ಅಯ್ಯೋ ತಲೆನೋವು; ಟ್ರಾಫಿಕ್ ನಿಯಂತ್ರಣಕ್ಕೆ ಫ್ಯಾಮಿಲಿಗೊಂದು ಕಾರು!
ದೇಶದ ಮೆಟ್ರೋ ನಗರಿಯಲ್ಲಿ ದೈನಂದಿನ ವಾಹನ ದಟ್ಟಣೆ ಪ್ರಮಾಣ ಹೆಚ್ಚಾಗುತ್ತಲೇ. ಇದು ಜನ ಸಾಮಾನ್ಯರ ಜೊತೆಗೆ ಆಡಳಿತ ವರ್ಗಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಮಹತ್ವದ ಸಲಹೆಯೊಂದನ್ನು ಕೊಟ್ಟಿರುವ ಮುಂಬೈ ಹೈಕೋರ್ಟ್, ಕುಟುಂಕ್ಕೊಂದು ಕಾರು ಎಂಬ ಸೂತ್ರ ವಾಕ್ಯವನ್ನು ಮುಂದಿಟ್ಟಿದೆ.

ಶ್ರೀಮಂತರ ಕುಟುಂಬದ ಪ್ರತಿಯೊಬ್ಬ ಸದಸ್ಯರಲ್ಲಿ ಅಥವಾ ಕನಿಷ್ಠ ಮನೆಯೊಂದರಲ್ಲಿ ಎರಡು ಕಾರುಗಳು ಇದ್ದೇ ಇರುತ್ತದೆ. ಅಪ್ಪ, ಮಗ, ಅಪ್ಪ ಹೀಗೆ ನಗರದಲ್ಲಿ ಎಲ್ಲರೂ ತಮ್ಮ ತಮ್ಮ ಕಾರುಗಳಲ್ಲಿ ಓಡಾಡುತ್ತಿರುತ್ತಾರೆ.

ಈ ಎಲ್ಲದರಿಂದಾಗಿ ವಾಹನ ದಟ್ಟಣೆ ವಿಪರೀತವಾಗಿ ಹೆಚ್ಚುತ್ತಿದೆ. ಕೆಲವೇ ಕೆಲವು ಕೀ.ಮೀ. ದೂರವನ್ನು ಕ್ರಮಿಸಲು ಗಂಟೆಗಟ್ಟಲೆ ತನಕ ಟ್ರಾಫಿಕ್ ನಲ್ಲಿ ಅಲೆದಾಡಬೇಕಾಗುತ್ತದೆ. ಇದರಿಂದ ವಿನಾ ಕಾರಣ ಇಂಧನ ಪೋಲಾಗುತ್ತಿದೆ.

ಅಂದ ಹಾಗೆ ಮುಂಬೈ ಹೈಕೋರ್ಟ್ ಇಂತಹದೊಂದು ಮಹತ್ವ ಸಲಹೆ ಮಾಡಿರುವುದು ಕೇವಲ ಟ್ರಾಫಿಕ್ ನಿಯಂತ್ರಣಕ್ಕೆ ಮಾತ್ರವಲ್ಲ. ಬದಲಾಗಿ ಒಳನಾಡು ಜಲ ಸಾರಿಗೆಯನ್ನು ಪ್ರೋತ್ಸಾಹಿಸಲಿದೆ.

ನಗರದಲ್ಲಿ ವಾಹನ ನಿಲುಗೊಡೆಗೊಳಿಸಲು ಜಾಗದ ಅಭಾವ ಎದುರಾದ ಹಿನ್ನಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸುತ್ತಾ ಸಲಹೆ ಕೊಟ್ಟಿರುವ ಮುಂಬೈ ಹೈಕೋರ್ಟ್, ವಾಹನ ದಟ್ಟಣೆ ನಿಯಂತ್ರಣಕ್ಕೆ ಬದಲಿ ವ್ಯವಸ್ಥೆ ಕಂಡುಕೊಳ್ಳುವಂತೆ ಸೂಚಿಸಿದೆ.

ನಗರ ನಿವಾಸಿಗಳ ಬಹುತೇಕ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಕಾರುಗಳಿವೆ. ಪಾರ್ಕಿಂಗ್ ಜಾಗದ ಅಭಾವದಿಂದಾಗಿ ಅನಧಿಕೃತ ಪಾರ್ಕಿಂಗ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ವಾಹನ ದಟ್ಟಣೆಯು ವಿಪರೀತವಾಗಿದೆ.

ಒಳನಾಡು ಜಲ ಸಾರಿಗೆ ವ್ಯವಸ್ಥೆ ಜಾರಿಗೆ ಬರುವುದರಿಂದ ಜಲಸಾರಿಗೆ ರಫ್ತು ಹೆಚ್ಚಾಗಲಿದ್ದು, ಸರಕುಗಳ ವೆಚ್ಚ ಕಡಿಮೆಯಾಗಲಿದೆ. ಇದರ ಪರಿಣಾಮ ಟ್ರಾಫಿಕ್ ನಲ್ಲೂ ಇಳಿಕೆಯುಂಟಾಗಲಿದೆ.

ಇಂತಹದೊಂದು ನೀತಿ ನಮ್ಮ ಬೆಂಗಳೂರಿನಲ್ಲೂ ಜಾರಿಗೆ ಬರುವುದಾದ್ದಲ್ಲಿ ಹೇಗಿರಬಹುದು? ದೈನಂದಿನ ಟ್ರಾಫಿಕ್ ನಿಂದ ಬೆಸತ್ತು ಹೋಗಿರುವ ಜನ ಸಾಮಾನ್ಯರು. ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಿರಿ.


Click it and Unblock the Notifications








