ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿ ಬಿಡುಗಡೆ

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಮುಂಬರುವ ಹಬ್ಬದ ಆವೃತ್ತಿಗೂ ಮುಂಚಿತವಾಗಿ ತನ್ನ ಜನಪ್ರಿಯ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನ ಡೆಕಾ ಸೀಮಿತ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಆರಂಭಿಕ ಬೆಲೆ: 5.94 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿಯು ವಿಎಕ್ಸ್ ಐ ಹಾಗೂ ವಿಡಿಐ ವೆರಿಯಂಟ್ ಗಳಲ್ಲಿ ದೊರಕಲಿದ್ದು, ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 5.94 ಹಾಗೂ 6.86 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

To Follow DriveSpark On Facebook, Click The Like Button
ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿ ಬಿಡುಗಡೆ

ದೇಶದ ಸರ್ವಕಾಲಿಕ ಶ್ರೇಷ್ಠ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದಾಗಿರುವ ಸ್ವಿಫ್ಟ್ ಮಧ್ಯಮ ದರ್ಜೆಯ ಆವೃತ್ತಿಯನ್ನು ಆಧಾರವಾಗಿಟ್ಟು ಹೊಸ ಸೀಮಿತ ಕಾರನ್ನು ಬಿಡುಗಡೆ ಮಾಡಲಿದೆ. ಇದು ಗ್ರಾಹಕರಿಗೆ ಉಪಯುಕ್ತವೆನಿಸಿರುವ ಗಮನಾರ್ಹ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿ ಬಿಡುಗಡೆ

ನೂತನ ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಆವೃತ್ತಿಯು ವಿಶೇಷ ಗ್ರಾಫಿಕ್ಸ್ ಗಳನ್ನು ಪಡೆಯಲಿದ್ದು, ರೂಫ್ ಮೌಂಟೆಡ್ ಸ್ಪಾಯ್ಲರ್ ಪ್ರಮುಖವೆನಿಸಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿ ಬಿಡುಗಡೆ

ಇನ್ನು ಕಾರಿಗೆ ಕ್ರೀಡಾತ್ಮಕ ಸ್ಪರ್ಶ ತುಂಬುವ ನಿಟ್ಟಿನಲ್ಲಿ ಬೋನೆಟ್ ನಿಂದ ಹಿಂಭಾಗದ ವರೆಗೂ ರೇಸಿಂಗ್ ಪಟ್ಟಿಯನ್ನು ಲಗತ್ತಿಸಲಾಗಿದೆ. ಸಿ ಪಿಲ್ಲರ್ ಹಾಗೂ ಹಿಂಭಾಗದ ಬಾಗಿಲಿನಲ್ಲೂ ಇದೇ ಥೀಮ್ ಕಂಡುಬರಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿ ಬಿಡುಗಡೆ

ಮುಂಭಾಗದ ಡೋರ್ ನಲ್ಲಿ '10' ನಂಬರ್ ಎದ್ದು ಕಾಣಿಸಲಿದೆ. ಇನ್ನು ಬೆಳ್ಳಿ ಬಣ್ಣದ ಬದಲಾಗಿ ಕಪ್ಪು ವೀಲ್ ಕವರ್ ಕೊಡಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿ ಬಿಡುಗಡೆ

ಕಾರಿನೊಳಗೆ ಸೋನಿ ಮಲ್ಟಿಮೀಡಿಯಾ ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಂ ಜೊತೆ ಬ್ಲೂಟೂತ್ , ಆರು ಇಂಚುಗಳ ಸೋನಿ ಡೋರ್ ಸ್ಪೀಕರ್, ಕಪ್ಪು ಹಾಗೂ ಕೆಂಪು ವರ್ಣದ ಸೀಟು ಕವರ್, ಸ್ಟೀರಿಂಗ್ ವೀಲ್ ಕವರ್, ಫ್ರಂಟ್ ಆರ್ಮ್ ರೆಸ್ಟ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಸಿಸ್ಟಂ ಜೊತೆ ಕ್ಯಾಮೆರಾ ಸೇವೆಗಳು ಲಭ್ಯವಾಗಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿ ಬಿಡುಗಡೆ

ವಿಶೇಷ ಬೆಳಕು ಸೇವೆ, ಬಣ್ಣಗಳ ಪಟ್ಟಿ, ಮಧ್ಯದಲ್ಲಿ ಕಾರ್ಬನ್ ಫೈಬರ್ ಫಿನಿಶ್, ಫ್ಲೋರ್ ಮ್ಯಾಟ್ ಹಾಗೂ ಗೇರ್ ಬೂಟ್ ಕವರ್ ಗಳು ಲಭ್ಯವಾಗಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿ ಬಿಡುಗಡೆ

ಕ್ರೀಡೆಯ ಭಾಗವಾಗಿ ಜನಪ್ರಿಯ '10' ನಂಬರ್ ಗೆ ಗೌರವಾರ್ಥವಾಗಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ಹಾಗೂ ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಸೇರಿದಂತೆ ಅನೇಕ ಕ್ರೀಡಾಪಟುಗಳಿಗೆ 10 ಫೇವರಿಟ್ ಅಂಕಿಯೆನಿಸಿಕೊಂಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿ ಬಿಡುಗಡೆ

ಸ್ವಿಫ್ಟ್ ವಿಎಕ್ಸ್‌ಐ (ಐಚ್ಛಿಕ) ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದಾಗ ಡೆಕಾ ಎಡಿಷನ್ 22,555 ರು.ಗಳಷ್ಟು ದುಬಾರಿಯೆನಿಸುತ್ತದೆ. ಹಾಗೆಯೇ ವಿಡಿಐ (ಐಚ್ಛಿಕ) ಮಾದರಿಗಿಂತಲೂ ಡೆಕಾ ವಿಡಿಐ 30,319 ರು.ಗಳಷ್ಟು ದುಬಾರಿಯಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿ ಬಿಡುಗಡೆ

ಅಂದ ಹಾಗೆ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ಖರೀದಿಸುವ ಗ್ರಾಹಕರಿಗೆ 18,000 ರು.ಗಳ ವಿಶೇಷ ಆಕ್ಸೆಸರಿ ಕಿಟ್ ಪ್ರಯೋಜನವನ್ನು ಪಡೆಯಬಹುದಾಗಿದೆ.

ಬಣ್ಣಗಳು - ಹೊಳಪು ಕೆಂಪು ಮತ್ತು ಮುತ್ತಿನ ಬಿಳಿ.

ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಸೀಮಿತ ಆವೃತ್ತಿ ಬಿಡುಗಡೆ

ಮಾರುತಿ ಸ್ವಿಫ್ಟ್ 1.2 ಲೀಟರ್ ಕೆ ಸಿರೀಸ್ ವಿವಿಟಿ ಪೆಟ್ರೋಲ್ ಎಂಜಿನ್ 115 ಎನ್ ಎಂ ತಿರುಗುಬಲದಲ್ಲಿ 83 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.3 ಲೀಟರ್ ಟರ್ಬೊ ಚಾರ್ಜ್ಡ್ ಡಿಡಿಐಎಸ್ ಡೀಸೆಲ್ ಎಂಜಿನ್, 190 ಎನ್ ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿಯನ್ನು ನೀಡಲಿದೆ.

English summary
Maruti Suzuki launches Swift Deca Limited Edition In India
Story first published: Tuesday, August 30, 2016, 16:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark