ಭಾರತದತ್ತ ಹೆಜ್ಜೆ ಹಾಕಿದ ಹೋಂಡಾ ಡಬ್ಲ್ಯುಆರ್-ವಿ ಕ್ರಾಸೋವರ್ ಎಸ್‌ಯುವಿ
2017ನೇ ಸಾಲಿನ ದ್ವಿತಿಯಾರ್ಧದಲ್ಲಿ ಡಬ್ಲ್ಯುಆರ್-ವಿ ಕ್ರಾಸೋವರ್ ಕ್ರೀಡಾ ಬಳಕೆಯ ವಾಹನವನ್ನು ಹೋಂಡಾ ಬಿಡುಗಡೆ ಮಾಡಲಿದೆ.
ಭಾರತದಲ್ಲಿ ಮಗದೊಂದು ಆಕರ್ಷಕ ಕಾರನ್ನು ಬಿಡುಗಡೆ ಮಾಡುವ ತಯಾರಿಯಲ್ಲಿ ಜಪಾನ್ ಮೂಲದ ಹೋಂಡಾ ಸಂಸ್ಥೆಯು ತೊಡಗಿಸಿಕೊಂಡಿದೆ. ಬಲ್ಲ ಮೂಲಗಳ ಪ್ರಕಾರ ಹೋಂಡಾ ಡಬ್ಲ್ಯುಆರ್-ವಿ ಕ್ರಾಸೋವರ್ ಕ್ರೀಡಾ ಬಳಕೆಯ ವಾಹನವು ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ.

ಈಗಗಾಲೇ ಟೆಸ್ಟಿಂಗ್ ಹಂತದಲ್ಲಿರುವ ಹೋಂಡಾ ಡಬ್ಲ್ಯುಆರ್-ವಿ ಕ್ರಾಸೋವರ್ ಎಸ್ ಯುವಿ, 2017 ಮಧ್ಯಂತರ ಅವಧಿಯಲ್ಲಿ ದೇಶದ ಮಾರುಕಟ್ಟೆಯನ್ನು ತಲುಪಲಿದೆ.

ಜನಪ್ರಿಯ ಹೋಂಡಾ ಜಾಝ್ ಹ್ಯಾಚ್ ಬ್ಯಾಕ್ ಕಾರಿನ ತಳಹದಿಯಲ್ಲಿ ನೂತನ ಡಬ್ಲ್ಯುಆರ್-ವಿ ನಿರ್ಮಿಸಲಾಗುತ್ತಿದೆ. ಅಲ್ಲದೆ ಆಕ್ರಮಣಕಾರಿ ನಿರ್ಮಾಣ ನೀತಿಯನ್ನು ಅನುಸರಿಸಲಾಗಿದೆ.

ಸಿ ಆಕಾರದ ಡೇಟೈಮ್ ರನ್ನಿಂಗ್ ಲ್ಯಾಂಪ್ ಜೊತೆಗೆ ಕ್ರೋಮ್ ಗ್ರಿಲ್ ಮುಂಭಾಗದಲ್ಲಿರಲಿದೆ. ಇನ್ನು ದೊಡ್ಡದಾದ ವೀಲ್ ಆರ್ಚ್ ಇದರಲ್ಲಿದೆ.

ಬ್ರೆಜಿಲ್ ವಿನ್ಯಾಸ ತಂಡದಿಂದ ಅಭಿವೃದ್ಧಿಗೊಳಿಸಲಾಗಿರುವ ಹೋಂಡಾ ಡಬ್ಲ್ಯುಆರ್-ವಿ ಪೂರ್ಣರೂಪ 'ವಿನ್ಸಮ್ ರನ್‌ಎಬೌಟ್ ವೆಹಿಕಲ್' ಎಂಬುದಾಗಿದೆ.

ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಜಾಝ್ ಗೆ ಸಮಾನವಾದ ಎಂಜಿನ್ ಗಿಟ್ಟಿಸಿಕೊಳ್ಳಲಿದೆ.

ಅಮೇಜ್ ಹಾಗೂ ಬ್ರಿಯೊದಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ವಿಟೆಕ್ ಪೆಟ್ರೋಲ್ ಎಂಜಿನ್ 110 ಎನ್ ಎಂ ತಿರುಗುಬಲದಲ್ಲಿ 90 ಅಶ್ವಶಕ್ತಿ ಉತ್ಪಾದಿಸಲಿದೆ.

ಹಾಗೆಯೇ 1.5 ಲೀಟರ್ ಐ ಡಿಟೆಕ್ ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 100 ಅಶ್ವಶಕ್ತಿಯನ್ನು ನೀಡಲಿದೆ. ಇನ್ನು ಐದು ಸ್ಪೀಡ್ ಮ್ಯಾನುವಲ್ ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಪಡೆಯಲಿದೆ.

ದೇಶದಲ್ಲಿ ಪ್ರಮುಖವಾಗಿಯೂ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಮತ್ತು ಫೋರ್ಡ್ ಇಕೊಸ್ಪೋರ್ಟ್ ಮಾದರಿಗಳಿಗೆ ನೂತನ ಕಾರು ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.


Click it and Unblock the Notifications








