ಬದಲಾದ ಸ್ವರೂಪದೊಂದಿಗೆ ಹೊಸ ನಾಮಕರಣ; ಅಬ್ಬರಿಸಲಿರುವ ಕ್ವಾಂಟೊ

Written By:

ದೇಶದ ಎಸ್‌ಯುವಿ ದೈತ್ಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ಅತಿ ಶೀಘ್ರದಲ್ಲೇ ಮಗದೊಂದು ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಬಾರಿ ಹೊಚ್ಚ ಹೊಸ ಕಾರಿಗಿಂತಲೂ ಭಿನ್ನವಾಗಿ ಈಗಲೇ ಮಾರುಕಟ್ಟೆಯಲ್ಲಿರುವ ಕ್ವಾಂಟೊ ಕಾರನ್ನು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಿದೆ.

ನೂತನ ಕ್ವಾಂಟೊ ತನ್ನ ಹಿಂದಿನ ಮಾದರಿಗಿಂತಲೂ ಸಂಪೂರ್ಣವಾಗಿಯೂ ಭಿನ್ನವಾಗಿದ್ದು, ಹೆಚ್ಚು ಆಕರ್ಷಕವೆನಿಸಿದೆ. ಇನ್ನು ವಿಶೇಷವೆಂದರೆ ನೂತನ ಕ್ವಾಂಟೊ ಹೆಸರು ಕೂಡಾ ಬದಲಾಗಿದೆ. ಈ ಬಗ್ಗೆ ಸಮಗ್ರ ಮಾಹಿತಿಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ...

To Follow DriveSpark On Facebook, Click The Like Button
ಬದಲಾದ ಸ್ವರೂಪದೊಂದಿಗೆ ಹೊಸ ನಾಮಕರಣ; ಅಬ್ಬರಿಸಲಿರುವ ಕ್ವಾಂಟೊ

ಬಲ್ಲ ಮೂಲಗಳ ಪ್ರಕಾರ ಪರಿಷೃತ ಕ್ವಾಂಟೊ ಕ್ರೀಡಾ ಬಳಕೆಯ ವಾಹನವು 'ನುವೊಸ್ಪೋರ್ಟ್' (Nuvosport) ಎಂದೆನಿಸಿಕೊಳ್ಳಲಿದೆ. ಇದರೊಂದಿಗೆ ನಾಮನಕರಣಕ್ಕೆ ಸಂಬಂಧಿಸಿದಂತೆ ಹುಟ್ಟಿಕೊಂಡಿರುವ ಊಹಾಪೋಹಾಗಳು ಇತ್ಯರ್ಥಗೊಳ್ಳಲಿದೆ.

ಬದಲಾದ ಸ್ವರೂಪದೊಂದಿಗೆ ಹೊಸ ನಾಮಕರಣ; ಅಬ್ಬರಿಸಲಿರುವ ಕ್ವಾಂಟೊ

ಮಹೀಂದ್ರ ನಡೆಸುತ್ತಿರುವ ಪರೀಕ್ಷಾರ್ಥ ಸಂಚಾರದ ವೇಳೆ ನೂತನ ಕ್ವಾಂಟೊ ಸಂಪೂರ್ಣ ಮರೆಮಾಚಿದ ರೀತಿಯಲ್ಲಿ ಪತ್ತೆಯಾಗಿತ್ತು. ಹಾಗಿದ್ದರೂ ರಹಸ್ಯ ಹೊರ ತರುವಲ್ಲಿ ವಾಹನ ಪ್ರೇಮಿಗಳು ಯಶಸ್ವಿಯಾಗಿದ್ದಾರೆ.

ಬದಲಾದ ಸ್ವರೂಪದೊಂದಿಗೆ ಹೊಸ ನಾಮಕರಣ; ಅಬ್ಬರಿಸಲಿರುವ ಕ್ವಾಂಟೊ

ಪರಿಷ್ಕೃಕ್ವಾಂಟೊ ಚಿತ್ರಗಳು ಜಾಲತಾಣಗಳಲ್ಲಿ ಹರಿದಾಡಲು ಶುರುವಾಗಿದ್ದು, ಗ್ರಾಹಕರ ಬೇಡಿಕೆಗಳಿಗಾನುಸಾರವಾಗಿ ಹೆಚ್ಚಿನ ಬದಲಾವಣೆಗಳನ್ನು ತರಲಾಗಿದೆ.

ಬದಲಾದ ಸ್ವರೂಪದೊಂದಿಗೆ ಹೊಸ ನಾಮಕರಣ; ಅಬ್ಬರಿಸಲಿರುವ ಕ್ವಾಂಟೊ

ಮುಂಭಾಗದಲ್ಲಿ ಹೊಸ ಗ್ರಿಲ್, ಪರಿಷ್ಕೃತ ಬಂಪರ್, ದೊಡ್ಡದಾದ ಏರ್ ಡ್ಯಾಮ್, ಪರಿಷ್ಕೃತ ಹೆಡ್ ಲ್ಯಾಂಪ್, ಆಕರ್ಷಕ ಡೇಟೈಮ್ ರನ್ನಿಂಗ್ ಲೈಟ್ಸ್, ಬೊನೆಟ್ ಸ್ಕೂಟ್, ಬದಿಯಲ್ಲಿ ಟರ್ನ್ ಇಂಡಿಕೇಟರ್ ಮತ್ತು ಪರಿಷ್ಕೃತ ಟೈಲ್ ಲ್ಯಾಂಪ್ ಸೌಲಭ್ಯಗಳಿರಲಿದೆ.

ಬದಲಾದ ಸ್ವರೂಪದೊಂದಿಗೆ ಹೊಸ ನಾಮಕರಣ; ಅಬ್ಬರಿಸಲಿರುವ ಕ್ವಾಂಟೊ

ಪ್ರಸ್ತುತ ನುವೊಸ್ಪೋರ್ಟ್, ನೂತನ ಅಲಾಯ್ ವೀಲ್ ಸಹ ಪಡೆದುಕೊಳ್ಳಲಿದ್ದು, ಬಾಡಿ ಕ್ಲಾಡಿಂಗ್ ಸಹ ಕಾಣಬಹುದಾಗಿದೆ. ಒಟ್ಟಿನಲ್ಲಿ ಹಳೆಯ ಮಾದರಿಗೆ ಹೋಲಿಸಿದಾಗ ಸಂಪೂರ್ಣ ಭಿನ್ನವೆನಿಸಿದೆ.

ಬದಲಾದ ಸ್ವರೂಪದೊಂದಿಗೆ ಹೊಸ ನಾಮಕರಣ; ಅಬ್ಬರಿಸಲಿರುವ ಕ್ವಾಂಟೊ

ಈಗ ಲಭ್ಯವಿರುವ ಮಾಹಿತಿಗಳ ಪ್ರಕಾರ ನೂತನ ನುವೊಸ್ಪೋರ್ಟ್ ಕಾರಿನೊಳಗೆ ಬೀಜ್ ಡ್ಯಾಶ್ ಬೋರ್ಡ್ ಪಡೆಯಲಿದ್ದು, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ಏಳು ಸೀಟುಗಳ ಆಸನ ವ್ಯವಸ್ಥೆ, ಪರಿಷ್ಕೃತ ಸೀಟು ಮತ್ತು ಹೊಸತಾದ ಮಾಹಿತಿ ಮನರಂಜನಾ ವ್ಯವಸ್ಥೆಯು ಇರಲಿದೆ.

ಬದಲಾದ ಸ್ವರೂಪದೊಂದಿಗೆ ಹೊಸ ನಾಮಕರಣ; ಅಬ್ಬರಿಸಲಿರುವ ಕ್ವಾಂಟೊ

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವುದಿಲ್ಲ. ಇದರಲ್ಲಿ 1.5 ಲೀಟರ್ 3 ಸಿಲಿಂಡರ್ ಡೀಸೆಲ್ ಮತ್ತು ಹೊಸತಾದ 1.2 ಲೀಟರ್ ಎಂಹಾಕ್ ಎಂಜಿನ್ ಬಳಕೆ ಮಾಡಲಾಗುವುದು. ಇದು ಐದು ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಪಡೆಯಲಿದೆ.

Picture credit: Overdrive

English summary
Mahindra Quanto Facelift to be called Nuvosport
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark