ಹೊಸ ವರ್ಷಕ್ಕೆ ಹೋಂಡಾದಿಂದ ನವೀಕೃತ ಸಿಟಿ ಕಾರು ಬಿಡುಗಡೆ

ಮುಂದಿನ ವರ್ಷಾರಂಭದಲ್ಲಿ ಭಾರತದಲ್ಲಿ 2017 ಹೋಂಡಾ ಸಿಟಿ ಕಾರು ಬಿಡುಗಡೆಯಾಗಲಿದೆ.

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಹೊಸ ವರ್ಷದಲ್ಲಿ ಮಗದೊಂದು ಉಡುಗೊರೆಯನ್ನು ನೀಡಲಿದೆ. ಬಲ್ಲ ಮೂಲಗಳ ಪ್ರಕಾರ ನವೀಕೃತ ಹೋಂಡಾ ಸಿಟಿ ಮಧ್ಯಮ ಗಾತ್ರದ ಸೆಡಾನ್ ಕಾರು 2017 ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಹೊಸ ವರ್ಷಕ್ಕೆ ಹೋಂಡಾದಿಂದ ನವೀಕೃತ ಸಿಟಿ ಕಾರು ಬಿಡುಗಡೆ

ಮೂರು ವರ್ಷಗಳ ಹಿಂದೆ ಬಿಡುಗಡೆಗೊಂಡಿರುವ ನಾಲ್ಕನೇ ತಲೆಮಾರಿನ ಹೋಂಡಾ ಸಿಟಿ ಇದುವರೆಗೆ ಎಱಡು ಲಕ್ಷಕ್ಕೂ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಂಡಿದೆ. ಈಗ ಹೊಸ ಸ್ವರೂಪವನ್ನು ಪಡೆಯಲಿದೆ.

ಹೊಸ ವರ್ಷಕ್ಕೆ ಹೋಂಡಾದಿಂದ ನವೀಕೃತ ಸಿಟಿ ಕಾರು ಬಿಡುಗಡೆ

1998ನೇ ಇಸವಿಯಲ್ಲಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ಹೋಂಡಾ ಸಿಟಿ ದೇಶದಲ್ಲಿ 6.3 ಲಕ್ಷಕ್ಕೂ ಹೆಚ್ಚು ಹೆಮ್ಮೆಯ ಮಾಲಿಕರನ್ನು ಹೊಂದಿದೆ.

ಹೊಸ ವರ್ಷಕ್ಕೆ ಹೋಂಡಾದಿಂದ ನವೀಕೃತ ಸಿಟಿ ಕಾರು ಬಿಡುಗಡೆ

ಪ್ರಸಕ್ತ ಸಾಲಿನಲ್ಲಷ್ಟೇ ಈ ಜಪಾನ್ ಸಂಸ್ಥೆಯು ಬ್ರಿಯೊ ಹಾಗೂ ಅಮೇಜ್ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು.

ಹೊಸ ವರ್ಷಕ್ಕೆ ಹೋಂಡಾದಿಂದ ನವೀಕೃತ ಸಿಟಿ ಕಾರು ಬಿಡುಗಡೆ

2017 ಹೋಂಡಾ ಸಿಟಿ ವಿನ್ಯಾಸದ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಆದರೂ ಚೀನಾದಲ್ಲಿರುವ ಹೋಂಡಾ ಗ್ರೇಝ್ ಮಾದರಿಗೆ ಸಮಾನವಾದ ವಿನ್ಯಾಸವನ್ನು ಪಡೆದುಕೊಳ್ಳುವುದು ಬಹುತೇಕ ಸಮಾನವಾಗಿದೆ.

ಹೊಸ ವರ್ಷಕ್ಕೆ ಹೋಂಡಾದಿಂದ ನವೀಕೃತ ಸಿಟಿ ಕಾರು ಬಿಡುಗಡೆ

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಮುಂದಿನ ತಲೆಮಾರಿನ ಅಕಾರ್ಡ್ ಸೆಡಾನ್ ಕಾರಿನಿಂದಲೂ ವಿನ್ಯಾಸ ಪ್ರೇರಣೆಯನ್ನು ಗಿಟ್ಟಿಸಿಕೊಳ್ಳಲಿದೆ.

ಹೊಸ ವರ್ಷಕ್ಕೆ ಹೋಂಡಾದಿಂದ ನವೀಕೃತ ಸಿಟಿ ಕಾರು ಬಿಡುಗಡೆ

ಕಾರಿನೊಳಗೆ ವಾಯ್ಸ್ ಕಮಾಂಡ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಆರು ಏರ್ ಬ್ಯಾಗ್ ಗಳ ಸೌಲಭ್ಯವಿರಲಿದೆ.

ಹೊಸ ವರ್ಷಕ್ಕೆ ಹೋಂಡಾದಿಂದ ನವೀಕೃತ ಸಿಟಿ ಕಾರು ಬಿಡುಗಡೆ

ಇನ್ನು 1.5 ಲೀಟರ್ ಪೆಟ್ರೋಲ್ ಎಂಜಿನ್ 145 ಎನ್ ಎಂ ತಿರುಗುಬಲದಲ್ಲಿ 119 ಅಶ್ವಶಕ್ತಿಯನ್ನು ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 100 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೊಸ ವರ್ಷಕ್ಕೆ ಹೋಂಡಾದಿಂದ ನವೀಕೃತ ಸಿಟಿ ಕಾರು ಬಿಡುಗಡೆ

ಭಾರತದಲ್ಲಿ ಪ್ರಮುಖವಾಗಿಯೂ ಮಾರುತಿ ಸುಜುಕಿ ಸಿಯಾಝ್ ಜೊತೆಗೆ ಹ್ಯುಂಡೈ ವೆರ್ನಾ ಮಾದರಿಗಳಿಗೆ ಹೋಂಡಾ ಸಿಟಿ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
Read more on ಹೋಂಡಾ
English summary
Honda City Facelift Launch Imminent — All Details Revealed
Story first published: Thursday, December 1, 2016, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X