ಸೌಂದರ್ಯ ವರ್ಧಿಸಿದ ಮಾರುತಿ ಆಲ್ಟೊ 800 ಭರ್ಜರಿ ಬಿಡುಗಡೆ

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಆಲ್ಟೊ 800 ಫೇಸ್ ಲಿಫ್ಟ್ ಮಾದರಿಯನ್ನು ದೇಶದ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಬಿಡುಗಡೆಗೊಳಿಸಿದೆ.

'ಇಂಡಿಯಾ ಕಿ ಪಹೇಲಿ ಸವಾರಿ' ಎಂದು ಗುರುತಿಸಿಕೊಂಡಿರುವ ನೂತನ ಆಲ್ಟೊ 800 ಕಾರಿನ ಹೊರಮೈ ಮತ್ತು ಒಳಮೈಯಲ್ಲಿ ಹೆಚ್ಚು ಸ್ಟೈಲಿಷ್ ಹಾಗೂ ಒಟ್ಟಾರೆ ಸೌಂದರ್ಯ ವರ್ಧನೆಯತ್ತ ಆದ್ಯತೆ ಕೊಡಲಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

 • ಸ್ಟ್ಯಾಂಡರ್ಡ್: 2,49,000 ರು.
 • ಸ್ಟ್ಯಾಂಡರ್ಡ್ (ಐಚ್ಛಿಕ): 2,55,000 ರು.
 • ಎಲ್ ಎಕ್ಸ್: 2,83,000 ರು.
 • ಎಲ್ ಎಕ್ಸ್ (ಐಚ್ಛಿಕ): 2,89,000 ರು.
 • ಎಲ್ ಎಕ್ಸ್ ಐ : 3,09,000 ರು.
 • ಎಲ್ ಎಕ್ಸ್ ಐ (ಐಚ್ಛಿಕ): 3,15,000 ರು.
 • ಎಲ್ ಎಕ್ಸ್ ಐ ಸಿಎನ್‌ಜಿ: 3,70,000 ರು.
 • ಎಲ್ ಎಕ್ಸ್ ಐ ಸಿಎನ್‌ಜಿ (ಐಚ್ಛಿಕ): 3,76,000 ರು.
 • ವಿಎಕ್ಸ್‌ಐ: 3,28,000 ರು.
 • ವಿಎಕ್ಸ್‌ಐ (ಐಚ್ಛಿಕ): 3,34,000 ರು.
ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

 • ಸಾಮರ್ಥ್ಯ: 799 ಸಿಸಿ,
 • ವಿಧ: 3 ಸಿಲಿಂಡರ್,
 • ಇಂಧನ: ಪೆಟ್ರೋಲ್/ಸಿಎನ್‌ಜಿ
 • ಪವರ್: 48 ಅಶ್ವಶಕ್ತಿ
 • ತಿರುಗುಬಲ: 69 ಎನ್‌ಎಂ
ಸೌಂದರ್ಯ ವರ್ಧಿಸಿದ ಮಾರುತಿ ಆಲ್ಟೊ 800 ಭರ್ಜರಿ ಬಿಡುಗಡೆ

ಮೂಲಗಳ ಪ್ರಕಾರ ನೂತನ ಆಲ್ಟೊ 800 ಶೇಕಡಾ 9ರಷ್ಟು ಹೆಚ್ಚು ಇಂಧನ ಕ್ಷಮತೆಯನ್ನು ನೀಡಲಿದೆ. ಅಲ್ಲದೆ ಎರಡು ಹೊಸ ಬಣ್ಣದ ಆಯ್ಕೆಯೂ ಇದರಲ್ಲಿರುತ್ತದೆ.

ಸೌಂದರ್ಯ ವರ್ಧಿಸಿದ ಮಾರುತಿ ಆಲ್ಟೊ 800 ಭರ್ಜರಿ ಬಿಡುಗಡೆ

ನೂತನ ಆಲ್ಟೊ 800 ಫೇಸ್ ಲಿಫ್ಟ್ ಮಾದರಿಯು ಪ್ರತಿ ಲೀಟರ್ ಗೆ 24.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಸೌಂದರ್ಯ ವರ್ಧಿಸಿದ ಮಾರುತಿ ಆಲ್ಟೊ 800 ಭರ್ಜರಿ ಬಿಡುಗಡೆ

ಅದೇ ರೀತಿ ಸಿಎನ್ ಜಿ ಆವೃತ್ತಿಯು ಪ್ರತಿ ಕೆ.ಜಿ.ಗೆ 33.44 ಕೀ.ಮೀ. ಮೈಲೇಜ್ ನೀಡಲಿದೆ. ಇಲ್ಲೂ ಶೇಕಡಾ 10ರಷ್ಟು ಇಂಧನ ಕ್ಷಮತೆಯಲ್ಲಿ ಹೆಚ್ಚಳ ಕಂಡುಬಂದಿದೆ.

ಸೌಂದರ್ಯ ವರ್ಧಿಸಿದ ಮಾರುತಿ ಆಲ್ಟೊ 800 ಭರ್ಜರಿ ಬಿಡುಗಡೆ

ಕಾರಿನ ಮುಂಭಾಗದಲ್ಲಿ ನೂತನ ಆಲ್ಟೊ 'ನ್ಯೂ ಏರೋ ಎಡ್ಜ್ ಡಿಸೈನ್' ತಂತ್ರಗಾರಿಕೆಯನ್ನು ಪಡೆದಿದೆ. ಬಂಪರ್ ಮತ್ತು ಹೆಚ್ಚು ಕ್ರೀಡಾತ್ಮಕ ಶೈಲಿಯನ್ನು ಮೈಗೂಡಿಸಿದೆ.

ಸೌಂದರ್ಯ ವರ್ಧಿಸಿದ ಮಾರುತಿ ಆಲ್ಟೊ 800 ಭರ್ಜರಿ ಬಿಡುಗಡೆ

ಒಟ್ಟಾರೆಯಾಗಿ ಕಾರಿನ ಹೊರಮೈಯು 35 ಎಂಎಂಗಳಷ್ಟು ಹೆಚ್ಚು ಉದ್ದವನ್ನು ಪಡೆದಿದೆ. ಹೊಸತಾದ ಹೆಡ್ ಲ್ಯಾಂಪ್, ಫ್ರಂಟ್ ಫಾಗ್ ಲ್ಯಾಂಪ್ ಮುಂತಾದ ವಿಶಿಷ್ಟತೆಗಳನ್ನು ಕಾಣಬಹುದಾಗಿದೆ.

ಸೌಂದರ್ಯ ವರ್ಧಿಸಿದ ಮಾರುತಿ ಆಲ್ಟೊ 800 ಭರ್ಜರಿ ಬಿಡುಗಡೆ

ನೂತನ ಆಲ್ಟೊ ಮೊಜಿಟೊ ಗ್ರೀಮ್ ಮತ್ತು ಸೆರೂಲಿಯನ್ ಬ್ಲೂಗಳೆಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವುದು. ಅಲ್ಲದೆ ಗ್ರಾಹಕರಿಗಾಗಿ ಕಪ್ಪು ಬೂದು ಬಣ್ಣದ ಒಳಮೈ ಆಯ್ಕೆಗಳು ಸಿಗಲಿದೆ. ಹಿಂದುಗಡೆ ಸೀಟುಗಳನ್ನು ಪರಿಷ್ಕೃತಗೊಳಿಸಲಾಗಿದ್ದು, ಹೆಡ್ ರೆಸ್ಟ್ ಸಹ ಲಭ್ಯವಾಗುವುದು.

ಸೌಂದರ್ಯ ವರ್ಧಿಸಿದ ಮಾರುತಿ ಆಲ್ಟೊ 800 ಭರ್ಜರಿ ಬಿಡುಗಡೆ

ಕಡಿಮೆ ಆರ್‌ಪಿಎಂನಲ್ಲೂ ಅತ್ಯುತ್ತಮ ತಿರುಗುಬಲ ನೀಡಲಿದ್ದು, ಈ ಮೂಲಕ ಪದೇ ಪದೇ ಗೇರ್ ಬದಲಾಯಿಸುವ ತೊಂದರೆ ಎದುರಾಗಲಾರದು. ಅಲ್ಲದೆ ಎಂಜಿನ್ ಬಾಳ್ವಿಕೆ ಹೆಚ್ಚಿಸುವತ್ತಲೂ ಗಮನ ಹರಿಸಲಾಗಿದೆ.

ಸೌಂದರ್ಯ ವರ್ಧಿಸಿದ ಮಾರುತಿ ಆಲ್ಟೊ 800 ಭರ್ಜರಿ ಬಿಡುಗಡೆ

ಚಾಲಕ ಬದಿಯ ಏರ್ ಬ್ಯಾಗ್ ಐಚ್ಛಿಕವಾಗಿ ಪಡೆಯಲಿರುವ ನೂತನ ಆಲ್ಟೊ 800, ಎಲ್ಲ ವೆರಿಯಂಟ್ ಗಳಲ್ಲೂ ಪ್ರಯಾಣಿಕ ಬದಿಯ ಔಟ್ ಸೈಡ್ ರಿಯರ್ ವ್ಯೂ ಮಿರರ್ ಸ್ಟ್ಯಾಂಡರ್ಡ್ ಆಗಿ ಗಿಟ್ಟಿಸಿಕೊಳ್ಳಲಿದೆ. ಅಲ್ಲದೆ ಟಾಪ್ ಎಂಡ್ ವೆರಿಯಂಟ್ ಗಳಲ್ಲಿ ಚೈಲ್ಡ್ ಚಾಕ್, ರಿಮೋಟ್ ಕೀಲೆಸ್ ಎಂಟ್ರಿ, ಬಾಟಲಿ ಹೋಲ್ಡರ್ ಮುಂತಾದ ವ್ಯವಸ್ಥೆಗಳನ್ನು ಪಡೆಯಲಿದೆ.

ಬಣ್ಣಗಳು

ಬಣ್ಣಗಳು

 • ಸುಪೀರಿಯರ್ ವೈಟ್
 • ಸಿಲ್ಕಿ ಸಿಲ್ವರ್
 • ಗ್ರ್ಯಾನೈಟ್ ಗ್ರೇ
 • ಬ್ಲೇಜಿಂಗ್ ರೆಡ್
 • ಸೆರೂಲಿಯನ್ ಬ್ಲೂ (ಹೊಸತು)
 • ಮೊಜಿಟೊ ಗ್ರೀನ್ (ಹೊಸತು)
ಆಯಾಮ (ಎಂಎಂ)

ಆಯಾಮ (ಎಂಎಂ)

 • ಉದ್ದ: 3430
 • ಅಗಲ: 1490
 • ಎತ್ತರ: 1475
 • ಚಕ್ರಾಂತರ: 2360
 • ಗ್ರೌಂಡ್ ಕ್ಲಿಯರನ್ಸ್: 160
English summary
New Maruti Suzuki Alto 800 Launched, Prices Start At Rs. 2.49 Lakhs
Story first published: Wednesday, May 18, 2016, 17:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark