ಮಾರುತಿ ರಿಟ್ಜ್ ಯುಗಾಂತ್ಯ? ಹೊಸ ಇಗ್ನಿಂಗ್ಸ್‌ಗೆ ಇಗ್ನಿಸ್‌ ರೆಡಿ

Written By:

ಮಾರುತಿಯ 'ಟಾಲ್ ಬಾಯ್' ಹ್ಯಾಚ್ ಬ್ಯಾಕ್ ಕಾರು ಖ್ಯಾತಿಯ ರಿಟ್ಜ್ ನಿರ್ಮಾಣವನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದು ಇನ್ನಷ್ಟೇ ಆಗಮನವಾಗಲಿರುವ ಅತಿ ನೂತನ ಕಾಂಪಾಕ್ಟ್ ಕ್ರಾಸೋವರ್ ಇಗ್ನಿಸ್ ಕಾರಿಗೆ ಹಾದಿ ಬಿಟ್ಟುಕೊಡಲಿದೆ. ಇದರೊಂದಿಗೆ ಕಳೆದ ಏಳು ವರ್ಷಗಳಷ್ಟು ಕಾಲ ಮಾರುಕಟ್ಟೆಯಲ್ಲಿ ಮೆರೆದಾಡಿದ್ದ ನೆಚ್ಚಿನ ಮಾರುತಿ ರಿಟ್ಜ್ ಯುಗಾಂತ್ಯ ಕಾಣಲಿದೆ.

ಮಾರುತಿ ರಿಟ್ಜ್ ಯುಗಾಂತ್ಯ? ಹೊಸ ಇಗ್ನಿಂಗ್ಸ್‌ಗೆ ಇಗ್ನಿಸ್‌ ರೆಡಿ

ವಾಹನ ವಲಯದ ನಿಕಟವರ್ತಿಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಮಾರುತಿ ರಿಟ್ಜ್ ನಿರ್ಮಾಣವನ್ನು ನಿಲುಗಡೆಗೊಳಿಸಲಾಗುತ್ತಿದೆ. ಇದರ ಸ್ಥಾನವನ್ನು ಹೆಚ್ಚು ಆಧುನಿಕ ವೈಶಿಷ್ಟ್ಯವನ್ನು ಹೊಂದಿರುವ ಮಾರುತಿ ಇಗ್ನಿಸ್ ತುಂಬಲಿದೆ.

ಮಾರುತಿ ರಿಟ್ಜ್ ಯುಗಾಂತ್ಯ? ಹೊಸ ಇಗ್ನಿಂಗ್ಸ್‌ಗೆ ಇಗ್ನಿಸ್‌ ರೆಡಿ

ಭಾರತೀಯ ವಾಹನ ತಯಾರಕ ಸಂಸ್ಥೆಗಳ ಒಕ್ಕೂಟ (ಸಿಯಾಮ್) ಮಾಹಿತಿಯ ಪ್ರಕಾರ ಕಳೆದ ಎರಡು ತಿಂಗಳಲ್ಲಿ ಒಂದೇ ಒಂದು ರಿಟ್ಜ್ ಕಾರನ್ನು ಉತ್ಪಾದಿಸಲಾಗಿಲ್ಲ.

ಮಾರುತಿ ರಿಟ್ಜ್ ಯುಗಾಂತ್ಯ? ಹೊಸ ಇಗ್ನಿಂಗ್ಸ್‌ಗೆ ಇಗ್ನಿಸ್‌ ರೆಡಿ

2016 ಫೆಬ್ರವರಿ ತಿಂಗಳಲ್ಲೇ ರಿಟ್ಜ್ ನಿರ್ಮಾಣವನ್ನು ಸ್ಥಗಿತಗೊಳಿಸಲು ಮಾರುತಿ ನಿರ್ಧರಿಸಿತ್ತು. ಆದರೆ ಅಲ್ಲಿಂದ ಬಳಿಕ 28,000 ಯುನಿಟ್ ಗಳಷ್ಟು ಹೆಚ್ಚು ರಿಟ್ಜ್ ಕಾರುಗಳನ್ನು ಉತ್ಪಾದಿಸಲಾಗಿತ್ತು.

ಮಾರುತಿ ರಿಟ್ಜ್ ಯುಗಾಂತ್ಯ? ಹೊಸ ಇಗ್ನಿಂಗ್ಸ್‌ಗೆ ಇಗ್ನಿಸ್‌ ರೆಡಿ

ಸ್ವಿಫ್ಟ್ ಹಾಗೂ ಸೆಲೆರಿಯೊಗಳಂತಹ ಕಾರುಗಳಿಗೆ ಹೋಲಿಸಿದಾಗ ಮಾರಾಟದ ವಿಚಾರದಲ್ಲಿ ಮಾರುತಿ ರಿಟ್ಜ್ ಹಿಂದೆ ಬಿದ್ದಿದೆ. ಆಗಸ್ಟ್ ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳಲ್ಲಿ ಅನುಕ್ರಮವಾಗಿ 3038, 2515 ಮತ್ತು 5 ಯುನಿಟ್ ಗಳಷ್ಟೇ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು.

ಮಾರುತಿ ರಿಟ್ಜ್ ಯುಗಾಂತ್ಯ? ಹೊಸ ಇಗ್ನಿಂಗ್ಸ್‌ಗೆ ಇಗ್ನಿಸ್‌ ರೆಡಿ

2009ನೇ ಇಸವಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಮಾರುತಿ ರಿಟ್ಜ್ ಹೆಚ್ಚಿನ ಬೇಡಿಕೆಯನ್ನು ಕಾಪಾಡಿಕೊಂಡಿತ್ತು. ಅಲ್ಲದೆ ಸರಾಸರಿ 3000 ಯುನಿಟ್ ಗಳ ಮಾರಾಟವನ್ನು ಕಾಪಾಡಿಕೊಳ್ಳಲು ಯಶಸ್ವಿಯಾಗಿತ್ತು.

ಮಾರುತಿ ರಿಟ್ಜ್ ಯುಗಾಂತ್ಯ? ಹೊಸ ಇಗ್ನಿಂಗ್ಸ್‌ಗೆ ಇಗ್ನಿಸ್‌ ರೆಡಿ

ರಿಟ್ಜ್ ನಿರ್ಮಾಣವನ್ನು ಸ್ಥಗಿತಗೊಳಿಸುವುರೊಂದಿಗೆ ಮಾರುತಿಗೆ ಎರಡು ಅಂಶಗಳಲ್ಲಿ ನೆರವಾಗಲಿದೆ. ಇದರಿಂದಾಗಿ ಬ್ರಿಝಾ, ಬಲೆನೊಗಳಂತಹ ಬೇಡಿಕೆ ಹೆಚ್ಚಿನ ಕಾರುಗಳನ್ನು ಹೆಚ್ಚೆಚ್ಚು ನಿರ್ಮಿಸಬಹುದಾಗಿದೆ. ಹಾಗೆಯೇ ಬಹುನಿರೀಕ್ಷಿತ ಇಗ್ನಿಸ್ ನಿರ್ಮಾಣದತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲು ನೆರವಾಗಲಿದೆ.

ಮಾರುತಿ ರಿಟ್ಜ್ ಯುಗಾಂತ್ಯ? ಹೊಸ ಇಗ್ನಿಂಗ್ಸ್‌ಗೆ ಇಗ್ನಿಸ್‌ ರೆಡಿ

ಈ ನಡುವೆ ನಿರ್ಮಾಣ ಸಮಸ್ಯೆಯಿಂದಾಗಿ ಪ್ರಸಕ್ತ ಸಾಲಿನ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗಬೇಕಿದ್ದ ಇಗ್ನಿಸ್ ಬಿಡುಗಡೆಯನ್ನು ಮಾರುತಿ ಹೊಸ ವರ್ಷಕ್ಕೆ ಮುಂದೂಡಿತ್ತು.

ಮಾರುತಿ ರಿಟ್ಜ್ ಯುಗಾಂತ್ಯ? ಹೊಸ ಇಗ್ನಿಂಗ್ಸ್‌ಗೆ ಇಗ್ನಿಸ್‌ ರೆಡಿ

ಮಾರುತಿ ಇಗ್ನಿಸ್ ಬೆನ್ನಲ್ಲೇ ಬಲೆನೊ ಶಕ್ತಿಶಾಲಿ ಆವೃತ್ತಿಯಾಗಿರುವ ಬಲೆನೊ ಆರ್ ಎಸ್ ಜೊತೆಗೆ ಸ್ವಿಫ್ಟ್ ಪವರ್ ಫುಲ್ ಎಡಿಷನ್ ಸಹ 2017ನೇ ಸಾಲಿನಲ್ಲೇ ಬಿಡುಗಡೆಯಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಮಾರುತಿ ರಿಟ್ಜ್ ಯುಗಾಂತ್ಯ? ಹೊಸ ಇಗ್ನಿಂಗ್ಸ್‌ಗೆ ಇಗ್ನಿಸ್‌ ರೆಡಿ

ಈಗಿರುವ ಮಾನೇಸರ್ ಮತ್ತು ಗುರ್ಗಾಂವ್ ಘಟಕಗಳಲ್ಲಾಗಿ ಮಾರುತಿ 1.5 ದಶಲಕ್ಷ ಕಾರುಗಳನ್ನು ವಾರ್ಷಿಕವಾಗಿ ಉತ್ಪಾದಿಸುತ್ತಿದೆ. ಗುಜರಾತ್ ನಲ್ಲಿ 1.5 ಮಿಲಿಯನ್ ಸಾಮರ್ಥ್ಯದ ಮಗದೊಂದು ಘಟಕವನ್ನು ಸಂಸ್ಥೆಯು ತೆರೆದುಕೊಳ್ಳಲಿದೆ. ಗುಜರಾತ್ ನಲ್ಲಿ ಹೊಸ ಘಟಕ ತೆರೆಯುವುದಕ್ಕಾಗಿ ಮಾರುತಿ ಅಂಗಸಂಸ್ಥೆ ಸುಜುಕಿ 8,500 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಮಾರುತಿ ರಿಟ್ಜ್ ಯುಗಾಂತ್ಯ? ಹೊಸ ಇಗ್ನಿಂಗ್ಸ್‌ಗೆ ಇಗ್ನಿಸ್‌ ರೆಡಿ

ಒಟ್ಟಿನಲ್ಲಿ ಮುಂಬರುವ ಮತ್ತು ಪರಿಷ್ಕೃತ ಕಾರುಗಳ ನಿರ್ಮಾಣಕ್ಕಾಗಿ ಕಡಿಮೆ ಮಾರಾಟದಲ್ಲಿರುವ ವಾಹನಕ್ಕೆ ಕತ್ತರಿ ಪ್ರಯೋಗ ಮಾಡಲು ಮಾರುತಿ ನಿರ್ಧರಿಸಿದೆ. ಈ ಎಲ್ಲದ್ದಕ್ಕೆ ಸಂಬಂಧಿಸಿದಂತೆ ಸಂಸ್ಥೆಯಿಂದ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಬರಬೇಕಿದೆ.

English summary
Maruti Suzuki Ignis Mini-SUV To Replace Ritz Hatchback In The Indian Market
Story first published: Monday, November 28, 2016, 17:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark