ಎಎಂಟಿಯೊಂದಿಗೆ ಮಹೀಂದ್ರ ನುವೊಸ್ಪೋರ್ಟ್ ಭರ್ಜರಿ ಬಿಡುಗಡೆ

Written By:

ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಅತಿ ನೂತನ ನುವೊಸ್ಪೋರ್ಟ್ ಕ್ರೀಡಾ ಬಳಕೆಯ ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಬದಲಾದ ಸನ್ನಿವೇಶದಲ್ಲಿ ಮಾರುಕಟ್ಟೆಯಲ್ಲಿ ಗರಿಷ್ಠ ಮಾರಾಟವನ್ನು ಗುರಿಯಿಟ್ಟುಕೊಂಡಿರುವ ಮಹೀಂದ್ರ ಕ್ವಾಂಟೊ ನೂತನ ನುವೊಸ್ಪೋರ್ಟ್ ರೂಪದಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದೆ.

ಬೆಲೆ ಮಾಹಿತಿ: 7.35 ಲಕ್ಷ ರು. (ಎಕ್ಸ್ ಶೋ ರೂಂ ಥಾಣೆ)

ಮಹೀಂದ್ರ ನುವೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಬೇಸ್ ವೆರಿಯಂಟ್ ಆಗಿರುವ ಎನ್4 7.35 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದ್ದು, ಟಾಪ್ ಎಂಡ್ ಎನ್8 ಮಾದರಿಯು 9.76 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ನಿರೀಕ್ಷೆಯಂತೆಯೇ ಟಾಪ್ ಎಂಡ್ ವೆರಿಯಂಟ್ 5 ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ನೊಂದಿಗೆ ಆಗಮಿಸಿದೆ.

To Follow DriveSpark On Facebook, Click The Like Button
ಎಎಂಟಿಯೊಂದಿಗೆ ಮಹೀಂದ್ರ ನುವೊಸ್ಪೋರ್ಟ್ ಭರ್ಜರಿ ಬಿಡುಗಡೆ

ಇದು ಎಸ್ ಯುವಿ ದೈತ್ಯ ಮಹೀಂದ್ರ ಸಂಸ್ಥೆಯು ಕಾಂಪಾಕ್ಟ್ ಎಸ್ ಯುವಿ ವಿಭಾಗದಲ್ಲಿ ಬಿಡುಗಡೆ ಮಾಡುತ್ತಿರುವ ಮೂರನೇ ಆವೃತ್ತಿಯಾಗಿದೆ. ಇದಕ್ಕೂ ಮೊದಲು ಟಿಯುವಿ300 ಮತ್ತು ಕೆಯುವಿ100 ಬಿಡುಗಡೆ ಮಾಡಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಎಎಂಟಿಯೊಂದಿಗೆ ಮಹೀಂದ್ರ ನುವೊಸ್ಪೋರ್ಟ್ ಭರ್ಜರಿ ಬಿಡುಗಡೆ

ಮನ ಸೊರೆಗೊಳ್ಳುವ ವಿನ್ಯಾಸ, ನೂತನ ಎಂಜಿನ್ ಮತ್ತು ಚಾಸೀ ಹಾಗೂ ಸಸ್ಪೆನ್ಷನ್ ವ್ಯವಸ್ಥೆಯನ್ನು ಪಡೆದಿರುವ ನೂತನ ನುವೊಸ್ಪೋರ್ಟ್ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್ ಯುವಿಗಳ ಸ್ಪರ್ಧೆಯು ಮತ್ತಷ್ಟು ಬಿಗಿಯಾಗಲಿದೆ.

ಎಎಂಟಿಯೊಂದಿಗೆ ಮಹೀಂದ್ರ ನುವೊಸ್ಪೋರ್ಟ್ ಭರ್ಜರಿ ಬಿಡುಗಡೆ

ಕಾರಿನಡಿಯಲ್ಲಿ ನೂತನ ತ್ರಿ ಸಿಲಿಂಡರ್ ಎಂಹಾಕ್ 100 ಎಂಜಿನ್ ಬಳಕೆ ಮಾಡಲಾಗಿದೆ. ಇದು 240 ಎನ್ ಎಂ ತಿರುಗುಬಲದಲ್ಲಿ 100 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇನ್ನೊಂದೆಡೆ ಇದೇ ಎಂಜಿನ್ ಪಡೆದಿರುವ ಟಿಯುವಿ300 ಮಾದರಿಯು 80 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಎಎಂಟಿಯೊಂದಿಗೆ ಮಹೀಂದ್ರ ನುವೊಸ್ಪೋರ್ಟ್ ಭರ್ಜರಿ ಬಿಡುಗಡೆ

ಸದ್ಯಕ್ಕೆ ನುವೊಸ್ಪೋರ್ಟ್ ಪೆಟ್ರೋಲ್ ಆವೃತ್ತಿಯು ಬಿಡುಗಡೆಯಾಗಿಲ್ಲ. ಆದರೆ ನಿಕಟ ಭವಿಷ್ಯದಲ್ಲೇ ಬಿಡುಗಡೆ ಮಾಡುವ ಇರಾದೆಯನ್ನು ಸಂಸ್ಥೆ ವ್ಯಕ್ತಪಡಿಸಿದೆ. ಅಂತೆಯೇ ಹೊಸ ಸ್ಕಾರ್ಪಿಯೊದ ಚಾಸೀ ಬಳಕೆ ಮಾಡಿರುವುದು ಗಮನಾರ್ಹವೆನಿಸಿದೆ. ಇದು ಅತ್ಯುತ್ತಮ ಹ್ಯಾಂಡ್ಲಿಂಗ್ ಗೆ ಸಹಕಾರಿಯಾಗಲಿದೆ.

