ದಟ್ಸನ್ ರೆಡಿ ಗೊ ಅಗ್ಗದ ಕಾರು ಮುಂದಿನ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ

Written By:

ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಬಹು ಬಳಕೆಯ ವಾಹನಗಳನ್ನು ಭಾರತಕ್ಕೆ ಪರಿಚಯಿಸಿರುವ ನಿಸ್ಸಾನ್ ಅಧೀನತೆಯಲ್ಲಿರುವ ಜಪಾನ್ ಮೂಲದ ದಟ್ಸನ್ ಮಗದೊಂದು ಕಾರನ್ನು ದೇಶಕ್ಕೆ ಪರಿಚಯಿಸುವ ಇರಾದೆಯಲ್ಲಿದೆ.

ಅದುವೇ, ರೆಡಿ ಗೊ ಹ್ಯಾಚ್ ಬ್ಯಾಕ್.

ಬಲ್ಲ ಮೂಲಗಳ ಪ್ರಕಾರ ನಿಸ್ಸಾನ್ ಕಡಿಮೆ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್, ರೆಡಿ ಗೊ ಕಾರು 2016 ಎಪ್ರಿಲ್ 14ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸಣ್ಣ ಕಾರು ವಿಭಾಗಕ್ಕೆ ಮಗದೊಂದು ಆಕರ್ಷಕ ಕಾರಿನ ಪ್ರವೇಶವಾಗಲಿದೆ.

ದಟ್ಸನ್ ರೆಡಿ ಗೊ ಅಗ್ಗದ ಕಾರು ಮುಂದಿನ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ

ಇದಕ್ಕೂ ಮೊದಲು 2014 ಆಟೋ ಎಕ್ಸ್ ಪೋದಲ್ಲಿ ದಟ್ಸನ್ ಗೊ ಹ್ಯಾಚ್ ಬ್ಯಾಕ್ ಕಾರು ಭರ್ಜರಿ ಪ್ರದರ್ಶನ ಕಂಡಿತ್ತು. ಈಗ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ದಟ್ಸನ್ ರೆಡಿ ಗೊ ಅಗ್ಗದ ಕಾರು ಮುಂದಿನ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ

ನಿಮ್ಮ ಮಾಹಿತಿಗಾಗಿ, ಚೆನ್ನೈನಲ್ಲಿರುವ ನಿಸ್ಸಾನ್-ರೆನೊ ಸಂಯೋಜನೆಯ ರೆನೊ ಕ್ವಿಡ್ ನಿರ್ಮಾಣವಾಗಿರುವ ಅದೇ ಸಿಎಂಎಫ್ ತಳಹದಿಯಲ್ಲೇ ದಟ್ಸನ್ ರೆಡಿ ಗೊ ನಿರ್ಮಾಣವಾಗುತ್ತಿದ್ದು, ರೆನೊ ಕಾರಿಗಿಂತಲೂ ಅಗ್ಗವೆನಿಸಲಿದೆ.

ದಟ್ಸನ್ ರೆಡಿ ಗೊ ಅಗ್ಗದ ಕಾರು ಮುಂದಿನ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ

ಕ್ವಿಡ್ ಗೆ ಸಮಾನವಾದ ವಿಶಿಷ್ಟತೆಗಳು ದಟ್ಸನ್ ರೆಡಿ ಗೊ ಕಾರಿನಲ್ಲಿಲಿದ್ದು, ವಿನ್ಯಾಸದಲ್ಲಿ ಕೊಂಚ ಬದಲಾವಣೆಗಳು ಕಂಡುಬರಲಿದೆ.

ದಟ್ಸನ್ ರೆಡಿ ಗೊ ಅಗ್ಗದ ಕಾರು ಮುಂದಿನ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ

ಶೇಕಡಾ 95ರಷ್ಟು ನಿರ್ಮಾಣವನ್ನು ಸ್ಥಳೀಯವಾಗಿಸಿರುವುದರಿಂದ ರೆಡಿ ಗೊ 2ರಿಂದ 2.5 ಲಕ್ಷ ರು.ಗಳ ಬೆಲೆ ಪರಿಧಿಯೊಳಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ದಟ್ಸನ್ ರೆಡಿ ಗೊ ಅಗ್ಗದ ಕಾರು ಮುಂದಿನ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ

ಇನ್ನು 800 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನೂತನ ದಟ್ಸನ್ ರೆಡಿ ಗೊ ಫೈವ್ ಸ್ಪೀಡ್ ಜೊತೆಗೆ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆಯ್ಕೆಯನ್ನು ಪಡೆಯಲಿದೆ. ಇದು 72 ಎನ್ ಎಂ ತಿರುಗುಬಲದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ದಟ್ಸನ್ ರೆಡಿ ಗೊ ಅಗ್ಗದ ಕಾರು ಮುಂದಿನ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ

ದೇಶೀಯ ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ರೆನೊ ಕ್ವಿಡ್ ಜೊತೆ ಮಾರುತಿ ಆಲ್ಟೊ 800, ಹ್ಯುಂಡೈ ಇಯಾನ್, ಟಾಟಾ ನ್ಯಾನೋ ಮುಂತಾದ ಮಾದರಿಗಳಿಗೆ ದಟ್ಸನ್ ರೆಡಿ ಗೊ ಪೈಪೋಟಿಯನ್ನು ಒಡ್ಡಲಿದೆ.

Read more on ದಟ್ಸನ್ datsun
English summary
Datsun Redi-Go Could Launch In India By Next Month
Story first published: Monday, March 28, 2016, 9:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark