ಜನಪ್ರಿಯ ಮಾರುತಿ ಕಾರುಗಳಿಗೆ ಆಕರ್ಷಕ ಆಫರುಗಳು!

Written By:

ಅಪನಗದೀಕರಣವು ವಾಹನ ಮಾರುಕಟ್ಟೆ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಿದೆ. ಈ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸಲು ಪೇಚಾಡುತ್ತಿರುವ ದೇಶದ ಮುಂಚೂಣಿಯ ಸಂಸ್ಥೆಗಳು ಗರಿಷ್ಠ ಆಫರುಗಳನ್ನು ಮುಂದಿಟ್ಟಿದೆ. ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಸಹ ಈ ವರ್ಷಾಂತ್ಯದ ವೇಳೆಯಲ್ಲಿ ತನ್ನ ಶ್ರೇಣಿಯ ಕಾರುಗಳಿಗೆ ಅತ್ಯಾಕರ್ಷಕ ಆಫರುಗಳನ್ನು ನೀಡುತ್ತಿದೆ.

To Follow DriveSpark On Facebook, Click The Like Button
ಮಾರುತಿ ಸುಜುಕಿ ಆಲ್ಟೊ 800

ಮಾರುತಿ ಸುಜುಕಿ ಆಲ್ಟೊ 800

ದೆಹಲಿ ಎಕ್ಸ್ ಶೋ ರೂಂ ಬೆಲೆ 2.5 ಲಕ್ಷ ರು.ಗಳಲ್ಲಿ ಆರಂಭವಾಗುವ ಮಾರುತಿ ಸುಜುಕಿ ಆಲ್ಟೊ 800 ಖರೀದಿ ವೇಳೆಯಲ್ಲಿ 60,000 ರು.ಗಳಷ್ಟು ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ಜನಪ್ರಿಯ ಮಾರುತಿ ಕಾರುಗಳಿಗೆ ಆಕರ್ಷಕ ಆಫರುಗಳು!

ಇವುಗಳಲ್ಲಿ 30,000 ರು.ಗಳ ಗ್ರಾಹಕ ಆಪರ್, 25,000 ರು.ಗಳ ಎಕ್ಸ್ ಚೇಂಜ್ ಆಫರ್ ಮತ್ತು ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚುವರಿ 5,000 ರು.ಗಳ ಆಫರುಗಳು ಸೇರಿಕೊಂಡಿರಲಿದೆ.

ಮಾರುತಿ ಸುಜುಕಿ ಆಲ್ಟೊ ಕೆ10

ಮಾರುತಿ ಸುಜುಕಿ ಆಲ್ಟೊ ಕೆ10

ಮಾರುತಿ ಆಲ್ಟೊ ಕೆ10 ಖರೀದಿಯಲ್ಲೂ 55,000 ರು.ಗಳಷ್ಟು ಉಳಿತಾಯ ಮಾಡಬಹುದಾಗಿದೆ. ಇದರಲ್ಲಿ ತಲಾ 25,000 ರು.ಗಳ ಗ್ರಾಹಕ ಹಾಗೂ ಎಕ್ಸ್ ಚೇಂಜ್ ಆಫರ್ ಮತ್ತು ಸರ್ಕಾರಿ ಉದ್ಯೋಗಿಗಳಿಗೆ 5000 ರು.ಗಳ ಹೆಚ್ಚುವರಿ ಆಫರುಗಳು ಇರಲಿದೆ.

ಆಲ್ಟೊ ಕೆ10 ಎಎಂಟಿ

ಆಲ್ಟೊ ಕೆ10 ಎಎಂಟಿ

ಅದೇ ಹೊತ್ತಿಗೆ ಆಲ್ಟೊ ಕೆ10 ಮ್ಯಾನುವಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಕಾರು ಖರೀದಿ ವೇಳೆಯಲ್ಲಿ 5,000 ರು.ಗಳ ಹೆಚ್ಚುವರಿ ಆಫರ್ ಲಭ್ಯವಾಗಲಿದೆ.

ಮಾರುತಿ ಸೆಲೆರಿಯೊ

ಮಾರುತಿ ಸೆಲೆರಿಯೊ

ಮಾರುತಿ ಸೆಲೆರಿಯೊ ಪೆಟ್ರೋಲ್ ಮತ್ತು ಸಿಎನ್ ಜಿ ಕಾರು ಖರೀದಿ ವೇಳೆಯಲ್ಲಿ 50,000 ರು.ಗಳ ವರೆಗೆ ಪ್ರಯೋಜನ ಗಳಿಸಬಹುದಾಗಿದೆ. ಇದರಲ್ಲಿ 25,000 ರು.ಗಳ ಎಕ್ಸ್ ಚೇಂಜ್ ಆಫರ್, 20,000 ರು.ಗಳ ಬೆಲೆ ರಿಯಾಯಿತಿ ಮತ್ತು ಸರ್ಕಾರಿ ಉದ್ಯೋಗಳಿಗೆ 5000 ರು.ಗಳ ಹೆಚ್ಚುವರಿ ಡಿಸ್ಕೌಂಟ್ ಸೇರಿರಲಿದೆ.

ಸೆಲೆರಿಯೊ ಎಎಂಟಿ

ಸೆಲೆರಿಯೊ ಎಎಂಟಿ

ಅದೇ ಹೊತ್ತಿಗೆ ಸೆಲೆರಿಯೊ ಎಎಂಟಿ ಮಾದರಿಗಳಿಗೆ 5,000 ರು.ಗಳ ಹೆಚ್ಚುವರಿ ರಿಯಾಯಿತಿ ದರಗಳನ್ನು ಕೊಡಲಾಗುತ್ತಿದೆ.

ವ್ಯಾಗನಾರ್

ವ್ಯಾಗನಾರ್

ಟಾಲ್ ಬಾಯ್ ಖ್ಯಾತಿಯ ವ್ಯಾಗನಾರ್ ಖರೀದಿ ವೇಳೆಯಲ್ಲಿ 30,000 ರು.ಗಳ ನಗದು ರಿಯಾಯಿತಿ, 25,000 ರು.ಗಳ ಎಕ್ಸ್ ಚೇಂಜ್ ಆಫರ್ ಮತ್ತು ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚುವರಿ ಡಿಸ್ಕೌಂಟ್ ಸಿಗಲಿದೆ.

ವ್ಯಾಗನಾರ್ ಎಎಂಟಿ

ವ್ಯಾಗನಾರ್ ಎಎಂಟಿ

ವ್ಯಾಗನಾರ್ ಎಎಂಟಿ ಖರೀದಿ ವೇಳೆಯಲ್ಲೂ ಗ್ರಾಹಕರು 5,000 ರು.ಗಳ ಹೆಚ್ಚುವರಿ ಆಫರ್ ಗಿಟ್ಟಿಸಿಕೊಳ್ಳಬಹುದಾಗಿದೆ. ಈ ಎಲ್ಲ ಆಫರುಗಳ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಮಾರುತಿ ಸುಜುಕಿ ಅಧಿಕೃತ ಡೀಲರುಗಳನ್ನು ಸಂಪರ್ಕಿಸಿರಿ.

English summary
Buying A New Car? Here Are The Best Offers From Maruti Suzuki
Story first published: Thursday, December 1, 2016, 15:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark