ಬೊಲೆರೊ ಹಿಂದಿಕ್ಕಿದ ಕೆಯುವಿ100; ಆಕರ್ಷಣೆ ಕಳೆದುಕೊಂಡ ಐಕಾನಿಕ್ ಎಸ್‌ಯುವಿ?

Written By:

ದೇಶದ ಕ್ರೀಡಾ ಬಳಕೆಯ ವಾಹನಗಳ ದೈತ್ಯ ನಿರ್ಮಾಣ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಇತ್ತೀಚೆಗಷ್ಟೇ ಅತಿ ನೂತನ ಕೆಯುವಿ100 ಕಾರನ್ನು ಬಿಡುಗಡೆಗೊಳಿಸಿತ್ತು. ಪ್ರಸ್ತುತ ಪರಿಣಾಮಕಾರಿ ಮಾರಾಟ ದಾಖಲಿಸಿಕೊಂಡಿರುವ ಕೆಯುವಿ100, ತನ್ನ ಹಿರಿಯ ಸೋದರ ಬೊಲೆರೊವನ್ನು ಹಿಂದಿಕ್ಕಿದೆ.

ಪುಟ್ಟ ಕಾರು ಕೆಯುವಿ100 ಪ್ರವೇಶದೊಂದಿಗೆ ಐಕಾನಿಕ್ ಎಸ್ ಯುವಿ ಬೊಲೆರೊ ತನ್ನ ಆಕರ್ಷಣೆಯನ್ನು ಕಳೆದುಕೊಂಡಿತೇ ಎಂಬ ಬಗ್ಗೆ ಪ್ರಶ್ನೆಗಳು ಬಲವಾಗಿ ಮೂಡಿ ಬರುತ್ತಿವೆ. ಯಾಕೆಂದರೆ ದಶಕದಿಂದಲೂ ಮಹೀಂದ್ರ ದೇಶದ ಶ್ರೇಷ್ಠ ಎಸ್‌ಯುವಿ ಎಂಬ ಪಟ್ಟ ಆಲಂಕರಿಸಿತ್ತು.

ಬೊಲೆರೊ ಹಿಂದಿಕ್ಕಿದ ಕೆಯುವಿ100; ಆಕರ್ಷಣೆ ಕಳೆದುಕೊಂಡ ಐಕಾನಿಕ್ ಎಸ್‌ಯುವಿ?

2016 ಮೇ ತಿಂಗಳ ಮಾರಾಟದಲ್ಲಿ ಮಹೀಂದ್ರ ಕೆಯುವಿ100, 4,446 ಯುನಿಟ್ ಗಳ ಮಾರಾಟವನ್ನು ದಾಖಲಿಸಿಕೊಂಡಿದೆ. ಇದು ಬೊಲೆರೊಗಿಂತಲೂ 27 ಯುನಿಟ್ ಗಳಷ್ಟು ಜಾಸ್ತಿಯಾಗಿದೆ.

ಬೊಲೆರೊ ಹಿಂದಿಕ್ಕಿದ ಕೆಯುವಿ100; ಆಕರ್ಷಣೆ ಕಳೆದುಕೊಂಡ ಐಕಾನಿಕ್ ಎಸ್‌ಯುವಿ?

ಆಧುನಿಕ ನೋಟ, ನಗರ ಪ್ರದೇಶಕ್ಕೆ ಸೂಕ್ತವಾದ ವಾಹನ, ಕೈಗೆಟುಕುವ ಬೆಲೆ ಹೀಗೆ ಹಲವಾರು ಅಂಶಗಳು ಮಹೀಂದ್ರ ಕೆಯುವಿ100 ಕಾರಿಗೆ ವರದಾನವಾಗಿ ಪರಿಣಮಿಸಿದೆ.

ಬೊಲೆರೊ ಹಿಂದಿಕ್ಕಿದ ಕೆಯುವಿ100; ಆಕರ್ಷಣೆ ಕಳೆದುಕೊಂಡ ಐಕಾನಿಕ್ ಎಸ್‌ಯುವಿ?

ಇನ್ನೊಂದೆಡೆ ಕಳೆಗುಂದಿರುವ ವಿನ್ಯಾಸ, ನಗರ ಪ್ರದೇಶಕ್ಕೆ ಹೊಂದಿಕೆಯಾಗದ ನೋಟ ಮತ್ತು ಬೇಸಿಕ್ ವೆರಿಯಂಟ್ ನಲ್ಲೂ ಎಸಿ ಸೌಲಭ್ಯ ಕೂಡಾ ಇಲ್ಲದಿರುವುದು ಮಹೀಂದ್ರ ಬೊಲೆರೊಗೆ ಹಿನ್ನಡೆಯಾಗಿ ಪರಿಣಮಿಸಿದೆ.

ಬೊಲೆರೊ ಹಿಂದಿಕ್ಕಿದ ಕೆಯುವಿ100; ಆಕರ್ಷಣೆ ಕಳೆದುಕೊಂಡ ಐಕಾನಿಕ್ ಎಸ್‌ಯುವಿ?

ಮಹೀಂದ್ರ ಬೊಲೆರೊ ಕಾರಿನ ದೊಡ್ಡದಾದ ಗಾತ್ರ ಸಹ ಇಲ್ಲಿ ಸಮಸ್ಯೆಯಾಗಿ ಪರಿಣಮಿಸಿರಬಹುದು. ನಗರ ಪ್ರದೇಶಗಳಲ್ಲಿ ದೈನಂದಿನ ಬಳಕೆ ಮಾಡಲು ಇದು ಯೋಗ್ಯವಲ್ಲ ಎಂಬ ಭಾವನೆಯು ಗ್ರಾಹಕರನ್ನು ಕಾಡುತ್ತಿರಬಹುದು.

ಕೆಯುವಿ100 ಎಂಜಿನ್

ಕೆಯುವಿ100 ಎಂಜಿನ್

ಪೆಟ್ರೋಲ್ mFALCON, G80

ಎಂಜಿನ್ ಸಾಮರ್ಥ್ಯ: 1198 ಸಿಸಿ

ಗರಿಷ್ಠ ಪವರ್: 82(61)@5500 bhp(kW)@rpm

ತಿರುಗುಬಲ: 115@3500-3600 Nm@rpm

ಕೆಯುವಿ100 ಎಂಜಿನ್

ಕೆಯುವಿ100 ಎಂಜಿನ್

ಡೀಸೆಲ್: mFALCON, D75

ಎಂಜಿನ್ ಸಾಮರ್ಥ್ಯ: 1198 ಸಿಸಿ

ಗರಿಷ್ಠ ಪವರ್: 77(57)@3750 (bhp(kW)@rpm)

ತಿರುಗುಬಲ: 190@1750-2250 Nm@rpm

ಕೆಯುವಿ100 ಮೈಲೇಜ್

ಕೆಯುವಿ100 ಮೈಲೇಜ್

ಡೀಸೆಲ್ 25.32 ಕೀ.ಮೀ (ಫಸ್ಟ್ ಇನ್ ಕ್ಲಾಸ್)

ಪೆಟ್ರೋಲ್ 18.15 ಕೀ.ಮೀ.

ಕೆಯುವಿ100 ವಿಶಿಷ್ಟತೆಗಳು

ಕೆಯುವಿ100 ವಿಶಿಷ್ಟತೆಗಳು

ವಿಶಾಲವಾದ ಒಳಮೈ

ಆರು ಹಾಗೂ ಐದು ಸೀಟುಗಳ ಆಯ್ಕೆ

ಆಕ್ರಮಣಕಾರಿ ಎಸ್‌ಯುವಿ ಶೈಲಿ

ಸನ್ ಗ್ಲಾಸ್ ಪ್ರೇರಿತ ಹೆಡ್ ಲ್ಯಾಂಪ್,

ಕ್ರೋಮ್ ಜೊತೆಗೆ ಸಿಗ್ನೇಚರ್ ಫ್ರಂಟ್ ಗ್ರಿಲ್,

ಕೆಯುವಿ100 ವಿಶಿಷ್ಟತೆಗಳು

ಕೆಯುವಿ100 ವಿಶಿಷ್ಟತೆಗಳು

ಡ್ಯುಯಲ್ ಟೋನ್ ಬಂಪರ್,

ಡೋರ್ ಬದಿ ಹಾಗೂ ವೀಲ್ ಆರ್ಚ್ ಕ್ಲಾಡಿಂಗ್,

ಡೈನಾಮಿಕ್ ಫಾಗ್ ಲ್ಯಾಂಪ್ ಜೊತೆ ಕ್ರೋಮ್ ಸ್ಪರ್ಶ,

ಸ್ಪೈಡರ್ ವಿನ್ಯಾಸಿತ ಅಲಾಯ್ ವೀಲ್,

ಕೆಯುವಿ100 ವಿಶಿಷ್ಟತೆಗಳು

ಕೆಯುವಿ100 ವಿಶಿಷ್ಟತೆಗಳು

ಸ್ಟೈಲಿಷ್ ರೂಫ್ ರೇಖೆ,

ಕ್ರೀಡಾತ್ಮಕ ರಿಯರ್ ಸ್ಪಾಯ್ಲರ್,

ವಿಶಿಷ್ಟ ಡಬಲ್ ಬ್ಯಾರೆಲ್ ಟೈಲ್ ಲ್ಯಾಂಪ್,

ಎತ್ತರದಲ್ಲಿ ಲಗತ್ತಿಸಲಾದ ಹಿಂಬದಿಯ ಡೋರ್ ಹ್ಯಾಂಡಲ್,

English summary
Mahindra Bolero Sales Beaten By KUV100 - Is The SUV Losing Its Charm?
Story first published: Tuesday, June 14, 2016, 17:25 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark