ಮಹೀಂದ್ರ 'ಸ್ಕಾರ್ಪಿಯೊ ಅಡ್ವೆಂಚರ್' ಸೀಮಿತ ಆವೃತ್ತಿ ಬಿಡುಗಡೆ

By Nagaraja

ಭಾರತದ ನಂ.1 ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಸಂಸ್ಥೆಯು ತನ್ನ ಜನಪ್ರಿಯ ಸ್ಕಾರ್ಪಿಯೊದ ನೂತನ ಅಡ್ವೆಂಚರ್ ಸೀಮಿತ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಆರಂಭಿಕ ಬೆಲೆ: 13.07 ಲಕ್ಷ ರು. (ಎಕ್ಸ್ ಶೋ ರೂಂ ಮುಂಬೈ)

ನೂತನ ಮಹೀಂದ್ರ ಸ್ಕಾರ್ಪಿಯೊ ಅಡ್ವೆಂಚರ್ ಆವೃತ್ತಿಯು ಕೇವಲ ಸೀಮಿತ 1000 ಯುನಿಟ್ ಗಳಷ್ಟೇ ನಿರ್ಮಿಸಲಾಗುವುದು. ಇವೆಲ್ಲವೂ ದೇಶದ ನಂ.1 ಎಸ್ ಯುವಿ ಕಾರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

ಸ್ಕಾರ್ಪಿಯೊ ಅಡ್ವೆಂಚರ್

  • ಟು ವೀಲ್ ಡ್ರೈವ್: 13.07 ಲಕ್ಷ ರು.
  • ಫೋರ್ ವೀಲ್ ಡ್ರೈವ್: 14.24 ಲಕ್ಷ ರು.
  • ಮಹೀಂದ್ರ 'ಸ್ಕಾರ್ಪಿಯೊ ಅಡ್ವೆಂಚರ್' ಸೀಮಿತ ಆವೃತ್ತಿ ಬಿಡುಗಡೆ

    ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಟಾಪ್ ಎಂಡ್ 'ಎಸ್10' ತಳಹದಿಯಲ್ಲಿ ನೂತನ ಸ್ಕಾರ್ಪಿಯೊ ಅಡ್ವೆಂಚರ್ ಸೀಮಿತ ಆವೃತ್ತಿಯನ್ನು ನಿರ್ಮಿಸಲಾಗಿದೆ.

    ಮಹೀಂದ್ರ 'ಸ್ಕಾರ್ಪಿಯೊ ಅಡ್ವೆಂಚರ್' ಸೀಮಿತ ಆವೃತ್ತಿ ಬಿಡುಗಡೆ

    ನೂತನ ಸ್ಕಾರ್ಪಿಯೊ ಅಡ್ವೆಂಚರ್ ಸೀಮಿತ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಕೊಡಲಾಗಿದೆ. ಇವುಗಳಲ್ಲಿ ರಿವರ್ಸ್ ಕ್ಯಾಮೆರಾ, ಹೊರಗಿನ ರಿಯರ್ ವ್ಯೂ ಮಿರರ್ ಜೊತೆ ಸೈಡ್ ಇಂಡಿಕೇಟರ್, ಟೈಲ್ ಲ್ಯಾಂಪ್ ಮತ್ತು ಟ್ರಿಪರ್ ಜೆಟ್ ವಿಂಡ್ ಸ್ಕ್ರೀನ್ ವಾಶರ್ ಸೇವೆಗಳನ್ನು ಕೊಡಲಾಗಿದೆ.

    ಮಹೀಂದ್ರ 'ಸ್ಕಾರ್ಪಿಯೊ ಅಡ್ವೆಂಚರ್' ಸೀಮಿತ ಆವೃತ್ತಿ ಬಿಡುಗಡೆ

    ಕಾರಿನೊಳಗೆ ಲೆಥರ್ ಸೀಟುಗಳು ಫ್ಯಾಬ್ರಿಕ್ ಇನ್ಸರ್ಟ್ ಮತ್ತು ಹೊರಮೈಯಲ್ಲಿ ಸಿಲ್ವರ್ ಮತ್ತು ವೈಟ್ ಡ್ಯುಯಲ್ ಟೋನ್ ಎಕ್ಸ್ ಟೀರಿಯರ್, ಅಡ್ವೆಂಚರ್ ಗ್ರಾಫಿಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ.

    ಮಹೀಂದ್ರ 'ಸ್ಕಾರ್ಪಿಯೊ ಅಡ್ವೆಂಚರ್' ಸೀಮಿತ ಆವೃತ್ತಿ ಬಿಡುಗಡೆ

    ಇನ್ನುಳಿದಂತೆ ಗನ್ ಮೆಟಲ್ ಅಲಾಯ್ ವೀಲ್, ರೆಡ್ ಬ್ರೇಕ್ ಕ್ಯಾಲಿಪರ್ ಮತ್ತು ರಸ್ತೆ ಸಾನಿಧ್ಯಕ್ಕೆ ಮೆರಗು ತುಂಬಲಿದ್ದು, ನೈಜ ಸ್ಕಾರ್ಪಿಯೊಗೆ ಅಡ್ವೆಂಚರ್ ಛಾಪು ಒತ್ತಲಿದೆ.

