪು, ಕೆಂಪು ಹಾಗೂ ಬೀಜ್ ರಂಗನ್ನು ಬಳಿಯಲಾಗಿದೆ. ಅಲ್ಲದೆ ಹೆಚ್ಚಿನ ಸ್ಥಳಾವಕಾಶಕ್ಕೆ ಆದ್ಯತೆ ಕೊಡಲಾಗಿದೆ.

ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

ಇನ್ನುಳಿದಂತೆ 3.5 ಇಂಚುಗಳ ಟಚ್ ಸ್ಕ್ರೀನ್ ಪರದೆ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗೂ ಸೆಮಿ ಬಕೆಟ್ ಸೀಟುಗಳು ಕಂಡುಬರಲಿದೆ.

ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

ಚಾಲನಾ ವಿಧಗಳು: ನಾರ್ಮಲ್, ಕಂಫರ್ಟ್ ಮತ್ತು ಸ್ಪೋರ್ಟ್

ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

ಸ್ಯಾಂಗ್ಯೊಂಗ್ ಟಿವೊಲಿಯಲ್ಲಿ ಇದೇ ಮೊದಲ ಬಾರಿಗೆ ಶೇಕಡಾ 70ರಷ್ಟು ಹೆಚ್ಚಿನ ಬಲದ ಸ್ಟೀಲ್ ಬಳಕೆ ಮಾಡಲಾಗಿದೆ. ಇದರಿಂದಾಗಿ ಕಾರಿನ ಭಾರ ಕಡಿತಗೊಳಿಸಲು ಹಾಗೂ ಹೆಚ್ಚು ಬಿಗಿತ ಕಾಪಾಡುವಲ್ಲಿ ಸಹಕಾರಿಯಾಗಲಿದೆ.

ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಏಳು ಏರ್ ಬ್ಯಾಗ್, ಎಬಿಎಸ್, ಇಎಸ್ ಪಿ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (ಟಿಪಿಎಂಎಸ್), ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಇದರಲ್ಲಿರಲಿದೆ.

ಯುವ ಪೀಳಿಗೆಗೆ ಮಹೀಂದ್ರ ಕೊಡುಗೆ; ಸ್ಯಾಂಗ್ಯೊಂಗ್ ಟಿವೊಲಿ

ಒಟ್ಟಿನಲ್ಲಿ ಮುಂಬರುವ ಹಬ್ಬದ ಆವೃತ್ತಿಯ ವೇಳೆ ಮಾರುಕಟ್ಟೆ ತಲುಪಲಿರುವ ಸ್ಯಾಂಗ್ಯೊಂಗ್ ಟಿವೊಲಿ ಪ್ರೀಮಿಯಂ ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅದ್ಭುತ ಚಾಲನಾ ಅನುಭವ ನೀಡಲಿದೆ.

English summary
Ssangyong Tivoli Compact SUV Unveiled at Auto Expo 2016
Story first published: Friday, February 12, 2016, 11:36 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark