ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಪ್ರತಿಷ್ಠಿತ ಲಾಸ್ ಏಂಜಲೀಸ್ ನಲ್ಲಿ ಪ್ರದರ್ಶನ ಕಂಡಿರುವ ಕೆಲವು ಆಕರ್ಷಕ ಕಾರುಗಳು ನಿಕಟ ಭವಿಷ್ಯದಲ್ಲೇ ಭಾರತದಲ್ಲೂ ಬಿಡುಗಡೆಯಾಗಲಿದೆ.

By Nagaraja

ಇತ್ತೀಚೆಗಷ್ಟೇ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ನಡೆದ ವಾಹನ ಪ್ರದರ್ಶನ ಮೇಳದಲ್ಲಿ ಅನೇಕ ಹೊಸ ಮಾದರಿಗಳು ಪ್ರದರ್ಶನಗೊಂಡಿದ್ದವು. ಈ ಪೈಕಿ ಕೆಲವೊಂದು ಕಾರುಗಳು ನಿಕಟ ಭವಿಷ್ಯದಲ್ಲೂ ಭಾರತದಲ್ಲೂ ಬಿಡುಗಡೆಯೆಂಬ ಸುದ್ದಿಯು ವಾಹನ ಪ್ರೇಮಿಗಳಲ್ಲಿ ಬಹಳಷ್ಟು ಕುತೂಹಲಕ್ಕೀಡು ಮಾಡಿದೆ. ಪ್ರಸ್ತುತ ಲೇಖನದಲ್ಲಿ ಈ ಸಂಬಂಧ ವಿಸೃತ ವಿವರಣೆಯನ್ನು ಕೊಡಲಿದ್ದೇವೆ.

ಫೋರ್ಡ್ ಇಕೊಸ್ಪೋರ್ಟ್ ಫೇಸ್ ಲಿಫ್ಟ್

ಫೋರ್ಡ್ ಇಕೊಸ್ಪೋರ್ಟ್ ಫೇಸ್ ಲಿಫ್ಟ್

ಫೋರ್ಡ್ ಇಕೊಸ್ಪೋರ್ಟ್ ಆಗಲೇ ಭಾರತ ಮಾರುಕಟ್ಟೆಯಲ್ಲಿದ್ದು, ಸದ್ಯದಲ್ಲೇ ಹೊಸ ಸ್ವರೂಪವನ್ನು ಪಡೆಯಲಿದೆ. ಅಮೆರಿಕದಲ್ಲೂ ಬಿಡುಗಡೆಯಾಗಲಿರುವ ಹೊಸ ಫೋರ್ಡ್ ಇಕೊಸ್ಪೋರ್ಟ್ ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಪ್ರದರ್ಶನ ಕಂಡಿತ್ತು.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಕಳೆದ ಮೂರು ವರ್ಷಗಳಿಂದ ಮಾರಾಟದಲ್ಲಿರುವ ಇಕೊಸ್ಪೋರ್ಟ್ ದೇಶದಲ್ಲಿ ಉತ್ತಮ ಬೇಡಿಕೆ ಕಾಪಾಡಿಕೊಂಡಿದೆ. ಇದು ಹಳೆಯ ಮಾದರಿಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಪ್ರಮುಖವಾಗಿಯೂ ಅಂದತೆಯಲ್ಲಿ ಬದಲಾವಣೆ ಕಂಡುಬರಲಿದೆ. ಇದು ಹೊಸ ಫ್ರಂಟ್ ಗ್ರಿಲ್, ಬಂಪರ್ ಜೊತೆಗೆ ಕಾರಿನೊಳಗೆ ಹೊಸ ಡ್ಯಾಶ್ ಬೋರ್ಡ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮುಂತಾದ ಸೌಲಭ್ಯಗಳನ್ನು ಪಡೆಯಲಿದೆ.

ಷೆವರ್ಲೆ ಬೀಟ್ ಆಕ್ಟಿವ್

ಷೆವರ್ಲೆ ಬೀಟ್ ಆಕ್ಟಿವ್

ಕಳೆದ ಕೆಲವು ಸಮಯಗಳಿಂದ ಷೆವರ್ಲೆ ಬೀಟ್ ಆಕ್ಟಿವ್ ಸುದ್ದಿಯಲ್ಲಿದ್ದು, ಭಾರತಕ್ಕೆ ಆಗಮಿಸಲು ಸೂಕ್ತ ಸಮಯದ ಹುಡುಕಾಟದಲ್ಲಿದೆ. ಅಮೆರಿಕ ಮೂಲದ ಸಂಸ್ಥೆಯೇ ಆಗಿರುವ ಜನರಲ್ ಮೋಟಾರ್ಸ್, ಷೆವರ್ಲೆ ಬೀಟ್ ಆಕ್ಟಿವ್ ಕಾರನ್ನು ಭಾರತಕ್ಕೆ ಪರಿಚಯಿಸಲಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

2016 ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಜನ ಮನ ಗೆದ್ದಿರುವ ಷೆವರ್ಲೆ ಬೀಟ್ ಕ್ರಾಸೋವರ್ ಕಾರು ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಕಾಯ್ದುಕೊಂಡಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಅಮೆರಿಕದಲ್ಲಿರುವ ಬೀಟ್ ಆವೃತ್ತಿಯು 1.4 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 127 ಎನ್ ಎಂ ತಿರುಗುಬಲದಲ್ಲಿ 98 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದೇ ಎಂಜಿನ್ ಆಯ್ಕೆ ದೇಶದಲ್ಲೂ ಲಭ್ಯವಾಗುವ ಸಾಧ್ಯತೆಯಿದೆ.

ಹೋಂಡಾ ಸಿಆರ್ ವಿ

ಹೋಂಡಾ ಸಿಆರ್ ವಿ

ಪರಿಷ್ಕೃತ ಹೋಂಡಾ ಸಿಆರ್ ವಿ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವು ಸಹ ಲಾಸ್ ಏಂಜಲೀಸ್ ನಲ್ಲಿ ತನ್ನ ಶಕ್ತಿ ಪ್ರದರ್ಶನವನ್ನು ನಡೆಸಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಆಧುನಿಕತೆಗೆ ತಕ್ಕಂತೆ ಆಆರ್ ವಿ ಕಾರಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಇದು ಭಾರತ ಮಾರುಕಟ್ಟೆಯಲ್ಲೂ ಪ್ರತಿಫಲಿಸಲಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಅಮೆರಿಕ ಮೂಲದ ಹೋಂಡಾ ಸಿಆರ್ ವಿ ನಲ್ಲಿರುವ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 190 ಅಶ್ವಶಕ್ತಿಯನ್ನು ಮತ್ತು 2.4 ಲೀಟರ್ ಎಂಜಿನ್ 184 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಜೀಪ್ ಕಾಂಪಾಸ್

ಜೀಪ್ ಕಾಂಪಾಸ್

ಈಗಾಗಲೇ ವರದಿ ಮಾಡಿರುವಂತೆಯೇ ನೂತನ ಕಾಂಪಾಸ್ ಕ್ರೀಡಾ ಬಳಕೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಜೀಪ್, ಭಾರತಕ್ಕೆ ಕಾಲಿಡಲಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಪುಣೆಯ ರಂಜನ್ ಗಾಂವ್ ಘಟಕದಲ್ಲಿ ಜೀಪ್ ಕಾಂಪಾಸ್ ನಿರ್ಮಾಣವಾಗಲಿದೆ. ಇದು ಮೊನೊಕಾಕ್ ತಳಹದಿಯಲ್ಲಿ ನಿರ್ಮಾಣವಾಗಲಿದ್ದು, ಫೋರ್ ವೀಲ್ ಚಾಲನಾ ವ್ಯವಸ್ಥೆಯನ್ನು ಪಡೆಯಲಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

20 ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿರುವ ಜೀಪ್ ಕಾಂಪಾಸ್ ಯು ಕನೆಕ್ಟ್ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ ಯ ಜೊತೆಗೆ ಆಪರ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಮುಂತಾದ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ.

ಷೆವರ್ಲೆ ಕ್ರೂಜ್

ಷೆವರ್ಲೆ ಕ್ರೂಜ್

2017 ದ್ವಿತಿಯಾರ್ಧದಲ್ಲಿ ನೂತನ ಷೆವರ್ಲೆ ಕ್ರೂಜ್ ಬಿಡುಗಡೆಯಾಗಲಿದ್ದು, ಭಾರತದತ್ತವೂ ಹೆಜ್ಜೆಯನ್ನಿಡಲಿದೆ. ಇದರಲ್ಲಿ ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಷೆವರ್ಲೆ ಕ್ರೂಜ್ ಅಮೆರಿಕ ಆವೃತ್ತಿಯಲ್ಲಿರುವ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 240 ಎನ್ ಎಂ ತಿರುಗುಬಲದಲ್ಲಿ 153 ಅಶ್ವಶಕ್ತಿಯನ್ನು ನೀಡಲಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಆದರೆ ಭಾರತ ಆವೃತ್ತಿಯು ಮತ್ತಷ್ಟು ಶಕ್ತಿಶಾಲಿ ಎನಿಸಿಕೊಳ್ಳಲಿದ್ದು, ಈಗ ಮಾರಾಟದಲ್ಲಿರುವ ಮಾದರಿಗೆ ಸಮಾನವಾಗಿ 2.0 ಲೀಟರ್ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.

ಹ್ಯುಂಡೈ ಐಯೊನಿಕ್

ಹ್ಯುಂಡೈ ಐಯೊನಿಕ್

ಹೈಬ್ರಿಡ್ ಕಾರುಗಳತ್ತವೂ ಗಮನ ಹರಿಸಿರುವ ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಕೆಲವು ಅತ್ಯುತ್ತಮ ಉತ್ಪನ್ನಗಳು ಪ್ರದರ್ಶನಗೊಂಡಿದ್ದವು. ಇವುಗಳಲ್ಲಿ ಹ್ಯುಂಡೈ ಐಯೊನಿಕ್ ಪ್ರಮುಖವೆನಿಸಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಇಲ್ಲಿ ಗಮನಾರ್ಹ ಅಂಶವೆಂದರೆ ಪರಿಸರ ಸ್ನೇಹಿ ಐಯೊನಿಕ್ ಕಾರನ್ನು ಭಾರತೀಯ ವಾಹನ ಪ್ರೇಮಿಗಳು ನಿರೀಕ್ಷೆ ಮಾಡಬಹುದಾಗಿದೆ. ಇದು ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಮಾದರಿಗಳಲ್ಲಿ ಬಿಡುಗಡೆಯಾಗಲಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಭಾರತಕ್ಕೆ ಐಯೊನಿಕ್ ಹೈಬ್ರಿಡ್ ಆವೃತ್ತಿಯು ತಲುಪುವ ಸಾಧ್ಯತೆಯು ಜಾಸ್ತಿಯಾಗಿದೆ. ಇದರಲ್ಲಿರುವ 1.6 ಲೀಟರ್ ಪೆಟ್ರೋಲ್ ಎಂಜಿನ್ 147 ಎನ್ ಎಂ ತಿರುಗುಬಲದಲ್ಲಿ 105 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಎಲೆಕ್ಟ್ರಿಕ್ ಮೋಟಾರು 60 ಅಶ್ವಶಕ್ತಿ ಹೆಚ್ಚುವರಿಯಾಗಿ ಉತ್ಪಾದಿಸಲು ನೆರವಾಗಲಿದೆ. ಇನ್ನು ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಲ್ಯಾಂಡ್ ರೋವರ್ ಡಿಸ್ಕವರಿ

ಲ್ಯಾಂಡ್ ರೋವರ್ ಡಿಸ್ಕವರಿ

2016 ಪ್ಯಾರಿಸ್ ಮೋಟಾರು ಶೋದ ಬಳಿಕವೀಯ 2016 ಲಾಸ್ ಏಂಜಲೀಸ್ ಆಟೋ ಶೋವನ್ನು ತಲುಪಿರುವ ಲ್ಯಾಂಡ್ ರೋವರ್ ಡಿಸ್ಕವರಿ ದೇಶದ ಐಷಾರಾಮಿ ವಾಹನ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಒಮ್ಮೆ ಭಾರತದಲ್ಲಿ ಬಿಡುಗಡೆಗೊಂಡಾಗ ನೂತನ ಲ್ಯಾಂಡ್ ರೋವರ್ ಡಿಸ್ಕವರಿ ಕಾರು ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಟೈಲ್ ಲೈಟ್ಸ್, ಹೊಸ ವಿನ್ಯಾಸ ತಂತ್ರಗಾರಿಕೆ ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಲಾಸ್ ಏಂಜಲೀಸ್ ನಿಂದ ಭಾರತದತ್ತ ಹೆಜ್ಜೆಯನ್ನಿಟ್ಟ ಕಾರುಗಳು

ಹೊಸ ಡಿಸ್ಕವರಿ ಕಾರು 2.0 ಲೀಟರ್ ಇಗ್ನೇನಿಯಂ ಡೀಸೆಲ್ ಎಂಜಿನ್ ಮತ್ತು 3.0 ಲೀಟರ್ ವಿ6 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳನ್ನು ಗಿಟ್ಟಿಸಿಕೊಳ್ಳಲಿದೆ.

Most Read Articles

Kannada
Read more on ಕಾರು cars
English summary
India Bound Cars And SUVs From The 2016 LA Auto Show
Story first published: Tuesday, November 22, 2016, 18:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X