ತೆರೆಮರೆಯಲ್ಲಿ ಸಿದ್ಧವಾಗುತ್ತಿರುವ ಜಾಗ್ವಾರ್ ಬೇಬಿ ಎಸ್‌ಯುವಿ

By Nagaraja

ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ಐಕಾನಿಕ್ ಸಂಸ್ಥೆ ಜಾಗ್ವಾರ್, ತೆರೆಮರೆಯಲ್ಲಿ ಅತಿ ನೂತನ ಚಿಕ್ಕದಾದ ಕ್ರೀಡಾ ಬಳಕೆಯ ಕಾರೊಂದರ ತಯಾರಿ ನಡೆಸುತ್ತಿದೆ.

ವಾಹನೋದ್ಯಮದ ನಿಕಟ ಮೂಲಗಳ ಪ್ರಕಾರ ಜಾಗ್ವಾರ್ ಬೇಬಿ ಎಸ್ ಯುವಿ 'ಎಫ್-ಫೇಸ್' 2018 ವೇಳೆಯಾಗುವ ಮಾರುಕಟ್ಟೆ ಪ್ರವೇಶಿಸಲಿದೆ. ಈ ನಡುವೆ ಟೆಸ್ಟಿಂಗ್ ಪ್ರಕ್ರಿಯೆ ವೇಳೆ ಸಂಪೂರ್ಣವಾಗಿ ಮರೆಮಾಚಿದ ರೂಪದಲ್ಲಿ ಪತ್ತೆ ಹಚ್ಚಲಾಗಿದೆ.

ತೆರೆಮರೆಯಲ್ಲಿ ಸಿದ್ಧವಾಗುತ್ತಿರುವ ಜಾಗ್ವಾರ್ ಬೇಬಿ ಎಸ್‌ಯುವಿ

ಬ್ರಿಟನ್ ರಸ್ತೆಗಳಲ್ಲಿ ಜಾಗ್ವಾರ್ ಎಫ್-ಫೇಸ್ ಮಿನಿ ಕ್ರೀಡಾ ಬಳಕೆಯ ವಾಹನದ ಟೆಸ್ಟಿಂಗ್ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಒಂದೆರಡು ವರ್ಷಗಳಲ್ಲಿ ಇದು ರಸ್ತೆ ಪ್ರವೇಶ ಮಾಡಲಿದೆ.

ತೆರೆಮರೆಯಲ್ಲಿ ಸಿದ್ಧವಾಗುತ್ತಿರುವ ಜಾಗ್ವಾರ್ ಬೇಬಿ ಎಸ್‌ಯುವಿ

ನೂತನ ಎಸ್‌ಯುವಿ ಇ-ಫೇಸ್ ಎಂಬ ಹೆಸರಿನಿಂದ ಗುರುತಿಸ್ಪಡುವುದರ ಬಗ್ಗೆ ಮಾಹಿತಿಗಳಿದ್ದವು. ಆದರೆ ಎಫ್-ಫೇಸ್ ತಳಹದಿಯಲ್ಲಿ ನಿರ್ಮಾಣವಾಗುವ ಸಾಧ್ಯತೆಯು ಕಡಿಯಾಗಿರುವುದರಿಂದ ಇಂತಹದೊಂದು ಸಂಭವ ಕ್ಷೀಣಿಸಿವೆ.

ತೆರೆಮರೆಯಲ್ಲಿ ಸಿದ್ಧವಾಗುತ್ತಿರುವ ಜಾಗ್ವಾರ್ ಬೇಬಿ ಎಸ್‌ಯುವಿ

ಬದಲಾಗಿ ನೂತನ ಕಾಂಪಾಕ್ಟ್ ಎಸ್‍ಯುವಿ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೋಕ್ ಎಸ್‌ಯುವಿ ತಳಹದಿಯಲ್ಲಿ ನಿರ್ಮಾಣವಾಗಲಿದೆ.

ತೆರೆಮರೆಯಲ್ಲಿ ಸಿದ್ಧವಾಗುತ್ತಿರುವ ಜಾಗ್ವಾರ್ ಬೇಬಿ ಎಸ್‌ಯುವಿ

ಕಾರಿನಡಿಯಲ್ಲಿ ನಾಲ್ಕು ಸಿಲಿಂಡರ್ ಟರ್ಬೊಚಾರ್ಜಿಂಗ್ ಪೆಟ್ರೋಲ್ ಹಾಗೂ ಡೀಸಲ್ ಎಂಜಿನ್ ಗಳು ಜೋಡಣೆಯಾಗುವ ಸಾಧ್ಯತೆಯಿದೆ. ಇನ್ನು ಡೀಸೆಲ್ ಎಲೆಕ್ಟ್ರಿಕ್ ಹೈಬ್ರಿಡ್ ಕಾರಿನ ಪರೀಕ್ಷೆಯು ನಡೆಯುತ್ತಿದೆ.

ತೆರೆಮರೆಯಲ್ಲಿ ಸಿದ್ಧವಾಗುತ್ತಿರುವ ಜಾಗ್ವಾರ್ ಬೇಬಿ ಎಸ್‌ಯುವಿ

ನೂತನ ಕಾರು ಬಿಎಂಡಬ್ಲ್ಯು ಎಕ್ಸ್1 ಹಾಗೂ ಮುಂಬರುವ ಮರ್ಸಿಡಿಸ್ ಜಿಎಲ್ ಬಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಆದರೆ ಭಾರತಕ್ಕೆ ಯಾವಾಗ ಪ್ರವೇಶಸಲಿದೆ ಎಂಬುದು ಸದ್ಯಕ್ಕಂತೂ ಅಸ್ಪಷ್ಟ.

Most Read Articles

Kannada
English summary
Spy Pics: Smaller Jaguar SUV Based On F-Pace Spotted Testing
Story first published: Tuesday, July 26, 2016, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X