ಹೊಸ ಕಾರು, ಬೈಕ್ ಕೊಳ್ತೀರಾ? ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್ ತೋರಿಸಿ

Written By:

ಗಮನಾರ್ಹ ಬೆಳವಣಿಗೆಯೊಂದರಲ್ಲಿ ಕ್ರಾಂತಿಕಾರಿ ಪ್ರಸ್ತಾಪವೊಂದನ್ನು ಮುಂದಿಟ್ಟಿರುವ ಕೇಂದ್ರ ಸರಕಾರವು, ವಾಹನ ನಿಲುಗಡೆ ಜಾಗವಿದ್ದಲ್ಲಿ ಮಾತ್ರ ಕಾರು ಮತ್ತು ಬೈಕ್ ಕೊಳ್ಳಲು ಅವಕಾಶ ನೀಡುವ ವಿನೂತನ ಕಾಯ್ದೆ ರೂಪಿಸಲು ಹೊರಟಿದೆ.

To Follow DriveSpark On Facebook, Click The Like Button
ಹೊಸ ಕಾರು, ಬೈಕ್ ಕೊಳ್ತೀರಾ? ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್ ತೋರಿಸಿ

ಕೇಂದ್ರ ಸರಕಾರ ಹೊರಡಿಸಿರುವ ಪ್ರಸ್ತಾವನೆಯಲ್ಲಿ ಹೊಸತಾಗಿ ಕಾರು ಅಥವಾ ಬೈಕ್ ಖರೀದಿಸುವ ಗ್ರಾಹಕರು, ಅಧಿಕಾರಿಗಳಿಗೆ ವಾಹನ ನಿಲುಗಡೆ ಮಾಡಲು ಹೊಂದಿರುವ ಸ್ಥಳದ ಪುರಾವೆಯನ್ನು ತೋರಿಸಬೇಕಿದೆ.

ಹೊಸ ಕಾರು, ಬೈಕ್ ಕೊಳ್ತೀರಾ? ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್ ತೋರಿಸಿ

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಮಾರಾಟದಲ್ಲಿ ಗಣನೀಯವಾದ ವರ್ಧನೆಯುಂಟಾಗುತ್ತಿದೆ. ಇನ್ನೊಂದೆಡೆ ದೇಶದ ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ಪ್ರದೇಶದ ಅಭಾವ ಎದುರಾಗುತ್ತಿದೆ.

ಹೊಸ ಕಾರು, ಬೈಕ್ ಕೊಳ್ತೀರಾ? ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್ ತೋರಿಸಿ

2015 ಮಾರ್ಚ್ ವೇಳೆಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 26 ಲಕ್ಷಕ್ಕೂ ಹೆಚ್ಚು ಕಾರುಗಳು ನೆಲೆಗೊಂಡಿದೆ. ಇದು ದೇಶದ ಇತರೆಲ್ಲ ನಗರಗಿಂತಲೂ ಅತ್ಯಧಿಕವಾಗಿದೆ.

ಹೊಸ ಕಾರು, ಬೈಕ್ ಕೊಳ್ತೀರಾ? ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್ ತೋರಿಸಿ

ಭವಿಷ್ಯದಲ್ಲಿ ಶೌಚಾಲಯವಿಲ್ಲದೆ ಯಾವುದೇ ಕಟ್ಟಡ ನಿರ್ಮಾಣಕ್ಕೂ ಆಸ್ಪದ ಕೊಡಲಾಗುವುದಿಲ್ಲ. ಅದೇ ರೀತಿ ಸಾಕಷ್ಟು ಪಾರ್ಕಿಂಗ್ ಪ್ರದೇಶ ಲಭ್ಯತಾ ಪ್ರಮಾಣಪತ್ರವಿಲ್ಲದೆ ಕಾರು ಅಥವಾ ಬೈಕ್ ಗಳ ನೊಂದಣಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ಹೊಸ ಕಾರು, ಬೈಕ್ ಕೊಳ್ತೀರಾ? ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್ ತೋರಿಸಿ

ಈ ಸಂಬಂಧ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಮಾತುಕತೆ ನಡೆಸಲಿರುವ ವೆಂಕಯ್ಯ ನಾಯ್ಡು ನಗರ ಪ್ರದೇಶಗಳ ಸೂಕ್ಷ್ಮತೆಯ ಬಗ್ಗೆ ಪರಿಶೋಧನೆ ನಡೆಸಲಿದ್ದು, ದಿಟ್ಟ ಹೆಜ್ಜೆಯನ್ನಿಡಲಿದ್ದಾರೆ.

ಹೊಸ ಕಾರು, ಬೈಕ್ ಕೊಳ್ತೀರಾ? ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್ ತೋರಿಸಿ

ಈ ಮಹತ್ತರ ಯೋಜನೆಯನ್ನು ವಾಹನ ತಜ್ಞರು ಸ್ವಾಗತಿಸಿದರೂ ಸಹ ಅನೇಕ ಸವಾಲುಗಳು ಎದುರಾಗಲಿದೆ ಎಂದು ಬೊಟ್ಟು ಮಾಡಿ ತೋರಿಸಿದ್ದಾರೆ.

ಹೊಸ ಕಾರು, ಬೈಕ್ ಕೊಳ್ತೀರಾ? ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್ ತೋರಿಸಿ

ಮೋಟಾರು ವಾಹನ ಕಾಯ್ದೆ (ತಿದ್ದುಪಡಿ) 2016ರಲ್ಲಿ ರಸ್ತೆ ಸುರಕ್ಷತೆಯಲ್ಲಿ ಸುಧಾರಣೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದಕ್ಕೆ ಸಂಸದೀಯ ಅಂಗೀಕಾರ ದೊರಕಬೇಕಾಗಿದೆ.

ಹೊಸ ಕಾರು, ಬೈಕ್ ಕೊಳ್ತೀರಾ? ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್ ತೋರಿಸಿ

ಹಾಗಿದ್ದರೂ ಪಾರ್ಕಿಂಗ್ ನಿಯಮ ಜಾರಿಗೆ ತರುವುದು ಅಷ್ಟೊಂದು ಸುಲಭದ ವಿಚಾರವಲ್ಲ. ಯಾಕೆಂದರೆ ದೆಹಲಿ ಜನಸಂಖ್ಯೆಯ ಮೂರರಲ್ಲಿ ಒಂದಂಶವು ಅನಧಿಕೃತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

English summary
Buying A New Car Or Motorcycle? You May Need Proof For Parking Space
Story first published: Friday, December 23, 2016, 13:07 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark