ಬಿಡುಗಡೆಯಾದ 7 ತಿಂಗಳಲ್ಲೇ ವಿಟಾರಾ ಬ್ರಿಝಾ 50,000 ಮಾರಾಟ

By Nagaraja

ಭಾರತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಕಾಪಾಡಿಕೊಂಡಿರುವ ಮಾರುತಿ ವಿಟಾರಾ ಬ್ರಿಝಾ ಕ್ರೀಡಾ ಬಳಕೆಯ ವಾಹನವು, ಬಿಡುಗಡೆಯಾದ ಏಳು ತಿಂಗಳೊಳಗೆ 50,000 ಸಂಖ್ಯೆಗಳ ಮಾರಾಟ ಮೈಲುಗಲ್ಲನ್ನು ತಲುಪಿದೆ. ಇನ್ನೊಂದೆಡೆ ವಿಟಾರಾ ಬ್ರಿಝಾ ಕಾಯುವಿಕೆ ಅವಧಿ ನಾಲ್ಕು ತಿಂಗಳಿಗೆ ವಿಸ್ತರಿಸಿದರೂ ಗ್ರಾಹಕರು ಈಗಲೂ ತಮ್ಮ ನೆಚ್ಚಿನ ಕಾರಿನ ಖರೀದಿಗಾಗಿ ಬುಕ್ಕಿಂಗ್ ಮಾಡುತ್ತಿದ್ದಾರೆ.

ಬಿಡುಗಡೆಯಾದ 7 ತಿಂಗಳಲ್ಲೇ ವಿಟಾರಾ ಬ್ರಿಝಾ 50,000 ಮಾರಾಟ

ಸಬ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಆಗಲೇ ಒಂದು ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಿಟ್ಟಿಸಿಕೊಂಡಿದೆ. ಈ ಪೈಕಿ 50,000 ಯುನಿಟ್ ಗಳನ್ನು ಮಾಲಿಕರಿಗೆ ಹಸ್ತಾಂತರಿಸಲಾಗಿದೆ.

ಬಿಡುಗಡೆಯಾದ 7 ತಿಂಗಳಲ್ಲೇ ವಿಟಾರಾ ಬ್ರಿಝಾ 50,000 ಮಾರಾಟ

ವಾಹನ ಮೂಲಗಳಿಂದ ಲಭ್ಯವಿರುವ ಮಾಹಿತಿಗಳ ಪ್ರಕಾರ ವಿಟಾರಾ ಬ್ರಿಝಾ ಕಾಯುವಿಕೆ ಅವಧಿ ನಾಲ್ಕರಿಂದ ಐದು ತಿಂಗಳಿಗೆ ವಿಸ್ತರಿಸಿದೆ. ಈ ಪೈಕಿ ಡ್ಯುಯಲ್ ಟೋನ್ ಬಣ್ಣದ ಟಾಪ್ ಎಂಡ್ ಝಡ್ ಎಡ್ ಐ ವೆರಿಯಂಟ್ ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಬಿಡುಗಡೆಯಾದ 7 ತಿಂಗಳಲ್ಲೇ ವಿಟಾರಾ ಬ್ರಿಝಾ 50,000 ಮಾರಾಟ

ಇತ್ತೀಚೆಗಷ್ಟೇ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಾಗಿರುವ ಬಲೆನೊ ಒಂದು ಲಕ್ಷ ಮಾರಾಟ ಮೈಲುಗಲ್ಲನ್ನು ದಾಟಿತ್ತು. ಇದಾದ ಬೆನ್ನಲ್ಲೇ ವಿಟಾರಾ ಬ್ರಿಝಾ 50,000 ಮಾರಾಟವನ್ನು ತಲುಪಿದೆ.

ಬಿಡುಗಡೆಯಾದ 7 ತಿಂಗಳಲ್ಲೇ ವಿಟಾರಾ ಬ್ರಿಝಾ 50,000 ಮಾರಾಟ

1.3 ಲೀಟರ್ ಡಿಡಿಐಎಸ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ವಿಟಾರಾ ಬ್ರಿಝಾ 200 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಗೇರ್ ಬಾಕ್ಸ್ ಪಡೆದಿದೆ. ಇನ್ನು ನಿಕಟ ಭವಿಷ್ಯದಲ್ಲೇ ಎಎಂಟಿ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

ಬಿಡುಗಡೆಯಾದ 7 ತಿಂಗಳಲ್ಲೇ ವಿಟಾರಾ ಬ್ರಿಝಾ 50,000 ಮಾರಾಟ

ಭಾರತ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಜೊತೆಗೆ ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಆವೃತ್ತಿಗಳಿಗೆ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಪೈಪೋಟಿಯನ್ನು ಒಡ್ಡುತ್ತಿದೆ.

ಬಿಡುಗಡೆಯಾದ 7 ತಿಂಗಳಲ್ಲೇ ವಿಟಾರಾ ಬ್ರಿಝಾ 50,000 ಮಾರಾಟ

ಕಳೆದ ಆಗಸ್ಟ್ ತಿಂಗಳಲ್ಲಿ ಮಾರುತಿ ವಿಟಾರಾ ಬ್ರಿಝಾ ಕಾರಿಗೆ 20,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲಾಗಿತ್ತು. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಕಾರು ಪಡೆಯಲು ಹಿಂಜರಿಯಲಿಲ್ಲ.

ಬಿಡುಗಡೆಯಾದ 7 ತಿಂಗಳಲ್ಲೇ ವಿಟಾರಾ ಬ್ರಿಝಾ 50,000 ಮಾರಾಟ

ವಿಟಾರಾ ಬ್ರಿಝಾಗೆ ಅತೀವ ಬೇಡಿಕೆಯನ್ನು ಪರಿಗಣಿಸಿರುವ ಮಾರುತಿ ಜುಲೈ ತಿಂಗಳಿಂದ ನಿರ್ಮಾಣ ಸಾಮರ್ಥ್ಯವನ್ನು 10,000 ಯುನಿಟ್ ಗಳಿಗೆ ಏರಿಕೆಗೊಳಿಸಿತ್ತು.

ಬಿಡುಗಡೆಯಾದ 7 ತಿಂಗಳಲ್ಲೇ ವಿಟಾರಾ ಬ್ರಿಝಾ 50,000 ಮಾರಾಟ

ಎಲ್ ಡಿಐ, ಎಲ್ ಡಿಐ (ಐಚ್ಚಿಕ), ವಿಡಿಐ, ವಿಡಿಐ (ಐಚ್ಛಿಕ), ಝಡ್ ಡಿ ಐ, ಝಡ್ ಡಿಐ ಪ್ಲಸ್ ಮತ್ತು ಝಡ್ ಡಿಐ ಡ್ಯುಯಲ್ ಟೋನ್ ಜೊತೆಗೆ ಆರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಬಿಡುಗಡೆಯಾದ 7 ತಿಂಗಳಲ್ಲೇ ವಿಟಾರಾ ಬ್ರಿಝಾ 50,000 ಮಾರಾಟ

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್ ಜೊತೆ ಟರ್ನ್-ಇಂಡಿಕೇಟರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ, ಕೂಲ್ಡ್ ಗ್ಲೋವ್ ಬಾಕ್ಸ್, ಕ್ರೂಸ್ ಕಂಟ್ರೋಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಇನ್ ಬಿಲ್ಟ್ ನೇವಿಗೇಷನ್ ಸೌಲಭ್ಯಗಳಿವೆ. ಇನ್ನು ಚಾಲಕ ಬದಿಯ ಏರ್ ಬ್ಯಾಗ್, ಪ್ರಯಾಣಿಕ ಏರ್ ಬ್ಯಾಗ್, ಎಬಿಎಸ್ ಮತ್ತು ಇಬಿಡಿ ಸುರಕ್ಷಾ ವೈಶಿಷ್ಟ್ಯಗಳು ಇದರಲ್ಲಿದೆ.

Most Read Articles

Kannada
English summary
Maruti Suzuki Vitara Brezza — 50,000 Units Sold In Seven Months
Story first published: Thursday, October 6, 2016, 13:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X