ಡಿ.ಜಿ ಲಾಕರ್ ಇದ್ರೆ ನೀವ್ ಡಿಎಲ್ ಕೈಯಲ್ಲಿ ಹಿಡ್ಕೊಂಡು ಓಡಾಡಬೇಕಾಗಿಲ್ಲ...!!

Posted By: Staff

ಮೊದಲೆಲ್ಲ ವಾಹನ ಪರವಾನಗಿ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಕಾಲವೊಂದಿತ್ತು, ಪ್ರತಿಯೊಬ್ಬರೂ ತಮ್ಮ ಪರವಾನಗಿ ಪತ್ರದ ನಕಲು ಹಿಡಿದು ತೆರಳಬೇಕಾದ ಅವಶ್ಯಕತೆ ಇತ್ತು. ಈಗ ಕಾಲ ಬದಲಾಗಿದೆ. ಪ್ರತಿಯೊಂದು ಡಿಜಿಟಲೀಕರಣ ಆಗುತ್ತಿರುವ ಹೊತ್ತಿನಲ್ಲಿ, ಡಿಎಲ್ ಕೂಡ ಡಿಜಿಟಲ್ ಆಗುವತ್ತ ಧಾಪುಗಾಲಿಟ್ಟಿದೆ.

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಡಿಜಿ ಲಾಕರ್ ಅಂದ್ರೆ ಏನು ?

ಡಿಜಿ ಲಾಕರ್ ಒಂದು ವೈಯಕ್ತಿಕ ಸಂಗ್ರಹ ಸ್ಥಳ, ಇದನ್ನು ಪ್ರತಿ ನಿವಾಸಿಯ ಆಧಾರ್ ಸಂಖ್ಯೆಯನ್ನು ಆಧರಿಸಿ ಲಿಂಕ್ ಮಾಡಲಾಗಿ ಮೀಸಲಿಟ್ಟ ವೈಯಕ್ತಿಕ ಸಂಗ್ರಹ ಸ್ಥಳ ಎಂದು ಪರಿಗಣಿಸಬಹುದು.

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಇ-ದಾಖಲೆಗಳು, ಯುನಿಫಾರ್ಮ್ ರಿಸೋರ್ಸ್‌ ಐಡೆಂಟಿಫೈಯರ್‌ (ಯುಆರ್‌ಐ) (ಧ್ವನಿ ಮುದ್ರಿಕೆ, ವಿಡಿಯೋ, ಬರಹ) ಇತ್ಯಾದಿಗಳನ್ನೂ ಇದರಲ್ಲಿ ಶೇಖರಿಸಿಡಬಹುದು. ಡಿ ಜಿ ಲಾಕರ್ ಅನ್ನು ವೆಬ್ ಪೋರ್ಟಲ್ ಅಥವಾ ಮೊಬೈಲ್ ಅಪ್ಲೀಕೆಷನ್ ಮೂಲಕ ಪ್ರವೇಶಿಸಬಹುದಾಗಿದೆ.

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಡಿ ಜಿ ಲಾಕರ್‌ನ ಬಹುಮುಖ್ಯ ಭಾಗಗಳು:

1) ಡ್ಯಾಶ್ ಬೋರ್ಡ್

2) ನೀಡಲಾಗಿರುವ ದಾಖಲೆಗಳು.

3) ಅಪ್ಲೋಡ್ಡಾ ಕ್ಯುಮೆಂಟ್ಸ್:

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

4) ಹಂಚಿಕೆ ಮಾಡಲಾದ ಡಾಕ್ಯುಮೆಂಟ್ಗಳು.

5) ಚಟುವಟಿಕೆ (ಆಕ್ಟಿವಿಟಿ )

6) ವಿತರಕರು (ಇಸ್ಸೂರ್ಸ್)

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಖಾತೆಯನ್ನು ಹೇಗೆ ತೆರೆಯಬೇಕು ?

ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡ ನಂತರ ಸೈನ್‌ ಇನ್‌ ಆಯ್ಕೆ ಕ್ಲಿಕ್‌ ಮಾಡಿ ಲಾಗಿನ್‌ ಆಗಿ. ಇಲ್ಲಿ ನಿಮ್ಮ ಅಧಿಕೃತ ಮೊಬೈಲ್‌ ನಂಬರ್‌ ನೀಡಬೇಕು. ಆ ನಂಬರ್‌ಗೆ ಒನ್‌ ಟೈಮ್‌ಪಾಸ್‌ವರ್ಡ್‌ (ಒಟಿಪಿ) ಬರುತ್ತದೆ.

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಓಟಿಪಿ ನಂಬರ್ ಬಳಸಿ ಮೊಬೈಲ್‌ ನಂಬರನ್ನು ಖಚಿತ ಪಡಿಸಿ. ಇದೇ ವೇಳೆ ಆ್ಯಪ್‌ ನಿಮ್ಮ ಯೂಸರ್‌ ನೇಮ್‌, ಪಾಸ್‌ವರ್ಡ್‌ ಹಾಕಲೂ ಹೇಳುತ್ತದೆ. ಪಾಸ್‌ ವರ್ಡ್‌ ನೀಡಿದ ಬಳಿಕ ನಿಮ್ಮ ಆಧಾರ್‌ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ನಂತರ ಬಲಭಾಗದಲ್ಲಿರುವ "ಲಿಂಕ್‌ ಆಧಾರ್‌' ಬಟನ್‌ ಅದುಮಿ 12 ಸಂಖ್ಯೆಗಳ ಆಧಾರ್‌ ಅನ್ನು ನಮೂದಿಸಿ. "ಕಂಟಿನ್ಯೂ' ಕೊಟ್ಟಾಗ ನಿಮ್ಮ ಅಧಿಕೃತ ಮೊಬೈಲ್‌ ನಂಬರ್‌ಗೆ ಒಟಿಪಿ ಬರುತ್ತದೆ.

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಹೋಂಸ್ಕ್ರೀನ್ ಬಲಭಾಗದಲ್ಲಿ ದಾಖಲೆಗಳನ್ನು ಅಪ್ಲೋಡ್‌ ಮಾಡಲು ಅಪ್ಲೋಡ್‌ ಬಟನ್‌ ಮತ್ತು ದಾಖಲೆಗಳನ್ನು ಪ್ರತ್ಯೇಕವಾಗಿಡಲು ಫೋಲ್ಡರ್‌ ಮಾಡುವ ಸೌಲಭ್ಯವೂ ಇದೆ.

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಡಿಜಿಲಾಕರ್‌ನಿಂದ ಸರ್ಕಾರದ ಯಾವುದೇ ಇಲಾಖೆಗೆ ನಿಮ್ಮ ದಾಖಲೆ ಕಳಿಸಬಹುದು. ಕಳಿಸಬೇಕಾದ ಇಲಾಖೆ ಹೆಸರು ನೀಡಿ "ಷೇರ್‌' ಬಟನ್‌ ಅದುಮಿದರೆ ನಿಮ್ಮ ದಾಖಲೆ ಅವರಿಗೆ ಲಭ್ಯ. ಆ ಇಲಾಖೆ ನಿಮ್ಮ ದಾಖಲೆಯನ್ನು ಪರಿಶೀಲಿಸಿದರೆ, ಈ ಬಗ್ಗೆ ನಿಮ್ಮ ಮೊಬೈಲ್‌, ಇಮೇಲ್‌ ಐಡಿಗೆ ಹಿಮ್ಮಾಹಿತಿ ಬರುತ್ತದೆ.

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಡಿಜಿ ಲಾಕರ್ ಸುರಕ್ಷತೆ ಹೇಗೆ ?

1. ಪಾಸ್​ವರ್ಡ್ ಬಗ್ಗೆ ಎಚ್ಚರವಿರಲಿ

2. ಪಾಸ್​ವರ್ಡ್ ಆಯ್ದುಕೊಳ್ಳುವಾಗ ಕೊಂಚ ಜಾಣ್ಮೆ ವಹಿಸಿ

3. ಒಂದೇ ತೆರನಾದ ಪಾಸ್​ವರ್ಡ್ ಬಳಕೆ ಕೈಬಿಡಿ

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

4. ಉಚಿತ ವೈ-ಫೈನಿಂದ ದೂರವಿರಿ:ಅಗತ್ಯವಿದ್ದರೆ ಮಾತ್ರ ಬಳಸಿ

5. ಕೊಡುಗೆಗಳ ಹೆಸರಲ್ಲಿ ವಂಚನೆ ನೆಡೆಸುತ್ತಾರೆ, ಎಚ್ಚರವಿರಲಿ

6. ಖಾತೆ ಬಗ್ಗೆ ಯಾರೊಂದಿಗೂ ವಿವರ ಹಂಚಿಕೊಳ್ಳದಿರಿ

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಡಿಜಿ ಲಾಕರ್‌ನ ಉಪಯೋಗಗಳು ಏನು ?

  • ದಾಖಲೆಗಳನ್ನು ಸುರಕ್ಷಿತ ಮಾರ್ಗದಲ್ಲಿ ಹಂಚಿಕೆ ಮಾಡಬಹುದು
  • ನಿಮ್ಮ ದಾಖಲೆಗಳ ನಕಲಿ ಬಳಕೆ ಮಾಡಲು ಅವಕಾಶ ಇರುವುದಿಲ್ಲ
  • ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ದಾಖಲೆಗಳನ್ನು ಪಡೆದುಕೊಳ್ಳಬಹುದು
  • ನಿಮ್ಮ ದಾಖಲೆಗಳ ಅನವಶ್ಯಕ ಉಪಯೋಗ ತಡೆದು ಸವಕಳಿ ಆಗದಂತೆ ಮಾಡುತ್ತದೆ
  • 10 ಎಂಬಿ ಡಾಟಾ ಅವಕಾಶ ನಿಮ್ಮ ಬಳಿ ಇರುತ್ತದೆ
ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ನನ್ನ ಡಿಜಿಟಲ್ ಲಾಕರ್ ಇ-ದಾಖಲೆಗಳನ್ನು ಹೇಗೆ ಹಂಚಿಕೊಳ್ಳಬಹುದು?

ನಿಮ್ಮ ಇ ಡಾಕ್ಯುಮೆಂಟ್ ಹಂಚಿಕೊಳ್ಳಲು ( ‘ಅಪ್ಲೋಡ್ ಡಾಕ್ಯುಮೆಂಟ್ಸ್' ಉಪವಿಭಾಗ ಅಡಿಯಲ್ಲಿ ‘ಡಿಜಿಟಲ್ ಡಾಕ್ಯುಮೆಂಟ್ಸ್' ಉಪವಿಭಾಗ ಅಡಿಯಲ್ಲಿ URI ಎಂದು ಸೂಚಿಸಲಾಗಿದೆ) ನೀವು ಹಂಚಿಕೊಳ್ಳಲು ಬಯಸುವ ಡಾಕ್ಯುಮೆಂಟ್ ಮುಂದೆ ಒದಗಿಸಿದ ‘ಹಂಚಿಕೊಳ್ಳಿ' ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಒಂದು ಸಂವಾದ ಪೆಟ್ಟಿಗೆಯ ಪಾಪ್ ಅಪ್ ತೋರಿಬರುತ್ತದೆ . ದಯವಿಟ್ಟು ಸಂವಾದ ಪೆಟ್ಟಿಗೆಯಲ್ಲಿ ಸ್ವೀಕರಿಸುವವರ ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ‘ಹಂಚಿಕೊಳ್ಳಿ' ಬಟನ್ ಕ್ಲಿಕ್ ಮಾಡಿ.

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಯಾವ ದಾಖಲೆ ಸಂಗ್ರಹಿಸಿಡಬಹುದು?

ಶಿಕ್ಷಣ ಪ್ರಮಾಣಪತ್ರಗಳು

ಆಧಾರ್‌ ಮಾಹಿತಿ

ಡ್ರೈವಿಂಗ್‌ ಲೈಸೆನ್ಸ್‌

ಪಾಸ್‌ಪೋರ್ಟ್‌

ಪಡಿತರ ಪತ್ರ

ಪಾನ್‌ ಕಾರ್ಡ್‌

ಚುನಾವಣೆ ಗುರುತು ಚೀಟಿ

ಇನ್ಮೇಲೆ ಡಿಎಲ್ ಇಲ್ಲದೆ ನಿಮಗೆ ಬೇಕೆಂದ ಕಡೆ ತಿರುಗಾಡಬಹುದು...

ಆದರೆ ಈ ದಾಖಲೆಗಳು ಪಿಡಿಎಫ್, ಎಕ್ಸ್‌ಎಂಎಲ್‌, ಜೆಪೆಗ್‌, ಜೆಪಿಜಿ, ಪಿಎನ್‌ಜಿ, ಬಿಎಂಪಿ, ಜಿಫ್ ಮಾದರಿಗಳಲ್ಲೇ ಇರಬೇಕಾದ್ದು ಅಗತ್ಯವಾಗುತ್ತದೆ. ಪ್ರತಿ ಫೈಲ್‌ 1 ಎಂ.ಬಿ.ಗಿಂತ ಹೆಚ್ಚು ಇರಬಾರದು.

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ವಾಹನ ನೋಂದಣಿ ಹಾಗೂ ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇನ್ಮುಂದೆ ನೀವು ಹರಸಾಹಸ ಪಡಬೇಕಿಲ್ಲ. ಯಾಕೇಂದ್ರೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸುತ್ತಿರುವ ಹೊಸ ಆ್ಯಪ್ ನಿಮ್ಮ ಸಹಾಯಕ್ಕೆ ಬರಲಿದೆ.

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಹೊಸ ಯೋಜನೆ ಕುರಿತು ರಾಜ್ಯ ಸಭೆಯಲ್ಲಿ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಖಾತೆ ಸಚಿವ ಪಿ.ರಾಧಾಕೃಷ್ಣನ್, ಭ್ರಷ್ಟಾಚಾರ ತಡೆಯುವಲ್ಲಿ ಈ ಯೋಜನೆ ಸಹಕಾರಿಯಾಗಿದೆ ಎಂದಿದ್ದಾರೆ. ಹೀಗಾಗಿ ವಾಹನ ನೋಂದಣಿ, ಡ್ರೈವಿಂಗ್ ಲೆಸೆನ್ಸ್ ಪಡೆಯುವುದು ಇನ್ನು ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಯಲಿದೆ.

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ವಾಹನ ನೋಂದಣಿ ಹೇಗೆ?

ಕೇಂದ್ರ ಸರ್ಕಾರ ವಾಹನ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಇದಕ್ಕಾಗಿ "ವಾಹನ್ 4.0" ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಏನಿದು "ವಾಹನ್ 4.0"..?

ಇದೊಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ನೀವು ಈ ಮೂಲಕವೇ ವಾಹನ ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬಿಳಲಿದ್ದು, ಅಧಿಕಾರಿಗಳ ಭ್ರಷ್ಟಾಚಾರಕ್ಕೂ ಕಡಿವಾಣ ಬಿಳಲಿದೆ.

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಲೈಸೆನ್ಸ್ ಪಡಿಯೋಕೆ "ಸಾರಥಿ 4.0"

ಹೊಸದಾಗಿ ಅಭಿವೃದ್ಧಿಗೊಳ್ಳುತ್ತಿರುವ "ಸಾರಥಿ 4.0" ಆ್ಯಪ್ ಮೂಲಕ ನೀವು ಲೈಸೆನ್ಸ್ ಪಡೆಯಬಹುದಾಗಿದೆ. ಇದರಿಂದಗಾಗಿ ಅನಾವಶ್ಯಕವಾಗಿ ತಿರುಗುವುದು ತಪ್ಪುವುದಲ್ಲದೇ ಮಧ್ಯವರ್ತಿಗಳು ಕೇಳಿದಷ್ಟು ಹಣ ಕೊಡುವುದು ತಪ್ಪಲಿದೆ.

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಡಿಜಿಟಲ್ ಇಂಡಿಯಾಕ್ಕೆ ಮನ್ನಣೆ

ಡಿಜಿಟಲ್ ಇಂಡಿಯಾ ಯೋಜನೆ ಅಂಗವಾಗಿಯೇ ಈ ಹೊಸ ಆ್ಯಪ್ ಬಿಡುಗಡೆಗೊಂಡಿದೆ. ಇದರಿಂದ ಸಾರ್ವಜನಿಕರು ದಿನಗಟ್ಟಲೇ ಅರ್ಜಿ ಹಿಡಿದು ನಿಲ್ಲುವ ತಾಪತ್ರಯ ತಗ್ಗಲಿದ್ದು, ನಿಗದಿತ ಅವಧಿಯಲ್ಲಿ ನಿಮ್ಮ ವಾಹನ ನೋಂದಣಿ ಮತ್ತು ಡ್ರೈವಿಂಗ್ ಲೈಸೆನ್ಸ್ ದೊರೆಯಲಿದೆ.

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಹೊಸ ಯೋಜನೆಯಿಂದ ಲಾಭವೇನು?

ಆರ್‌ಟಿಓ ಕಚೇರಿಗಳಿಗೆ ಅಲೆದು ಇಲ್ಲವೇ ಮಧ್ಯವರ್ತಿಗಳು ಕೇಳಿದಷ್ಟು ಹಣ ನೀಡಿ ಡಿಎಲ್ ಪಡೆಯುವ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ. ಕಾರಣ ಆನ್ ಲೈನ್‌ನಲ್ಲೇ ವಾಹನ ನೋಂದಣಿ ಹಾಗೂ ಲೈಸೆನ್ಸ್ ಸಿಗಲಿದ್ದು, ಸಾರ್ವಜನಿಕರು ನೆಮ್ಮದಿಯಿಂದ ಇರಬಹುದಾಗಿದೆ.

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಅನೇಕ ಜನ ವಾಹನಗಳನ್ನು ಅದೇಗೋ ಖರೀದಿ ಮಾಡ್ತಾರೆ. ಆದ್ರೆ ವಾಹನ ನೋಂದಣಿ ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅವರು ಪಡೋ ಕಷ್ಟ ಅಷ್ಟಿಲ್ಲ. ಹೀಗಾಗಿ ಸಾರಾಥಿ 4.0 ಮತ್ತು ವಾಹನ್ 4.0 ಆ್ಯಪ್ ಸಹಾಯವಾಗಲಿವೆ.

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ವಾಹನ ನೋಂದಣಿ ವೇಳೆ ಒಂದಿಲ್ಲೊಂದು ಕಾರಣ ಹೇಳಿ ಆಗುಬಹುದಾದ ನೋಂದಣಿಗೂ ಸತಾಯಿಸುವ ಅಧಿಕಾರಿಗಳು, ಲಂಚ ಕೊಟ್ಟರೆ ಮಾತ್ರ ನಿಮ್ಮ ಕೆಲಸ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಹೀಗಾಗಿ ಹೊಸ ಆ್ಯಪ್ ಈ ಎಲ್ಲಾ ಸಮಸ್ಯೆಗಳಿಗೂ ಬ್ರೇಕ್ ಹಾಕಲಿದೆ.

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಸಾರಾಥಿ 4.0 ಮತ್ತು ವಾಹನ್ 4.0 ಆ್ಯಪ್‌ಗಳನ್ನು ಈಗಾಗಲೇ ಹಲವಾರು ಜನ ಡೌನ್‌ಲೋಡ್ ಮಾಡಿದ್ದು, ಈ ಮೂಕವೇ ಅರ್ಜಿ ಸಲ್ಲಿಸುತ್ತಿದ್ದಾರೆ.

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಒಟ್ಟಿನಲ್ಲಿ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಹೊಸ ಯೋಜನೆ ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ. ಜೊತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಬಿಳಲಿದ್ದು, ಮಧ್ಯವರ್ತಿಗಳ ಹಾವಳಿಯೂ ತಗ್ಗಲಿದೆ.

English summary
Read in Kannada about Use “DigiLocker” To Carry Your Driving License And Registration Certificate. Get more details about 'DigiLocker' uses, how to open this app, security issues and more.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark