ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

Written By:

ವಾಹನಗಳನ್ನು ಮಾರಾಟ ಮಾಡುವುದು ಹಾಗೂ ಇದರಿಂದ ಲಾಭ ಗಳಿಸುವುದು ಮಾತ್ರ ವಾಹನ ಸಂಸ್ಥೆಗಳ ಗುರಿಯಾಗಬಹುದು. ಇದಕ್ಕೊಂದು ಉತ್ತಮ ಉದಾಹರಣೆ ದೇಶದ ಜನಪ್ರಿಯ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ. ನಿರಂತರ ಅಂತರಾಳದಲ್ಲಿ ವಾಹನ ಉತ್ಸಾಹಿಗಳನ್ನು ಪ್ರೋತ್ಸಾಹಿಸುತ್ತಿರುವ ಮಹೀಂದ್ರ ಇತ್ತೀಚೆಗಷ್ಟೇ ಕರಾವಳಿ ನಗರ ಮಂಗಳೂರಿನಿಂದ ಗೋವಾ ವರೆಗೂ ಮಹೀಂದ್ರ ಮಾನ್ಸೂನ್ ಚಾಲೆಂಜ್ ರೇಸ್ ಕೂಟವನ್ನು ಹಮ್ಮಿಕೊಂಡಿತ್ತು.

ಮಹೀಂದ್ರ ಅಡ್ವೆಂಚರ್ ತನ್ನ ಗ್ರಾಹಕರಿಗೆ ಹಮ್ಮಿಕೊಂಡಿರುವ ಟೈಮ್ ಸ್ಪೀಡ್ ಡಿಸ್ಟಾನ್ಸ್ (ಟಿಎಸ್‌ಡಿ) ರಾಲಿಯು ಮಂಗಳೂರಿನಿಂದ ಗೋವಾ ವರೆಗೆ 600 ಕೀ.ಮೀ. ದೂರವನ್ನು ಕ್ರಮಿಸಿತ್ತು. ಕೂಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಮೊದಲೇ ಹೆಸರು ನೊಂದಣಿ ಮಾಡಬೇಕಿತ್ತು. ಅಲ್ಲದೆ ಅದ್ಭುತ ನೇವಿಗೇಷನ್ ಕೌಶಲ್ಯವನ್ನು ಕರಗತ ಮಾಡಿಕೊಳ್ಳಲು ಸಾಧ್ಯವಾಗಿತ್ತು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಪ್ರತಿಯೊಂದು ತಂಡವನ್ನು ಚಾಲಕ ಸೇರಿದಂತೆ ಇಬ್ಬರು ಸ್ಪರ್ಧಾಳುಗಳು ಮುನ್ನಡೆಸಿದ್ದರು. ಚಾಲಕನಿಗೆ ದಾರಿ ಸೂಚಕವಾಗಿ ಸಹ ಚಾಲಕ ನೇವಿಗೇಟರ್ ಜವಾಬ್ದಾರಿಯನ್ನು ನಿಭಾಯಿಸಿದ್ದರು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಮಂಗಳೂರಿನ ಫೋರಂ ಮಾಲ್ ನಿಂದ ರಾಲಿಯು ಅಧಿಕೃತವಾಗಿ ಉದ್ಘಾಟನೆಗೊಂಡಿತ್ತು. ಈ ವೇಳೆಯಲ್ಲಿ ಕರಾವಳಿ ಸಿರಿಯ ಹೆಮ್ಮೆಯ ಹುಲಿ ವೇಷಧಾರಿಗಳು ರಂಜಿಸಿದ್ದರು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಮಂಗಳೂರಿನಿಂದ ಆರಂಭಿಸಿದ ಮೊದಲನೇ ದಿನದ ರಾಲಿಯು ಶಿವಮೊಗ್ಗದಲ್ಲಿ ಕೊನೆಗೊಂಡಿತ್ತು. ರೇಸ್ ಆರಂಭಕ್ಕೂ ಮುನ್ನ ರೂಟ್ ಮ್ಯಾಪ್ ಮತ್ತು ನಿಯಾಮಳಿಗಳನ್ನು ಹಂಚಿಕೊಳ್ಳಲಾಗಿತ್ತು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಮೊದಲನೇಯ ದಿನದಲ್ಲೇ ಚಾಲಕರಿಗೆ ಸಾಕಷ್ಟು ಸಾಹಸಗಳು ಎದುರಾಗಿದ್ದವು. ಇದರಲ್ಲಿ ಪ್ರಮುಖವಾಗಿಯೂ ಸಿಂಗಧೂರ್ ನದಿಯನ್ನು ಬೋಟ್ ಮೂಲಕ ಮಹೀಂದ್ರ ಕಾರು ದಾಟಬೇಕಾಗಿತ್ತು. ಇದು ನಿಜಕ್ಕೂ ಅದ್ಭುತವೆನಿಸಿತ್ತು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಸಂಜೆಯ ವೇಳೆಯಾಗುವಾಗ ಹಾದಿ ತಪ್ಪಿ ಬಂದ ಚಾಲಕರು ಕೊನೆಗೂ ಗುರಿ ಮುಟ್ಟಿದ್ದರು. ಬಳಿಕ ಅಂದು ರಾತ್ರಿ ವಿರಾಮದ ಸಮಯ. ಈ ವೇಳೆಯಲ್ಲಿ ತಂಡಗಳಿಗೆ ಗುರಿ ಮುಟ್ಟುವ ಯೋಜನೆಗಳನ್ನು ಮರು ಪರೀಶೀಲಿಸಲು ಸಮಯವಕಾಶ ದೊರಕಿತ್ತು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಎರಡನೇ ದಿನದ ಪಯಣವು ಶಿವಮೊಗ್ಗದಿಂದ ಗೋವಾ ವರೆಗೆ 340 ಕೀ.ಮೀ. ದೂರವನ್ನು ಕ್ರಮಿಸಬೇಕಾಗಿತ್ತು. ಇದರಿಂದಾಗಿ ಮುಂಜಾವಿನ ವೇಳೆಯಲ್ಲಿ ಮಹೀಂದ್ರ ಕಾರುಗಳು ಸವಾಲನ್ನು ಸ್ವೀಕರಿಸಲು ತಯಾರಾಗಿ ನಿಂತಿದ್ದವು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಎರಡನೇ ದಿನದ ರೂಟ್ ಮ್ಯಾಪ್ ಮತ್ತು ತಲುಪಬೇಕಾದ ನಿಗದಿತ ಸಮಯದವನ್ನು ಸರಿಯಾಗಿ ಉಲ್ಲೇಖಿಸಬೇಕಾಗಿತ್ತು. ಮೊದಲು ಅಥವಾ ತಡವಾಗಿ ತಲುಪದೇ ಸಮಯಕ್ಕೆ ಸರಿಯಾಗಿ ತಲುಪಬೇಕೆಂಬ ನಿಯಮ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಆಗಲೇ ಮುಂಗಾರು ಮಳೆ ಶುರುವಾಗಿರುವುದರಿಂದ ಮಳೆಯ ಸಿಂಚನದ ನಡುವಣ ಮಹೀಂದ್ರ ರಾಲಿಯು ಅದ್ಭುತ ರಸ್ತೆ ಚಾಲನಾ ಅನುಭವನ್ನು ನೀಡಿತ್ತು. ಬಾನೆತ್ತರದಲ್ಲಿ ನೆಂಟನಂತೆ ಸೂರ್ಯ ಕಿರಣಗಳು ಆಗಾಗ ಬಂದು ಹೋಗುತ್ತಿದ್ದವು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಹೆದ್ದಾರಿ ಮಾತ್ರವಲ್ಲದೆ ಸಾಹಸಮಯ ರಸ್ತೆಯಲ್ಲೂ ಸ್ಪರ್ಧೆಯನ್ನು ಕೈಗೊಳ್ಳಬೇಕಾಗಿತ್ತು. ಎಲ್ಲ ಸ್ಪರ್ಧಾಳುಗಳು ಗೆಲ್ಲುವ ಉತ್ಸಾಹದೊಂದಿಗೆ ರೇಸ್ ಕುದುರೆಯಂತೆ ಮಹೀಂದ್ರ ಕಾರಿನಲ್ಲಿ ಸ್ಪರ್ಧೆಗಿಳಿದಿದ್ದವು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ವಿಶೇಷ ಆಹ್ವಾನದ ಮೆರೆಗೆ ನಮ್ಮ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಮಹೀಂದ್ರ ಮಾನ್ಸೂನ್ ಟೈಮ್ ಸ್ಪೀಡ್ ಡಿಸ್ಟಾನ್ಸ್ ಸವಾಲನ್ನು ಸ್ವೀಕರಿಸಲು ಮುಂದಾಗಿದ್ದವು. ಡ್ರೈವ್ ಸ್ಪಾರ್ಕ್ ಪ್ರದಾನ ಸಂಪಾದಕ ಜೊಬೊ ಕುರುವಿಲ್ಲಾ ಮತ್ತು ಉಪ ಸಂಪಾದಕ ರಾಜ್ ಕಮಲ್ ರಾಲಿಯನ್ನು ತಂಡವನ್ನು ಮುನ್ನಡೆಸಿದ್ದರು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಎರಡು ದಿನಗಳ ನಿರಂತರ ಪ್ರಯತ್ನದ ಬಳಿಕ ಕೊನೆಗೂ ಮಾಧ್ಯಮ ಮಿತ್ರರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗೆಲ್ಲುವಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಯಶಸ್ವಿಯಾಗಿತ್ತು. ಈ ಸಂದರ್ಭದಲ್ಲಿ ಛಾಯಾಗ್ರಾಹಕ ಅಭಿಜಿತ್ ಕೆಲವು ರೋಚಕ ಕ್ಷಣಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ನಮ್ಮ ತಂಡವು ಮಹೀಂದ್ರ ನುವೊಸ್ಪೋರ್ಟ್ ವಾಹನದಲ್ಲಿ ಸವಾಲನ್ನು ಸ್ವೀಕರಿಸಿತ್ತು. ಇದರ ಮೂರು ಸಿಲಿಂಡರ್ ಡೀಸೆಲ್ ಎಂಜಿನ್ ಪ್ರಭಾವಿ ಎನಿಸಿಕೊಂಡಿದ್ದು, ಅತ್ಯುತ್ತಮ ನಿರ್ವಹಣೆಯನ್ನು ಕಾಪಾಡಿಕೊಂಡಿದೆ. ಎರಡನೇ ಸಾಲಿನ ಆಸನ ವ್ಯವಸ್ಥೆಯು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ನಿಮ್ಮ ಮಾಹಿತಿಗಾಗಿ ಕ್ವಾಂಟೊ ಪರಿಷ್ಕೃತ ಆವೃತ್ತಿಯಾಗಿರುವ ನುವೊಸ್ಪೋರ್ಟ್ ವಿನ್ಯಾಸದಿಂದ ಹಿಡಿದು ಎಲ್ಲ ವಿಭಾಗದಲ್ಲಿ ಗಮನಾರ್ಹ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಮಹೀಂದ್ರ ನುವಸ್ಪೋರ್ಟ್ ಕಾರಿನೊಳಗಿರುವ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಕ್ಸ್, ಯುಎಸ್ ಬಿ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಏರ್ ಬ್ಯಾಗ್ ವೈಶಿಷ್ಟ್ಯಗಳಿರಲಿದೆ. 600 ಕೀ.ಮೀ. ದೂರದ ಯಾತ್ರೆಯ ಬಳಿಕವೂ ನುವೊಸ್ಪೋರ್ಟ್ ನಿರ್ವಹಣೆ ಗಮನಾರ್ಹವೆನಿಸಿತ್ತು.

ಟೈಮ್ ಡಿಸ್ಟಾನ್ಸ್ ರಾಲಿ

ಟೈಮ್ ಡಿಸ್ಟಾನ್ಸ್ ರಾಲಿ

ವೇಗದಲ್ಲಿ ನಿಯಂತ್ರಣವನ್ನಿಟ್ಟುಕೊಳ್ಳುವ ಮೂಲಕ ಚಾಲಕರು, ನಿಗದಿತ ಪಡಿಸಿದ ಸಮಯದಲ್ಲಿ ಕೊಟ್ಟಿರುವ ಹಾದಿ ಹುಡುಕುತ್ತಾ ಮುಂದಕ್ಕೆ ಸಾಗಬೇಕಾಗಿದೆ. ಇಲ್ಲಿ ಸಾರ್ವಜನಿಕ ಜೊತೆಗೆ ಆಫ್ ರೋಡ್ ಸವಾಲುಗಳು ಎದುರಾಗಲಿದೆ. ಮ್ಯಾಪ್ ಪುಸ್ತಕವನ್ನು ರೇಸ್ ಆರಂಭಕ್ಕೂ ಮುನ್ನ ಹಂಚಿಕೊಳ್ಳಲಾಗುವುದು. ನಿಗದಿತ ಸಮಯಕ್ಕೂ ಮುಂಚೆ ತಲುಪಿದ್ದಲ್ಲಿ ಮೈನಸ್ ಮಾರ್ಕ್ ಭೀತಿಯೂ ಇರುತ್ತದೆ.

ಚಾಲಕರನ್ನು ತುದಿಗಾಲಲ್ಲಿ ನಿಲ್ಲಿಸಿದ 2016 ಮಹೀಂದ್ರ ಮಾನ್ಸೂನ್ ಚಾಲೆಂಜ್

ಮಹೀಂದ್ರ ಮಾನ್ಸೂನ್ ಚಾಲೆಂಜ್ ವರ್ಷಂಪ್ರತಿ ನಡೆದುಕೊಂಡು ಬರುತ್ತಿರುವ ಟೈಮ್ ಡಿಸ್ಟಾನ್ಸ್ ರಾಲಿಯಾಗಿದ್ದು, ವಾಹನ ಪ್ರೇಮಿಗಳಿಗೆ ನೈಜ ಸಾಹಸದ ಅನುಭವ ನೀಡುತ್ತದೆ.

English summary
2016 Mahindra Monsoon Challenge – The Road To Victory
Story first published: Friday, July 1, 2016, 9:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark