ಜಾಗ್ವಾರ್ ಎಕ್ಸ್‌ಎಫ್ ಲಾಂಚ್; ಬೆಲೆ 50 ಲಕ್ಷ, ವೈಶಿಷ್ಟ್ಯಗಳೇನು?

ಭಾರತದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್‌ನ ಪ್ರತಿಷ್ಠಿತ ಕಂಪನಿ ಜಾಗ್ವಾರ್ ಲ್ಯಾಂಡ್ ರೋವರ್ ದೇಶದಲ್ಲಿ ಅತಿ ನೂತನ ಎಕ್ಸ್‌ಎಫ್ ಐಷಾರಾಮಿ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದೆ.

ಆರಂಭಿಕ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ): 49.50 ಲಕ್ಷ ರು.

ಆಸಕ್ತ ಗ್ರಾಹಕರು ಬ್ರಿಟನ್ ನ ಅತ್ಯಂತ ಜನಪ್ರಿಯ ಕಾರಿಗಾಗಿ ಐದು ಲಕ್ಷ ರುಪಾಯಿಗಳನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ವಿತರಣೆ ಪ್ರಕ್ರಿಯೆಯು ಸೆಪ್ಟೆಂಬರ್ ತಿಂಗಳಿನಿಂದಲೇ ಆರಂಭಗೊಳ್ಳಲಿದೆ.

2016 ಜಾಗ್ವಾರ್ ಎಕ್ಸ್‌ಎಫ್ ಭಾರತದಲ್ಲಿ ಬಿಡುಗಡೆ

2016 ಜಾಗ್ವಾರ್ ಎಕ್ಸ್ ಎಫ್ ಐಷಾರಾಮಿ ಕಾರು ಅತಿ ನೂತನ ಇಗ್ನೆನಿಯಂ ಡೀಸೆಲ್ ಎಂಜಿನ್ ನಿಂದ ಆಗಮಿಸುತ್ತಿರುವುದು ವಿಶಿಷ್ಟತೆಯಾಗಿದೆ.

2016 ಜಾಗ್ವಾರ್ ಎಕ್ಸ್‌ಎಫ್ ಭಾರತದಲ್ಲಿ ಬಿಡುಗಡೆ

ನೂತನ ಜಾಗ್ವಾರ್ ಎಕ್ಸ್ ಎಫ್ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ಇದರ 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 340 ಎನ್ ಎಂ ತಿರುಗುಬಲದಲ್ಲಿ 237 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

2016 ಜಾಗ್ವಾರ್ ಎಕ್ಸ್‌ಎಫ್ ಭಾರತದಲ್ಲಿ ಬಿಡುಗಡೆ

ಅದೇ ರೀತಿ ಇಗ್ನೇನಿಯಂ ಶ್ರೇಣಿಗೆ ಸೇರಿದ 2.0 ಲೀಟರ್ ಡೀಸೆಲ್ ಎಂಜಿನ್ 430 ಎನ್ ಎಂ ತಿರುಗುಬಲದಲ್ಲಿ 177 ಅಶ್ವಶಕ್ತಿಯನ್ನು ನೀಡಲಿದೆ. ಎರಡು ಎಂಜಿನ್ ಗಳು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸ್ಟ್ಯಾಂಡರ್ಡ್ ಆಗಿ ಗಿಟ್ಟಿಸಿಕೊಳ್ಳಲಿದೆ.

2016 ಜಾಗ್ವಾರ್ ಎಕ್ಸ್‌ಎಫ್ ಭಾರತದಲ್ಲಿ ಬಿಡುಗಡೆ

2016 ಜಾಗ್ವರ್ ಎಕ್ಸ್ ಎಫ್ ಮೂರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ಪ್ಯೂರ್, ಪ್ರೆಸ್ಟೀಜ್ ಮತ್ತು ಪೋರ್ಟ್ ಪೊಲಿಯೊ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್

ಪ್ಯೂರ್: ಲಭ್ಯವಿಲ್ಲ

ಪ್ರೆಸ್ಟೀಜ್: 55.65 ಲಕ್ಷ ರು.

ಪೋರ್ಟ್ ಪೊಲಿಯೊ: 61.85 ಲಕ್ಷ ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಡೀಸೆಲ್

ಪ್ಯೂರ್: 49.50 ಲಕ್ಷ ರು.

ಪ್ರೆಸ್ಟೀಜ್: 55.90 ಲಕ್ಷ ರು.

ಪೋರ್ಟ್ ಪೊಲಿಯೊ: 62.10 ಲಕ್ಷ ರು.

2016 ಜಾಗ್ವಾರ್ ಎಕ್ಸ್‌ಎಫ್ ಭಾರತದಲ್ಲಿ ಬಿಡುಗಡೆ

ಹಗುರ ಭಾರದ ಅಲ್ಯೂಮಿನಿಯಂ ಸಂರಚನೆಯಿಂದ ಕೂಡಿರುವ ನೂತನ ಜಾಗ್ವಾರ್ ಎಕ್ಸ್ ಎಫ್ ಹಿಂದಿನ ಮಾದರಿಗಿಂತಲೂ 190 ಕೆ.ಜಿ ಗಳಷ್ಟು ಕಡಿಮೆ ತೂಕವನ್ನು ಪಡೆದಿದೆ.

2016 ಜಾಗ್ವಾರ್ ಎಕ್ಸ್‌ಎಫ್ ಭಾರತದಲ್ಲಿ ಬಿಡುಗಡೆ

ಇನ್ನು ಆಯಾಮದ ವಿಚಾರವನ್ನು ಪರಿಗಣಿಸಿದಾಗಲೂ ಹಿಂದಿನ ಮಾದರಿಗಿಂತಲೂ 7 ಎಂಎಂಗಳಷ್ಟು ಚಿಕ್ಕದೂ ಹಾಗೂ 3 ಎಂಎಂ ಗಳಷ್ಟು ಕಡಿಮೆ ಅಳತೆಯನ್ನು ಪಡೆದಿದೆ. ಹಾಗಿದ್ದರೂ ಹೊಸ ತಳಹದಿಯಲ್ಲಿ ನಿರ್ಮಾಣವಾಗಿರುವ ಜಾಗ್ವಾರ್ ಎಕ್ಸ್ ಎಫ್ 51 ಎಂಎಂ ಗಳಷ್ಟು ಹೆಚ್ಚು ಚಕ್ರಾಂತರವನ್ನು ಗಿಟ್ಟಿಸಿಕೊಂಡಿದೆ.

2016 ಜಾಗ್ವಾರ್ ಎಕ್ಸ್‌ಎಫ್ ಭಾರತದಲ್ಲಿ ಬಿಡುಗಡೆ

ಅತ್ತ ಪ್ರಯಾಣಿಕರ ಆರಾಮದಾಯಕತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಲೆಗ್ ರೂಂ ಹಾಗೂ ಮೊಣಕಾಲು ಸ್ಥಳಾವಕಾಶದಲ್ಲಿ ಅನುಕ್ರಮವಾಗಿ 15 ಹಾಗೂ 24 ಎಂಎಂ ಗಳಷ್ಟು ವರ್ಧನೆಯುಂಟಾಗಿದೆ. ಹಿಂದುಗಡೆ ಹೆಡ್ ರೂಂ ಸಹ 27 ಎಂಎಂ ಹೆಚ್ಚು ವೃದ್ಧಿಸಲಾಗಿದೆ.

2016 ಜಾಗ್ವಾರ್ ಎಕ್ಸ್‌ಎಫ್ ಭಾರತದಲ್ಲಿ ಬಿಡುಗಡೆ

ಕಾರಿನ ಹೊರಮೈಯಲ್ಲಿ ಪರಿಣಾಮಕಾರಿ ವಿನ್ಯಾಸವನ್ನು ಮೈಗೂಡಿಸಿಕೊಳ್ಳಲಾಗಿದೆ. ಎಲ್ ಇಡಿ ಹೆಡ್ ಲೈಜ್ ಹಾಗೂ ಜಾಗ್ವಾರ್ ನ ಸಿಗ್ನೇಚರ್ 'ಜೆ' ಬ್ಲೇಡ್ ಡೈಟೈಮ್ ರನ್ನಿಂಗ್ ಲೈಟ್ಸ್ ಅದ್ಭುತ ರಸ್ತೆ ಸಾನಿಧ್ಯವನ್ನು ನೀಡಲಿದೆ. ಮುಂಭಾಗದಲ್ಲಿ ಗ್ರಿಲ್ ಹಾಗೂ ಫ್ರಂಟ್ ಬಂಪರ್ ಪರಿಷ್ಕೃತಗೊಳಿಸಲಾಗಿದೆ.

2016 ಜಾಗ್ವಾರ್ ಎಕ್ಸ್‌ಎಫ್ ಭಾರತದಲ್ಲಿ ಬಿಡುಗಡೆ

ಕಾರಿನೊಳಗೆ 12.3 ಇಂಚುಗಳ ಸಂಪೂರ್ಣ ಟಿಎಫ್ ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲೇಸರ್ ಎಚ್ ಯುಡಿ, 10.2 ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, 10 ಬಣ್ಣಗಳ ಮನಮೋಹಕ ಲೈಟಿಂಗ್, 4 ವಿಧಗಳ ಕ್ಲೈಮೇಟ್ ಕಂಟ್ರೋಲ್ ಇತ್ಯಾದಿ ವೈಶಿಷ್ಟ್ಯಗಳಿರಲಿದೆ. ಇನ್ನು ಸ್ಮಾರ್ಟ್ ಫೋನ್ ಸಂಪರ್ಕಿತ ಆಪ್ ಸೇವೆಯನ್ನು ಒದಗಿಸಲಾಗುತ್ತಿದ್ದು, ಅನೇಕ ಕ್ರಿಯಾತ್ಮಕತೆಗಳನ್ನು ನಿಯಂತ್ರಿಸಬಹುದಾಗಿದೆ.

2016 ಜಾಗ್ವಾರ್ ಎಕ್ಸ್‌ಎಫ್ ಭಾರತದಲ್ಲಿ ಬಿಡುಗಡೆ

ಜಾಗ್ವಾರ್ ಡ್ರೈವ್ ಕಂಟ್ರೋಲ್ - ನಾಲ್ಕು ಚಾಲನಾ ವಿಧಗಳು

ಸ್ಟ್ಯಾಂಡರ್ಡ್, ಇಕೊ, ಡೈನಾಮಿಕ್ ಮತ್ತು ರೈನ್/ಸ್ನೊ/ಐಸ್.

ಪ್ರತಿಸ್ಪರ್ಧಿಗಳು: ಮರ್ಸಿಡಿಸ್ ಬೆಂಝ್ ಇ-ಕ್ಲಾಸ್, ಬಿಎಂಡಬ್ಲ್ಯು 5 ಸಿರೀಸ್, ಆಡಿ ಎ6, ವೋಲ್ವೋ ಎಸ್90

Most Read Articles

Kannada
English summary
Jaguar Launches The New XF Sedan In India — Here’s More Details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X