ಬರಿ 4.54 ಲಕ್ಷ ರು.ಗಳಿಗೆ ಸ್ವಿಫ್ಟ್ ಕಾರಿನಲ್ಲಿ ಇಷ್ಟೊಂದು ವೈಶಿಷ್ಟ್ಯಗಳೇ?

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ತನ್ನ ಜನಪ್ರಿಯ ಸ್ವಿಫ್ಟ್ ಆವೃತ್ತಿಯ ವಿಶೇಷ ಡಿಎಲ್ಎಕ್ಸ್ ಕಿಟ್ ಗಳನ್ನು ಬಿಡುಗಡೆ ಮಾಡಿದೆ. ನೂತನ ಸ್ವಿಫ್ಟ್ ಸೀಮಿತ ಆವೃತ್ತಿಯು ಪೆಟ್ರೋಲ್ ಎಲ್ ಎಕ್ಸ್ ಐ ಮತ್ತು ಡೀಸೆಲ್ ಎಲ್ ಡಿಐ ಬೇಸ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಮುಂದಿನ ಜನಾಂಗದ ಸ್ವಿಫ್ಟ್ ಆಗಮನಕ್ಕೂ ಮುನ್ನ ಮಾರುಕಟ್ಟೆಯಲ್ಲಿ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ಮಾರುತಿ, ತನ್ಮೂಲಕ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಎಲ್‌ಎಕ್ಸ್ ವಿಶೇಷ ಆವೃತ್ತಿ ಬಿಡುಗಡೆ

ಮಾರುತಿ ಸ್ವಿಫ್ಟ್ ಡಿಎಲ್ ಎಕ್ಸ್ ಪೆಟ್ರೋಲ್ ಮತ್ತು ಡಿಎಲ್ ಎಕ್ಸ್ ಡೀಸೆಲ್ ಕಿಟ್ ವೆರಿಯಂಟ್ ಗಳು ಅನುಕ್ರಮವಾಗಿ 4.54 ಮತ್ತು 5.95 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಎಲ್‌ಎಕ್ಸ್ ವಿಶೇಷ ಆವೃತ್ತಿ ಬಿಡುಗಡೆ

ಮಾರುತಿ ಸ್ವಿಫ್ಟ್ ಡಿಎಲ್ ಎಕ್ಸ್ ಕಿಟ್ ಗಳು 2 ಡಿನ್ ಆಡಿಯೋ ಸಿಸ್ಟಂ ಜೊತೆ ಬ್ಲೂಟೂತ್ ಕನೆಕ್ಟಿವಿಟಿ, ಫ್ರಂಟ್ ಡೋರ್ ಮೌಂಟೆಡ್ ಸ್ಪೀಕರ್, ಫ್ರಂಟ್ ಮತ್ತು ರಿಯರ್ ಪವರ್ ವಿಂಡೋ, ಎಂಐಡಿ ಇನ್ಸ್ಟ್ರುಮೆಂಟ್ ಕನ್ಸಾಲ್ (ಸರಾಸರಿ ಇಂಧನ ಕ್ಷಮತೆ ಮಾಪಕ), ಫಾಗ್ ಲೈಟ್, ಸೆಂಟ್ರಲ್ ಲಾಕಿಂಗ್, ದೇಹ ಬಣ್ಣದ ವಿಂಗ್ ಮಿರರ್ ಹಾಗೂ ಡೋರ್ ಹ್ಯಾಂಡಲ್ ಮತ್ತು ಕಪ್ಪು ವರ್ಣದ ಪಿಲ್ಲರ್ ಗಳು ಇರಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಎಲ್‌ಎಕ್ಸ್ ವಿಶೇಷ ಆವೃತ್ತಿ ಬಿಡುಗಡೆ

ಮಾರುತಿ ಸ್ವಿಫ್ಟ್ ಡಿಎಲ್ ಎಕ್ಸ್ ಪೆಟ್ರೋಲ್ ವಿಶೇಷ ಆವೃತ್ತಿಯು 1.2 ಲೀಟರ್ ಕೆ-ಸಿರೀಸ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 114 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಎಲ್‌ಎಕ್ಸ್ ವಿಶೇಷ ಆವೃತ್ತಿ ಬಿಡುಗಡೆ

ಹಾಗೆಯೇ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ 190 ಎನ್ ಎಂ ತಿರುಗುಬಲದಲ್ಲಿ 75 ಅಶ್ವಶಕ್ತಿಯನ್ನು ನೀಡಲಿದೆ. ಇವೆರಡು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಎಲ್‌ಎಕ್ಸ್ ವಿಶೇಷ ಆವೃತ್ತಿ ಬಿಡುಗಡೆ

ಇದಲ್ಲದೆ ಕಾರ್ಪೋರೇಟ್ ಮತ್ತು ಸರಕಾರಿ ಉದ್ಯೋಗಿಗಳಿಗೆ 7,500 ರು.ಗಳ ಹೆಚ್ಚುವರಿ ರಿಯಾಯಿತಿ ದರ ಸಹ ಲಭ್ಯವಾಗಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಎಲ್‌ಎಕ್ಸ್ ವಿಶೇಷ ಆವೃತ್ತಿ ಬಿಡುಗಡೆ

ಬೆಸ್ಟ್ ಇನ್ ಕ್ಲಾಸ್ ಮೈಲೇಜ್ ಕಾಪಾಡಿಕೊಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಪ್ರತಿ ಲೀಟರ್ ಗೆ 20.4 ಕೀ.ಮೀ. ಇಂಧನ ಕ್ಷಮತೆಯನ್ನು ನೀಡಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಎಲ್‌ಎಕ್ಸ್ ವಿಶೇಷ ಆವೃತ್ತಿ ಬಿಡುಗಡೆ

ಒಟ್ಟಿನಲ್ಲಿ ಸ್ವಿಫ್ಟ್ ಪ್ರೇಮಿಗಳಿಗೆ ಡಿಎಲ್ ಎಕ್ಸ್ ವಿಶೇಷ ಕಿಟ್ ಆವೃತ್ತಿಯು ವಿನೂತನ ಅನುಭವ ನೀಡಲಿದೆ.

Most Read Articles

Kannada
English summary
Maruti Launches Limited Edition Of The Swift
Story first published: Wednesday, July 13, 2016, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X