    ತಂತ್ರಜ್ಞಾನ

    ತಂತ್ರಜ್ಞಾನ

    ಕುಷನ್ ಸಸ್ಪೆನ್ಷನ್, ಆ್ಯಂಟಿ ರೋಲ್ ತಂತ್ರಗಾರಿಕೆ, ಸ್ಟಾಟಿಕ್ ಬೆಂಡಿಂಗ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಐಬ್ರೊ ಶೈಲಿಯ ಎಲ್ ಇಡಿ ಪಾರ್ಕಿಂಗ್ ಲೈಟ್ಸ್, ಆರು ಇಂಚುಗಳ ಟಚ್ ಸ್ಕ್ರೀನ್ ಮಾಹಿತಿ ಮನರಂಜಾನ ವ್ಯವಸ್ಥೆ, ಜಿಪಿಎಸ್ ನೇವಿಗೇಷನ್, ಸಂಪೂರ್ಣವಾಗಿ ಆಟೋಮ್ಯಾಟಿಕ್ ತಾಪಮಾನ ಕಂಟ್ರೋಲ್ ಮತ್ತು 17 ಇಂಚುಗಳ ಅಲಾಯ್ ಚಕ್ರಗಳ ಸೌಲಭ್ಯವಿರಲಿದೆ.

    ಮಹೀಂದ್ರ 'ಸ್ಕಾರ್ಪಿಯೊ ಅಡ್ವೆಂಚರ್' ಸೀಮಿತ ಆವೃತ್ತಿ ಬಿಡುಗಡೆ

    ನೂತನ ಮಹೀಂದ್ರ ಸ್ಕಾರ್ಪಿಯೊ ಅಡ್ವೆಂಚರ್ ಆವೃತ್ತಿಯು 2.2 ಲೀಟರ್ ಫೋರ್ ಸಿಲಿಂಡರ್ ಎಂ ಹಾಕ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 280 ಎನ್ ಎಂ ತಿರುಗುಬಲದಲ್ಲಿ 120 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

    ಗೇರ್ ಬಾಕ್ಸ್

    ಗೇರ್ ಬಾಕ್ಸ್

    ನೂತನ ಸ್ಕಾರ್ಪಿಯೊ ಅಡ್ವೆಂಚರ್ ಆವೃತ್ತಿಯು ಮ್ಯಾನುವಲ್ ಗೇರ್ ಬಾಕ್ಸ್ ತಂತ್ರಗಾರಿಕೆಯೂಂದಿಗೆ ಟು ವೀಲ್ ಮತ್ತು ಫೋರ್ ವೀಲ್ ಚಾಲನಾ ವ್ಯವಸ್ಥೆಯೊಂದಿಗೆ ಆಗಮನವಾಗಲಿದೆ.

    ಸ್ಕಾರ್ಪಿಯೊ ಬಗ್ಗೆ...

    ಸ್ಕಾರ್ಪಿಯೊ ಬಗ್ಗೆ...

    ಮೊದಲ ಬಾರಿಗೆ 2002ನೇ ಸಾಲಿನಲ್ಲಿ ಎಂಟ್ರಿ ಕೊಟ್ಟಿರುವ ಸ್ಕಾರ್ಪಿಯೊ ಆಗಲೇ ದೇಶದ ನಂ.1 ಎಸ್ ಯುವಿ ಪದವಿಯನ್ನು ಆಲಂಕರಿಸಿದೆ. ಮಾಚೊ ಶೈಲಿ, ದಿಟ್ಟವಾದ ನಿಲುವು, ಗರಿಷ್ಠ ಸ್ಥಳಾವಕಾಶ, ನಿರ್ವಹಣೆ ಮತ್ತು ಇಂಧನ ಕ್ಷಮತೆಯಲ್ಲಿ ಸ್ಕಾರ್ಪಿಯೊ ಪರಿಣಾಮಕಾರಿಯೆನಿಸಿದೆ.

    ಮಹೀಂದ್ರ 'ಸ್ಕಾರ್ಪಿಯೊ ಅಡ್ವೆಂಚರ್' ಸೀಮಿತ ಆವೃತ್ತಿ ಬಿಡುಗಡೆ

    ಕಳೆದ ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೊ, ನಾವೀನ್ಯತೆಯ ಸಂಕೇತವಾಗಿ ವಾಯ್ಸ್ ಮೆಸೇಜಿಂಗ್ ಸಿಸ್ಟಂ, ಮೈಕ್ರೊ ಹೈಬ್ರಿಡ್ ಸ್ಟ್ಯಾರ್ಟ್, ಸ್ಟಾಪ್ ತಂತ್ರಜ್ಞಾನ, ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಬಿಎಸ್ 4 ಎಮಿಷನ್ ಮಾನದಂಡಗಳನ್ನು ಪಾಲಿಸಿಕೊಂಡಿದೆ.

Most Read Articles

Kannada
English summary
Limited Edition Mahindra Scorpio Adventure Launched – Get Yours Now!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X