ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಹೈಬ್ರಿಡ್ ಕಾರು ಯಾವುದು ಗೊತ್ತಾ?

Written By:

ಇಡೀ ವಾಹನ ಜಗತ್ತೇ ಸುಸ್ಥಿರ ಸಂಚಾರದ ಹುಡುಕಾಟದಲ್ಲಿ ತೊಡಗಿಸಿಕೊಂಡಿದೆ. ಹಾಗಿರುವಾಗ ಅತ್ಯಲ್ಪ ಮಾಲಿನ್ಯವನ್ನುಂಟು ಮಾಡುವ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಮೋಟಾರು ಹೈಬ್ರಿಡ್ ಸಂಯೋಜಿತ ಕಾರುಗಳು ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಅತ್ತ ಇದೇ ದೃಷ್ಟಿಕೋನದಲ್ಲಿ ಬಿಎಂಡಬ್ಲ್ಯು ನಿರ್ಮಿಸಿರುವ ಐ8 ಕಾರು ವಿಶ್ವದಲ್ಲೇ ನಂ.1 ಹೈಬ್ರಿಡ್ ಕಾರೆನಿಸಿಕೊಂಡಿದೆ. ಈ ಮೂಲಕ ಹೊಸ ಆಶಾಕಿರಣದ ಬೆಳಕನ್ನು ಹೊರ ಚೆಲ್ಲಿದೆ.

To Follow DriveSpark On Facebook, Click The Like Button
ಬಿಎಂಡಬ್ಲ್ಯು ಐ8 - ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಹೈಬ್ರಿಡ್ ಕಾರು

2015ನೇ ಸಾಲಿನಲ್ಲಿ ಒಟ್ಟು 5,456 ಯುನಿಟ್ ಗಳಷ್ಟು ಬಿಎಂಡಬ್ಲ್ಯು ಐ8 ಕಾರುಗಳು ಮಾರಾಟವಾಗಿದೆ. ಇದು ಪ್ಲಗ್ ಇನ್ ಹೈಬ್ರಿಡ್ ಕಾರಿನ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಬಿಎಂಡಬ್ಲ್ಯು ಐ8 - ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಹೈಬ್ರಿಡ್ ಕಾರು

ಸಂಸ್ಥೆಯೇ ತಿಳಿಸಿದಂತೆ ಬಿಎಂಡಬ್ಲ್ಯು ಐ8 ಯಶಸ್ಸಿನ ಹಾದಿಯೇ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಿದೆ.

ಬಿಎಂಡಬ್ಲ್ಯು ಐ8 - ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಹೈಬ್ರಿಡ್ ಕಾರು

2015 ನ್ಯೂಯಾರ್ಕ್ ಆಟೋ ಶೋದಲ್ಲಿ 'ವಿಶ್ವದ ಹಸಿರು ಕಾರು' ಪ್ರಶಸ್ತಿಗೂ ಭಾಜನವಾಗಿರುವ ಐ8 ಹೈಬ್ರಿಡ್ ಕಾರು ದೇಶದಲ್ಲಿ 2.29 ಕೋಟಿ ರು.ಗಳಷ್ಟು ದುಬಾರಿಯೆನಿಸುತ್ತದೆ.

ಬಿಎಂಡಬ್ಲ್ಯು ಐ8 - ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಹೈಬ್ರಿಡ್ ಕಾರು

2015ನೇ ಸಾಲಿನಲ್ಲೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ನೇತೃತ್ವದಲ್ಲಿ ದೇಶವನ್ನು ತಲುಪಿರುವ ಬಿಎಂಡಬ್ಲ್ಯು ಐ8, ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಮಾರಾಟವಾಗುತ್ತಿದೆ.

ಬಿಎಂಡಬ್ಲ್ಯು ಐ8 - ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಹೈಬ್ರಿಡ್ ಕಾರು

ಬಿಎಂಡಬ್ಲ್ಯು ಐ8 ಪ್ಲಗಿನ್ ಹೈಬ್ರಡ್ ಮಾದರಿಲ್ಲಿ 1.5 ಲೀಟರ್ ಟರ್ಬೊ ತ್ರಿ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಕೂಡಾ ಇರಲಿದೆ.

ಬಿಎಂಡಬ್ಲ್ಯು ಐ8 - ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಹೈಬ್ರಿಡ್ ಕಾರು

ಇವೆರಡು ಸೇರಿ ಗರಿಷ್ಠ 370 ಅಶ್ವಶಕ್ತಿ ಉತ್ಪಾದಿಸಲಿದ್ದು, 4.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಚಲಿಸಲಿದೆ. ಅಂತೆಯೇ ಗರಿಷ್ಠ ಗಂಟೆಗೆ 250 ಕೀ.ಮೀ. ವೇಗವನ್ನು ಪಡೆಯಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಚಾಲಕ ಕೇಂದ್ರಿತ ಡ್ಯಾಶ್ ಬೋರ್ಡ್,

ಲೆಥರ್ ಹೋದಿಕೆ,

8.8 ಇಂಚಿನ ಐಡ್ರೈವ್ ಮಾಹಿತಿ ಮನರಂಜನಾ ವ್ಯವಸ್ಥೆ,

ಡಿಜಿಟಲ್ ಸ್ಕ್ರೀನ್,

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್,

ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್,

ನೇವಿಗೇಷನ್ ಸಿಸ್ಟಂ,

ಢಿಕ್ಕಿ ಎಚ್ಚರಿಕೆ,

ಆಟೋಮ್ಯಾಟಿಕ್ ಬ್ರೇಕ್,

ಹೈ ಬೀಮ್ ಅಸಿಸ್ಟನ್ಸ್,

ಪರಿಪೂರ್ಣ 50/50 ಭಾರ ವಿಭಜನೆ

English summary
BMW i8: The Best Selling Hybrid Sports Car In The World
Story first published: Saturday, February 20, 2016, 15:18 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark