ಹೊಸ ನಿರೀಕ್ಷೆಯೊಂದಿಗೆ ಷೆವರ್ಲೆ; ಭಾರತದತ್ತ ಎಸ್ಸೆನ್ಷಿಯಾ

ಮುಂದಿನ ವರ್ಷದಲ್ಲಿ ಷೆವರ್ಲೆ ಎಸ್ಸೆನ್ಷಿಯಾ ಭಾರತದಲ್ಲಿ ಭರ್ಜರಿ ಬಿಡುಗಡೆ ಭಾಗ್ಯ ಕಾಣಲಿದೆ.

By Nagaraja

ಷೆವರ್ಲೆ ಎಸ್ಸೆನ್ಷಿಯಾ ಕಾಂಪಾಕ್ಟ್ ಸೆಡಾನ್ ಭಾರತದತ್ತ ದಾಪುಗಾಲನ್ನಿಟ್ಟಿದ್ದು, ಬಲ್ಲ ಮೂಲಗಳ ಪ್ರಕಾರ 2017ನೇ ಸಾಲಿನ ಮಾರ್ಚ್ ತಿಂಗಳ ವೇಳೆಯಲ್ಲಿ ದೇಶಕ್ಕೆ ಪ್ರವೇಶಿಸಲಿದೆ. ಇದು ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಮತ್ತಷ್ಟು ಸ್ಪರ್ಧಾತ್ಮಕ ವೇದಿಕೆಯನ್ನು ಸೃಷ್ಟಿ ಮಾಡಲಿದೆ.

ಹೊಸ ನಿರೀಕ್ಷೆಯೊಂದಿಗೆ ಷೆವರ್ಲೆ; ಭಾರತದತ್ತ ಎಸ್ಸೆನ್ಷಿಯಾ

ದೇಶದ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಪ್ರಮುಖವಾಗಿಯೂ ಮಾರುತಿ ಸುಜುಕಿ ಡಿಜೈರ್, ಫೋರ್ಡ್ ಫಿಗೊ ಆಸ್ಪೈರ್, ಹ್ಯುಂಡೈ ಎಕ್ಸ್ ಸೆಂಟ್, ಹೋಂಡಾ ಅಮೇಜ್, ಫೋಕ್ಸ್ ವ್ಯಾಗನ್ ಎಮಿಯೊ, ಟಾಟಾ ಜೆಸ್ಟ್ ಮತ್ತು ಮುಂಬರುವ ಟಾಟಾ ಕೈಟ್ ಫೈವ್ ಸವಾಲನ್ನು ನೂತನ ಎಸ್ಸೆನ್ಷೆನಿಯಾ ಎದುರಿಸಲಿದೆ.

ಹೊಸ ನಿರೀಕ್ಷೆಯೊಂದಿಗೆ ಷೆವರ್ಲೆ; ಭಾರತದತ್ತ ಎಸ್ಸೆನ್ಷಿಯಾ

ಜನರಲ್ ಮೋಟಾರ್ಸ್ ಕೊರಿಯೊ ಡಿಸೈನ್ ಸ್ಟುಡಿಯೋದಲ್ಲಿ ಅಭಿವೃದ್ಧಿಗೊಂಡಿರುವ ನೂತನ ಎಸ್ಸೆನ್ಷಿಯಾ ಮೊದಲ ಬಾರಿಗೆ ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿತ್ತು.

ಹೊಸ ನಿರೀಕ್ಷೆಯೊಂದಿಗೆ ಷೆವರ್ಲೆ; ಭಾರತದತ್ತ ಎಸ್ಸೆನ್ಷಿಯಾ

ಮುಂದಿನ ತಲೆಮಾರಿನ ಬೀಟ್ ಹ್ಯಾಚ್ ಬ್ಯಾಕ್ ಕಾರು ತಳಹದಿಯಲ್ಲಿ ನಿರ್ಮಾಣಗೊಂಡಿರುವ ನೂತನ ಎಸ್ಸೆನ್ಷಿಯಾ ಮುಂಭಾಗದಲ್ಲಿ ವಿಭಜಿತ ಗ್ರಿಲ್ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.

ಹೊಸ ನಿರೀಕ್ಷೆಯೊಂದಿಗೆ ಷೆವರ್ಲೆ; ಭಾರತದತ್ತ ಎಸ್ಸೆನ್ಷಿಯಾ

ಕಾರಿನೊಳಗೆ ಮೈಲಿಂಕ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಮತ್ತು ಡ್ಯುಯಲ್ ಟೋನ್ ಹೋದಿಕೆಗಳು ಪ್ರಮುಖ ಆಕರ್ಷಣೆಯಾಗಲಿದೆ.

ಹೊಸ ನಿರೀಕ್ಷೆಯೊಂದಿಗೆ ಷೆವರ್ಲೆ; ಭಾರತದತ್ತ ಎಸ್ಸೆನ್ಷಿಯಾ

ನೂತನ ಷೆವರ್ಲೆ ಎಸ್ಸೆನ್ಷಿನಯಾ 1.2 ಲೀಟರ್ ಎಸ್ ಟೆಕ್ II ಎಂಜಿನ್ 107 ಎನ್ ಎಂ ತಿರುಗುಬಲದಲ್ಲಿ 77 ಅಶ್ವಶಕ್ತಿಯನ್ನು ಮತ್ತು 1.0 ಲೀಟರ್ ಎಕ್ಸ್ ಎಸ್ ಡಿಇ ಎಂಜಿನ್ 142.5 ಎನ್ ಎಂ ತಿರುಗುಬಲದಲ್ಲಿ 56 ಅಶ್ವಶಕ್ತಿಯನ್ನು ನೀಡಲಿದೆ. ಇವೆರಡು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗಿಟ್ಟಿಸಿಕೊಳ್ಳಲಿದೆ.

ಹೊಸ ನಿರೀಕ್ಷೆಯೊಂದಿಗೆ ಷೆವರ್ಲೆ; ಭಾರತದತ್ತ ಎಸ್ಸೆನ್ಷಿಯಾ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಿದ್ದು, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ ವ್ಯವಸ್ಥೆಗಳಿರಲಿದೆ.

ಹೊಸ ನಿರೀಕ್ಷೆಯೊಂದಿಗೆ ಷೆವರ್ಲೆ; ಭಾರತದತ್ತ ಎಸ್ಸೆನ್ಷಿಯಾ

ದೇಶಕ್ಕೆ ಲಗ್ಗೆಯಿಡಲಿರುವ ನೂತನ ಎಸ್ಸೆನ್ಷಿಯಾ 4.5 ಲಕ್ಷ ರು.ಗಳಿಂದ 7.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಹೊಸ ನಿರೀಕ್ಷೆಯೊಂದಿಗೆ ಷೆವರ್ಲೆ; ಭಾರತದತ್ತ ಎಸ್ಸೆನ್ಷಿಯಾ

ಅದೇ ಹೊತ್ತಿಗೆ ಅಮೆರಿಕ ಮೂಲದ ಈ ದೈತ್ಯ ವಾಹನ ಸಂಸ್ಥೆಯು ಮುಂದಿನ ಸಾಲಿನಲ್ಲೇ ಅತಿ ನೂತನ ಟ್ರೈಲ್ ಬ್ಲೇಜರ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಲಿದೆ.

ಹೊಸ ನಿರೀಕ್ಷೆಯೊಂದಿಗೆ ಷೆವರ್ಲೆ; ಭಾರತದತ್ತ ಎಸ್ಸೆನ್ಷಿಯಾ

ನೂತನ ಟ್ರೈಲ್ ಬ್ಲೇಜರ್ 2.8 ಲೀಟರ್ ಡ್ಯುರಾಮ್ಯಾಕ್ಸ್ ಫೋರ್ ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದ್ದು, 500 ಎನ್ ಎಂ ತಿರುಗುಬಲದಲ್ಲಿ 197 ಅಶ್ವಶಕ್ತಿಯನ್ನು ನೀಡಲಿದೆ. ಹಾಗೆಯೇ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

Most Read Articles

Kannada
English summary
Chevrolet Essentia To Be Launched In India By March 2017
Story first published: Monday, December 12, 2016, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X