ಬರುತ್ತಿದೆ ಮಾರುತಿ ಆಲ್ಟೊ ಡೀಸೆಲ್ ಕಾರು

By Nagaraja

ಎಂಟ್ರಿ ಲೆವೆಲ್ ಪ್ರಯಾಣಿಕ ಕಾರು ವಿಭಾಗದಲ್ಲಿ ಎಲ್ಲೆಡೆಗಳಿಂದ ಎದುರಾಗಿರುವ ಅಪಾಯಗಳಿಂದ ಎಚ್ಚೆತ್ತುಕೊಂಡಿರುವ ದೇಶದ ಅತಿ ದೊಡ್ಡ ಕಾರು ಸಂಸ್ಥೆ ಮಾರುತಿ ಸುಜುಕಿ, ಮಗದೊಮ್ಮೆ ಮೋಡಿ ಮಾಡುವ ಇರಾದೆಯಲ್ಲಿದೆ.

ವಾಹನ ವಲಯಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಆಲ್ಟೊ ಡೀಸೆಲ್ ಕಾರು ಬಹುನಿರೀಕ್ಷಿತ 2016 ಆಟೋ ಎಕ್ಸೋ ಪೋದಲ್ಲಿ ಪ್ರದರ್ಶನ ಕಾಣಲಿದೆ. ಅಷ್ಟೇ ಯಾಕೆ ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲೇ ಮಾರುತಿ ಡೀಸೆಲ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

ಬರುತ್ತಿದೆ ಮಾರುತಿ ಆಲ್ಟೊ ಡೀಸೆಲ್ ಕಾರು

ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬರಬೇಕಿದೆ. ಇದರ ಹೊರತಾಗಿ ಆಲ್ಟೊ ಪರಿಷ್ಕೃತ ಮಾದರಿಯೂ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳ್ಳಲಿದೆ.

ಬರುತ್ತಿದೆ ಮಾರುತಿ ಆಲ್ಟೊ ಡೀಸೆಲ್ ಕಾರು

ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಮಾರುತಿ ಆಲ್ಟೊ ಡೀಸೆಲ್ ಕಾರು ಸಹ 794 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 125 ಎನ್ ಎಂ ತಿರುಗುಬಲದಲ್ಲಿ 47 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬರುತ್ತಿದೆ ಮಾರುತಿ ಆಲ್ಟೊ ಡೀಸೆಲ್ ಕಾರು

ಮಾರುತಿ ಆಲ್ಟೊ ಡೀಸೆಲ್ ಕಾರಿನಲ್ಲೂ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಗೇರ್ ಬಾಕ್ಸ್ ಲಭ್ಯವಾಗುವ ನಿರೀಕ್ಷೆಯಿದೆ. ಪ್ರಸ್ತುತ ಆಲ್ಟೊ ಕೆ10 ಹಾಗೂ ಸೆಲೆರಿಯೊ ಕಾರಗಳಲ್ಲಿ ಇಂತಹದೊಂದು ಸೌಲಭ್ಯವನ್ನು ಸಂಸ್ಥೆ ನೀಡುತ್ತಿದೆ.

ಬರುತ್ತಿದೆ ಮಾರುತಿ ಆಲ್ಟೊ ಡೀಸೆಲ್ ಕಾರು

ಈ ಎಲ್ಲ ಬೆಳವಣಿಗೆಯಲ್ಲಿ ಮುಂದಿನ ದಿನಗಳಲ್ಲಿ ತನ್ನ ಸಾನಿಧ್ಯವನ್ನು ಮತ್ತಷ್ಟು ಗಟ್ಟಿ ಮಾಡಲು ಆಲ್ಟೊಗೆ ನೆರವಾಗಲಿದೆ.

ಬರುತ್ತಿದೆ ಮಾರುತಿ ಆಲ್ಟೊ ಡೀಸೆಲ್ ಕಾರು

ಒಟ್ಟಿನಲ್ಲಿ ಮುಂಬರುವ ಆಟೋ ಎಕ್ಸ್ ಪೋ ಹಲವಾರು ಕಾರಣಗಳಿಂದಾಗಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಮಾರುತಿ ನಡೆ ಏನಾಗಿರಲಿದೆ ಎಂಬುದು ಇನ್ನು ಕುತೂಹಲವೆನಿಸಿದೆ.

Most Read Articles

Kannada
Read more on ಆಲ್ಟೊ alto
English summary
Maruti Suzuki Alto Diesel Likely to Be Showcased at Auto Expo
Story first published: Saturday, January 2, 2016, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X