ಪ್ರಸಕ್ತ ಸಾಲಿನಲ್ಲೇ ಫಿಯೆಟ್ ಅರ್ಬನ್ ಕ್ರಾಸ್ ಬಿಡುಗಡೆ

By Nagaraja

ಇಟಲಿ ಮೂಲದ ಐಕಾನಿಕ್ ಫಿಯೆಟ್ ಸಂಸ್ಥೆಯು 2014 ಅಕ್ಟೋಬರ್ ತಿಂಗಳಲ್ಲಿ ಜನಪ್ರಿಯ ಅವೆಂಚ್ಯುರಾ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ತದಾ ಬಳಿಕ ಫಿಯೆಟ್ ಅವೆಂಚ್ಯುರಾ ಅಬಾರ್ತ್ ಎಂಬ ನಿರ್ವಹಣೆ ಮಾದರಿಗೂ ಸಂಸ್ಥೆಯು ವೇದಿಕೆಯೊದಗಿಸಿತ್ತು.

ಈ ನಡುವೆ ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಮಗದೊಂದು ಅವೆಂಚ್ಯುರಾ ಅರ್ಬನ್ ಕ್ರಾಸ್ ಮಾದರಿಯನ್ನು ಫಿಯೆಟ್ ಅನಾವರಣಗೊಳಿಸಿತ್ತು. ಇದೀಗ ಬಂದಿರುವ ಸುದ್ದಿಯ ಪ್ರಕಾರ ಫಿಯೆಟ್ ಅವೆಂಚ್ಯುರಾ ಅರ್ಬನ್ ಕ್ರಾಸ್ ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಪ್ರಸಕ್ತ ಸಾಲಿನಲ್ಲೇ ಫಿಯೆಟ್ ಅರ್ಬನ್ ಕ್ರಾಸ್ ಬಿಡುಗಡೆ

ಆಕರ್ಷಕ ಫ್ರಂಟ್ ಗ್ರಿಲ್, ಟು-ಟೋನ್ ಬಣ್ಣ, ಎಲ್ ಇಡಿ ಹೆಡ್ ಲ್ಯಾಂಪ್, ಫಾಲೋ ಮಿ ಹೆಡ್ ಲ್ಯಾಂಪ್, ಹೊರಗಡೆ ರಿಯರ್ ವ್ಯೂ ಮಿರರ್ ಟರ್ನ್ ಇಂಡಿಕೇಟರ್, ಪ್ಯಾನರಾಮಿಕ್ ಸನ್ ರೂಫ್ ಮುಂತಾದ ವೈಶಿಷ್ಟ್ಯಗಳನ್ನು ನೂತನ ಫಿಯೆಟ್ ಅರ್ಬನ್ ಕ್ರಾಸ್ ಕಾರಿನಲ್ಲಿ ಕಾಣಬಹುದಾಗಿದೆ.

ಪ್ರಸಕ್ತ ಸಾಲಿನಲ್ಲೇ ಫಿಯೆಟ್ ಅರ್ಬನ್ ಕ್ರಾಸ್ ಬಿಡುಗಡೆ

17 ಇಂಚುಗಳ ಅಲಾಯ್ ವೀಲ್, ಟೈಲ್ ಲ್ಯಾಂಪ್ ನೊಳಗೆ ಎಲ್ ಇಡಿ ಓಪ್ಟಿಕಲ್ ಗೈಡ್, ಸಿಲ್ವರ್ ಬಾಡಿ ಕ್ಲಾಡಿಂಗ್ ಮುಂತಾದ ವ್ಯವಸ್ಥೆಗಳು ಇದರಲ್ಲಿರಲಿದೆ.

ಪ್ರಸಕ್ತ ಸಾಲಿನಲ್ಲೇ ಫಿಯೆಟ್ ಅರ್ಬನ್ ಕ್ರಾಸ್ ಬಿಡುಗಡೆ

ಕಾರಿನೊಳಗೂ ಜೋಡಿ ಬಣ್ಣದ ಜೊತೆಗೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂಗಳು ಇರಲಿದೆ. ಹಾಗೆಯೇ ಪ್ರಯಾಣಕರ ಅನುಕೂಲತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ಪ್ರಸಕ್ತ ಸಾಲಿನಲ್ಲೇ ಫಿಯೆಟ್ ಅರ್ಬನ್ ಕ್ರಾಸ್ ಬಿಡುಗಡೆ

ನೂತನ ಫಿಯೆಟ್ ಅವೆಂಚ್ಯುರಾ ಅರ್ಬನ್ ಕ್ರಾಸ್ ಮಾದರಿಯು 1.4 ಲೀಟರ್ ಟಿ ಜೆಟ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 210 ಎನ್ ಎಂ ತಿರುಗುಬದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಫೈವ್ ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಪ್ರಸಕ್ತ ಸಾಲಿನಲ್ಲೇ ಫಿಯೆಟ್ ಅರ್ಬನ್ ಕ್ರಾಸ್ ಬಿಡುಗಡೆ

ಒಟ್ಟಿನಲ್ಲಿ ತನ್ನ ಶ್ರೇಣಿಯ ಕಾರುಗಳನ್ನು ದೇಶದಲ್ಲಿ ಒಂದೊಂದಾಗಿ ವಿಸ್ತರಿಸುವ ಯೋಜನೆಯಲ್ಲಿರುವ ಫಿಯೆಟ್ ನಿಧಾನವಾಗಿ ಜನ ಮೆಚ್ಚೆಗುಗೆ ಪಾತ್ರವಾಗಲಿದೆ. ತನ್ಮೂಲಕ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ವ್ಯಾಪಾರವನ್ನು ಕುದುರಿಸಿಕೊಳ್ಳುವ ಇರಾದೆಯಲ್ಲಿದೆ.

Most Read Articles

Kannada
Read more on ಫಿಯೆಟ್ fiat
English summary
Fiat Avventura Urban Cross Launch Date Revealed
Story first published: Saturday, July 2, 2016, 17:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X