ಇದೀಗ ಅಧಿಕೃತ; ಎಪ್ರಿಲ್ 04ರಂದು ಮಹೀಂದ್ರ ನುವೊಸ್ಪೋರ್ಟ್ ಬಿಡುಗಡೆ

Written By:

ಇದೀಗ ಎಲ್ಲವೂ ಅಂತಿಮಗೊಂಡಿದ್ದು, ನುವೊಸ್ಪೋರ್ಟ್ (NuvoSport) ಎಂದು ಮರು ನಾಮಕರಣಗೊಂಡಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಜನಪ್ರಿಯ ಕ್ವಾಂಟೊ ಎಲ್ಲ ಹೊಸತನಗಳೊಂದಿಗೆ ಮುಂಬರುವ 2016 ಎಪ್ರಿಲ್ 04ರಂದು ಬಿಡುಗಡೆಯಾಗಲಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಬಹಳ ಸಮಯದ ಬಳಿಕ ಮಹೀಂದ್ರ ತನ್ನ ಆವೃತ್ತಿಯ ಹೆಸರಿನ ಕೊನೆಗೆ '0' ಉಳಿಸಿಕೊಂಡಿಲ್ಲ. ಅಂದರೆ ನೂತನ ನುವೊಸ್ಪೋರ್ಟ್ ಸಂಸ್ಥೆಯ ಜನಪ್ರಿಯ ಥಾರ್ (Thar) ಸಾಲಿನಲ್ಲಿ ಸೇರಿಕೊಳ್ಳಲಿದೆ. ಈ ಸಂದರ್ಭದಲ್ಲಿ ನೀವು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 'ಟಿಯುವಿ300' ಮತ್ತು 'ಕೆಯುವಿ100' ನೆನಪಿಸಿಕೊಳ್ಳಬಹುದಾಗಿದೆ.

ಇದೀಗ ಅಧಿಕೃತ; ಎಪ್ರಿಲ್ 04ರಂದು ಮಹೀಂದ್ರ ನುವೊಸ್ಪೋರ್ಟ್ ಬಿಡುಗಡೆ

'ಡು ಇಟ್ ಆಲ್' ಎಂಬ ಟ್ಯಾಗ್ ಲೈನ್ ಪಡೆದಿರುವ ನುವೊಸ್ಪೋರ್ಟ್ ತನ್ನ ಶೈಲಿಗೆ ತಕ್ಕಂತೆ ಕ್ರೀಡಾತ್ಮಕ ವಿನ್ಯಾಸವನ್ನು ಪಡೆದಿದೆ. ಇದು ಸಕ್ರಿಯ ಜೀವನಶೈಲಿಯ ಭಾಗವಾಗಿರಲಿದೆ.

ಇದೀಗ ಅಧಿಕೃತ; ಎಪ್ರಿಲ್ 04ರಂದು ಮಹೀಂದ್ರ ನುವೊಸ್ಪೋರ್ಟ್ ಬಿಡುಗಡೆ

ಮುಂಭಾಗದಲ್ಲಿ ಕಪ್ಪು ಬಂಪರ್, ಎಲ್ ಇಡಿ ಡೈಟೈಮ್ ರನ್ನಿಂಗ್ ಲ್ಯಾಂಪ್, ಟೈಲ್ ಲ್ಯಾಂಪ್, ಟೈಲ್ ಗೇಟ್, ಹಿಂಬದಲ್ಲಿ ಹೆಚ್ಚುವರಿ ಚಕ್ರ, 5 ಸ್ಪೋಕ್ ಅಲಾಯ್ ವೀಲ್ ಪ್ರಮುಖ ಆಕರ್ಷಣೆಯಾಗಲಿದೆ.

ಇದೀಗ ಅಧಿಕೃತ; ಎಪ್ರಿಲ್ 04ರಂದು ಮಹೀಂದ್ರ ನುವೊಸ್ಪೋರ್ಟ್ ಬಿಡುಗಡೆ

ಚೆನ್ನೈಯಲ್ಲಿರುವ ಮಹೀಂದ್ರ ಅಧ್ಯಯನ ಘಟಕದಲ್ಲಿ (Mahindra Research Valley) ಮಹೀಂದ್ರ ಡಿಸೈನ್ ತಂಡವು ನೂತನ ನುವೊಸ್ಪೋರ್ಟ್ ಕಾರನ್ನು ಅಭಿವೃದ್ಧಿಪಡಿಸಿದೆ.

ಇದೀಗ ಅಧಿಕೃತ; ಎಪ್ರಿಲ್ 04ರಂದು ಮಹೀಂದ್ರ ನುವೊಸ್ಪೋರ್ಟ್ ಬಿಡುಗಡೆ

ಮಹೀಂದ್ರ ಸಂಸ್ಥೆಯು ದೇಶದಲ್ಲಿ 4.5 ಲಕ್ಷ ರು.ಗಳಿಂದ 25 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಅತ್ಯುತ್ತಮ ಕ್ರೀಡಾ ಬಳಕೆಯ ವಾಹನಗಳನ್ನು ಒದಗಿಸುತ್ತಿದೆ. ಈ ಮೂಲಕ ಎಸ್‌ಯುವಿ ದೈತ್ಯ ಎಂಬುದನ್ನು ಸಾಬೀತುಪಡಿಸಿದೆ.

ಇದೀಗ ಅಧಿಕೃತ; ಎಪ್ರಿಲ್ 04ರಂದು ಮಹೀಂದ್ರ ನುವೊಸ್ಪೋರ್ಟ್ ಬಿಡುಗಡೆ

ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ ಪ್ರಮುಖ ಆಯ್ಕೆಯಾಗಿರಲಿದ್ದು, ಎಎಂಟಿ ಗೇರ್ ಬಾಕ್ಸ್ ಸಹ ಲಭ್ಯವಾಗಲಿದೆ. ಇದು 240 ಎನ್ ಎಂ ತಿರುಗುಬಲದಲ್ಲಿ 100 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

English summary
Mahindra NuvoSport Compact SUV India Launch On April 4, 2016
Story first published: Thursday, March 24, 2016, 13:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark