ಆಫ್ ರೋಡ್ ಪ್ರೇಮಿಗಳಿಗಾಗಿ ಮಹೀಂದ್ರ ಥಾರ್ ಡೇಬ್ರೇಕ್ ಎಡಿಷನ್

Written By:

ಆಫ್ ರೋಡ್ ವಾಹನ ಪ್ರೇಮಿಗಳಿಗಾಗಿ ದೇಶದ ನಂ.1 ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ನಿರ್ಮಾಣ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ವಿಶೇಷವಾದ ಉಡುಗೊರೆಯೊಂದಿಗೆ ಮುಂದೆ ಬಂದಿದೆ. ಅದುವೇ,

ಮಹೀಂದ್ರ ಥಾರ್ ಡೇಬ್ರೇಕ್ ಎಡಿಷನ್.

ಇದಕ್ಕೂ ಮೊದಲು ವರ್ಷಾರಂಭದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಮಹೀಂದ್ರ ಥಾರ್ ಡೇಬ್ರೇಕ್ ಎಡಿಷನ್ ಅತ್ಯಾಧುನಿಕ ಆಫ್ ರೋಡ್ ವೈಶಿಷ್ಟ್ಯಗಳೊಂದಿಗೆ ವಾಹನ ಪ್ರೇಮಿಗಳನ್ನು ರಂಜಿಸಲಿದೆ.

ಆಫ್ ರೋಡ್ ಪ್ರೇಮಿಗಳಿಗಾಗಿ ಮಹೀಂದ್ರ ಥಾರ್ ಡೇಬ್ರೇಕ್ ಎಡಿಷನ್

ಬಲ್ಲ ಮೂಲಗಳ ಪ್ರಕಾರ ಮಹೀಂದ್ರ ಡೇಬ್ರೇಕ್ ಆಫ್ ರೋಡ್ ಎಡಿಷನ್ ಡೀಲರುಗಳನ್ನು ತಲುಪಿದ್ದು, 9.6 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಿದೆ.

ಆಫ್ ರೋಡ್ ಪ್ರೇಮಿಗಳಿಗಾಗಿ ಮಹೀಂದ್ರ ಥಾರ್ ಡೇಬ್ರೇಕ್ ಎಡಿಷನ್

ಬೇಡಿಕೆಗೆ ಅನುಗುಣವಾಗಿ ಮಹೀಂದ್ರ ಡೇಬ್ರೇಕ್ ಎಡಿಷನ್ ಗ್ರಾಹಕರನ್ನು ತಲುಪಿಸಲಾಗುತ್ತಿದೆ. ಇದರ ಮಾರ್ಪಾಡುಗಳ ಜವಾಬ್ದಾರಿಯನ್ನು ಮಹೀಂದ್ರ ಕಸ್ಟಮೈಸ್ಡ್ ವಿಭಾಗವು ನೋಡಿಕೊಳ್ಳುತ್ತಿದೆ.

ಆಫ್ ರೋಡ್ ಪ್ರೇಮಿಗಳಿಗಾಗಿ ಮಹೀಂದ್ರ ಥಾರ್ ಡೇಬ್ರೇಕ್ ಎಡಿಷನ್

ಮೊದಲ ನೋಟಕ್ಕೆ ಕಂಡುಬರುವ ಆಕರ್ಷಣೆಯೆಂದರೆ ಸ್ಟೀಲ್ ನಿಂದ ಸುತ್ತುವರಿಯಲ್ಪಟ್ಟ 37 ಇಂಚುಗಳ ಮ್ಯಾಕ್ಸಿಸ್ ಟ್ರೆಪಡೋರ್ಸ್ ಆಫ್ ರೋಡ್ ಚಕ್ರಗಳನ್ನು ಗಿಟ್ಟಿಸಿಕೊಂಡಿದೆ.

ಆಫ್ ರೋಡ್ ಪ್ರೇಮಿಗಳಿಗಾಗಿ ಮಹೀಂದ್ರ ಥಾರ್ ಡೇಬ್ರೇಕ್ ಎಡಿಷನ್

ಬೃಹತ್ತಾಕಾರದ ಚಕ್ರಗಳನ್ನು ಹೊಂದಿಕೊಳ್ಳುವ ನಿಟ್ಟಿನಲ್ಲಿ ಸಸ್ಪೆನ್ಷನ್ ವ್ಯವಸ್ಥೆಯನ್ನು ಸ್ವಲ್ಪ ಇಂಚುಗಳಷ್ಟು ಎತ್ತರದಲ್ಲಿ ಲಗತ್ತಿಸಲಾಗಿದೆ.

ಆಫ್ ರೋಡ್ ಪ್ರೇಮಿಗಳಿಗಾಗಿ ಮಹೀಂದ್ರ ಥಾರ್ ಡೇಬ್ರೇಕ್ ಎಡಿಷನ್

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು ಸಿಆರ್ ಡಿ ಐ 2.5 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 247 ಎನ್ ಎಂ ತಿರುಗುಬಲದಲ್ಲಿ 105 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಆಫ್ ರೋಡ್ ಪ್ರೇಮಿಗಳಿಗಾಗಿ ಮಹೀಂದ್ರ ಥಾರ್ ಡೇಬ್ರೇಕ್ ಎಡಿಷನ್

ಹೊರಮೈಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕೆಂಪು ರೇಖೆಗಳ ಜೊತೆಗೆ ಮ್ಯಾಟ್ ಗ್ರೇ ಫಿನಿಶ್, ಅಗಲವಾದ ಬೊನೆಟ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಕಪ್ಪು ವರ್ಣದ ಗ್ರಿಲ್, ಆಕ್ಸಿಲರಿ ಲೈಟ್ಸ್ ಮುಂತಾದ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

ಆಫ್ ರೋಡ್ ಪ್ರೇಮಿಗಳಿಗಾಗಿ ಮಹೀಂದ್ರ ಥಾರ್ ಡೇಬ್ರೇಕ್ ಎಡಿಷನ್

ಇನ್ನು ಹಿಂದುಗಡೆಯೂ ಕಸ್ಟಮ್ ಬಂಪರ್, ಡ್ಯುಯಲ್ ಕ್ರೋಮ್ ಎಕ್ಸಾಸ್ಟ್, ಎಲ್ ಇಡಿ ಟೈಲ್ ಲೈಟ್ ಮತ್ತು ಹೆಚ್ಚುವರಿ ಚಕ್ರಗಳನ್ನು ಒದಗಿಸಲಾಗಿದೆ. ಅಂತೆಯೇ ಪರಿಷ್ಕೃತ ಡೋರ್ ಸಹ ಕಂಡುಬಂದಿದೆ.

ಆಫ್ ರೋಡ್ ಪ್ರೇಮಿಗಳಿಗಾಗಿ ಮಹೀಂದ್ರ ಥಾರ್ ಡೇಬ್ರೇಕ್ ಎಡಿಷನ್

ಇನ್ನುಳಿದಂತೆ ಈ ದೈತ್ಯ ವಾಹನದೊಳಗೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆಗೆ ಡ್ಯುಯಲ್ ಟೋನ್ ಥೀಮ್, ನಾಲ್ಕು ವಾಟರ್ ಪ್ರೂಫ್ ಸ್ಪೀಕರ್, ಸ್ಪಾರ್ಕೊ ರಾಲಿ ಸೀಟು ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾಗಳ ವ್ಯವಸ್ಥೆಯಿರಲಿದೆ.

English summary
Fancy A Custom Built Mahindra Thar? How About The Daybreak Edition?
Story first published: Tuesday, August 23, 2016, 16:58 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark