ಕೈನಾಟಿಕ್ ಸಫರ್ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ
ದೇಶದ ಮುಂಚೂಣಿಯ ಕೈನಾಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಸೊಲ್ಯುಷನ್ಸ್ ಅತಿ ನೂತನ ಕೈನಾಟಿಕ್ ಸಫರ್ ಆಟೋ ರಿಕ್ಷಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಬೆಲೆ ಮಾಹಿತಿ: 1.28 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ನೂತನ ಕೈನಾಟಿಕ್ ಸಫರ್ ಸ್ಟೀಲ್ ಬಾಡಿ, ಡ್ಯುಯಲ್ ಹೆಡ್ ಲ್ಯಾಂಪ್, ಇಂಡಿಕೇಟರ್, ಸ್ಪೀಡೋಮೀಟರ್ ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಗಂಟೆಗೆ ಗರಿಷ್ಠ 25 ಕೀ.ಮೀ. ವೇಗದಲ್ಲಿ ಸಂಚರಿಸಲು ಸಾಮರ್ಥ್ಯ ಹೊಂದಿರುವ ಕೈನಾಟಿಕ್ ತ್ರಿಚಕ್ರ ವಾಹನದಲ್ಲಿ ಚಾಲಕ ಸೇರಿದಂತೆ ನಾಲ್ಕು ಮಂದಿಗೆ ಪ್ರಯಾಣಿಕರಿಗೆ ಆರಾಮವಾಗಿ ಚಲಿಸಬಹುದಾಗಿದೆ.
ಉತ್ತರ ಪ್ರದೇಶದ ಸರಕಾರದ ವಿಶೇಷ ಆಸಕ್ತಿಯ ಪ್ರಕಾರ 27,000 ಯುನಿಟ್ ಗಳನ್ನು ಅಲ್ಲಿನ ಸರಕಾರಕ್ಕೆ ಹಂಚಿಕೊಳ್ಳಲಾಗುವುದು. ಇದನ್ನು ಮಹಾರಾಷ್ಟ್ರದಲ್ಲಿ ಸ್ಥಿತಗೊಂಡಿರುವ ಸಂಸ್ಥೆಯ ಘಟಕದಲ್ಲಿ ನಿರ್ಮಿಸಲಾಗುವುದು.


Click it and Unblock the Notifications