ಎಎಂಟಿಯೊಂದಿಗೆ ಮಹೀಂದ್ರ ನುವೊಸ್ಪೋರ್ಟ್ ಭರ್ಜರಿ ಬಿಡುಗಡೆ

ಸಂಸ್ಥೆಯ ಪ್ರಕಾರ ನೂತನ ಮಹೀಂದ್ರ ನುವೊಸ್ಪೋರ್ಟ್ ಪ್ರತಿ ಲೀಟರ್ ಗೆ 17.45 ಕೀ. ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಎಎಂಟಿಯೊಂದಿಗೆ ಮಹೀಂದ್ರ ನುವೊಸ್ಪೋರ್ಟ್ ಭರ್ಜರಿ ಬಿಡುಗಡೆ

ನೂತನ ಮಹೀಂದ್ರ ನುವೊಸ್ಪೋರ್ಟ್ ಎನ್4, ಎನ್6 ಮತ್ತು ಎನ್8 ಸೇರಿದಂತೆ ಆರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಐಚ್ಛಿಕ ಎಬಿಎಸ್ ಮತ್ತು ಇಬಿಡಿ ಭದ್ರತೆ ವ್ಯವಸ್ಥೆಯೂ ಇದರಲ್ಲಿರುತ್ತದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

 • 3 ಸಿಲಿಂಡರ್ ಡೀಸೆಲ್ ಎಂಜಿನ್,
 • 5 ಸ್ಪೀಡ್ ಮ್ಯಾನುವಲ್ ಹಾಗೂ 5 ಸ್ಪೀಡ್ ಎಎಂಟಿ ಗೇರ್ ಬಾಕ್ಸ್,
 • ಏರ್ ಬ್ಯಾಗ್ ಆಯ್ಕೆ,
 • ಮೈಲೇಜ್: ಪ್ರತಿ ಲೀಟರ್ ಗೆ 17.45 ಕೀ.ಮೀ.
 • ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್,
 ಮುಖ್ಯಾಂಶಗಳು

ಮುಖ್ಯಾಂಶಗಳು

 • 3 ಸಿಲಿಂಡರ್ ಡೀಸೆಲ್ ಎಂಜಿನ್,
 • 5 ಸ್ಪೀಡ್ ಮ್ಯಾನುವಲ್ ಹಾಗೂ 5 ಸ್ಪೀಡ್ ಎಎಂಟಿ ಗೇರ್ ಬಾಕ್ಸ್,
 • ಏರ್ ಬ್ಯಾಗ್ ಆಯ್ಕೆ,
 • ಮೈಲೇಜ್: ಪ್ರತಿ ಲೀಟರ್ ಗೆ 17.45 ಕೀ.ಮೀ.
 • ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್,
ಮುಖ್ಯಾಂಶಗಳು

ಮುಖ್ಯಾಂಶಗಳು

ಆಕರ್ಷಕ ನೋಟ,

ಆರು ವೆರಿಯಂಟ್ ಗಳು,

ಚಾಲನಾ ವಿಧ: ಇಕೊ, ಪವರ್,

6.2 ಇಂಚುಗಳ ಟಚ್ ಸ್ಕ್ರೀನ್,

ಮಲ್ಟಿ ಸ್ಪೋಕ್ ಅಲಾಯ್ ವೀಲ್

412 ಲೀಟರ್ ಢಿಕ್ಕಿ ಜಾಗ

ವೆರಿಯಂಟ್, ಬೆಲೆ (ಎಕ್ಸ್ ಶೋ ರೂಂ ಥಾಣೆ) ಎನ್4: 7.35 ಲಕ್ಷ ರು.

ವೆರಿಯಂಟ್, ಬೆಲೆ (ಎಕ್ಸ್ ಶೋ ರೂಂ ಥಾಣೆ) ಎನ್4: 7.35 ಲಕ್ಷ ರು.

 • ಎನ್4: 7.35 ಲಕ್ಷ ರು.
 • ಎನ್4 ಪ್ಲಸ್: 7.65 ಲಕ್ಷ ರು.
 • ಎನ್6: 8.36 ಲಕ್ಷ ರು.
 • ಎನ್6 (ಎಎಂಟಿ): 9 ಲಕ್ಷ ರು.
 • ಎನ್8: 9.12 ಲಕ್ಷ ರು.
 • ಎನ್8 (ಎಎಂಟಿ): 9.76 ಲಕ್ಷ ರು.
ಆರು ಆಕರ್ಷಕ ಬಣ್ಣಗಳು

ಆರು ಆಕರ್ಷಕ ಬಣ್ಣಗಳು

 • ಮೊಲ್ಟನ್ ರೆಡ್,
 • ರಸ್ಟ್ ಆರೆಂಜ್,
 • ಡೈಮಂಡ್ ವೈಟ್,
 • ರಿಗಲ್ ಬ್ಲೂ,
 • ಮಿಸ್ಟ್ ಸಿಲ್ವರ್,
 • ಫಿಯರಿ ಬ್ಲ್ಯಾಕ್
ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

 • ವಿಟಾರಾ ಬ್ರಿಝಾ
 • ಫೋರ್ಡ್ ಇಕೊಸ್ಪೋರ್ಟ್

English summary
Mahindra NuvoSport Launched In India, Prices Start At Rs. 7.35 Lakh
Story first published: Tuesday, April 5, 2016, 12:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark